Paris Olympics 2024 | ಭಾರತೀಯ ಕ್ರೀಡಾಪಟುಗಳ ಮೊದಲ ದಿನದ ವೇಳಾಪಟ್ಟಿ
x
ಶ್ರೀರಾಮ್‌ ಬಾಲಾಜಿ

Paris Olympics 2024 | ಭಾರತೀಯ ಕ್ರೀಡಾಪಟುಗಳ ಮೊದಲ ದಿನದ ವೇಳಾಪಟ್ಟಿ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಮೊದಲ ದಿನದಂದು ಟೆನಿಸ್, ಟೇಬಲ್ ಟೆನ್ನಿಸ್, ಹಾಕಿ, ಶೂಟಿಂಗ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಭಾಗವಹಿಸಲಿದ್ದಾರೆ.


ಪ್ಯಾರಿಸ್ ಒಲಿಂಪಿಕ್ಸ್ 2024 ರ ಶುಕ್ರವಾರ ಆರಂಭಗೊಂಡಿದ್ದು, ಶನಿವಾರ (ಜುಲೈ 27) ಭಾರತ ತಂಡದ ವೇಳಾಪಟ್ಟಿ ಇಲ್ಲಿದೆ.

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಗುಂಪು ಪಂದ್ಯ: ಲಕ್ಷ್ಯ ಸೇನ್ ವಿರುದ್ಧ ಕೆವಿನ್ ಕಾರ್ಡನ್ (ಗ್ವಾಟೆಮಾಲಾ) (ರಾತ್ರಿ 7:10 ಐಎಸ್‌ಟಿ) *ಪುರುಷರ ಡಬಲ್ಸ್ ಗುಂಪು ಪಂದ್ಯ: ಸಾತ್ವಿಕ್‌ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿರುದ್ಧ ಲ್ಯೂಕಾಸ್ ಕಾರ್ವಿ ಮತ್ತು ರೊನಾನ್ ಲಾಬರ್ (ಫ್ರಾನ್ಸ್) (ರಾತ್ರಿ 8 ಗಂಟೆಗೆ ಐಎಸ್‌ಟಿ).

ಮಹಿಳೆಯರ ಡಬಲ್ಸ್ ಗುಂಪು ಪಂದ್ಯ: ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ವಿರುದ್ಧ ಕಿಮ್ ಸೊ ಯೊಂಗ್ ಮತ್ತು ಕಾಂಗ್ ಹೀ ಯೊಂಗ್ (ಕೊರಿಯಾ) (11:50 ಐಎಸ್‌ಟಿ ).

ಬಾಕ್ಸಿಂಗ್: ಮಹಿಳೆಯರ 54 ಕೆಜಿ ಆರಂಭಿಕ ಸುತ್ತಿನ ಪಂದ್ಯ: ಪ್ರೀತಿ ಪವಾರ್ ವಿರುದ್ಧ ಥಿ ಕಿಮ್ ಆನ್ ವೊ (ವಿಯೆಟ್ನಾಂ) (ಬೆಳಗ್ಗೆ 12.05, ಜುಲೈ 28)

ಹಾಕಿ: ಗುಂಪು ಬಿ ಪಂದ್ಯ: ಭಾರತ ವಿರುದ್ಧ ನ್ಯೂಜಿಲೆಂಡ್ (ರಾತ್ರಿ 9 ಗಂಟೆಗೆ ಐಎಸ್‌ಟಿ).

ರೋಯಿಂಗ್: ಪುರುಷರ ಸಿಂಗಲ್ ಸ್ಕಲ್ಸ್: ಪನ್ವರ್ ಬಾಲರಾಜ್ (ಮಧ್ಯಾಹ್ನ 12:30 ಐಎಸ್‌ಟಿ )

ಟೇಬಲ್ ಟೆನ್ನಿಸ್: ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು: ಹರ್ಮೀತ್ ದೇಸಾಯಿ ವಿರುದ್ಧ ಜೋರ್ಡಾನ್‌ನ ಜೈದ್ ಅಬೋ ಯಮನ್ (ರಾತ್ರಿ 7:15 ಐಎಸ್‌ಟಿ )

ಟೆನ್ನಿಸ್: ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯ: ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ವಿರುದ್ಧ ಎಡ್ವರ್ಡ್ ರೋಜರ್-ವಾಸೆಲಿನ್ ಮತ್ತು ಫ್ಯಾಬಿಯನ್ ರೆಬೌಲ್ (ಫ್ರಾನ್ಸ್) (ಮಧ್ಯಾಹ್ನ 3:30 ಐಎಸ್‌ಟಿ)

ಶೂಟಿಂಗ್: 10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್/ಎಲವೆನಿಲ್ ವಲರಿವನ್, ಅರ್ಜುನ್ ಬಾಬುತಾ/ರಮಿತಾ ಜಿಂದಾಲ್ (12:30 ಐಎಸ್‌ಟಿ). *10 ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಅರ್ಜುನ್ ಸಿಂಗ್ ಚೀಮಾ ಮತ್ತು ಸರಬ್ಜೋತ್ ಸಿಂಗ್ (ಮಧ್ಯಾಹ್ನ 2 ಗಂಟೆಗೆ ಐಎಸ್‌ಟಿ ). *10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ: ಮನು ಭಾಕರ್ ಮತ್ತು ರಿದಮ್ ಸಾಂಗ್ವಾನ್ (ಸಂಜೆ 4 ಗಂಟೆಗೆ ಐಎಸ್‌ಟಿ).

Read More
Next Story