
ಎಐ ಆಧಾರಿತ ಚಿತ್ರ
ಆದಾಯ ತೆರಿಗೆ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಭರ್ಜರಿ ಉದ್ಯೋಗಾವಕಾಶ...
ತೆರಿಗೆ ಸಹಾಯಕ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು. ಸ್ಟೆನೋಗ್ರಾಫರ್ ಗ್ರೇಡ್-II ಹುದ್ದೆಗೆ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು.
ಆದಾಯ ತೆರಿಗೆ ಇಲಾಖೆ ಸೇರಬಯಸುವ ಕ್ರೀಡಾಪಟುಗಳಿಗೆ ಇದೀಗ ಸುವರ್ಣಾವಕಾಶವೊಂದು ದೊರೆತಿದೆ. ತೆರಿಗೆ ಸಹಾಯಕ, ಸ್ಟೆನೋಗ್ರಾಫರ್ ಗ್ರೇಡ್-II ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಸೇರಿದಂತೆ 97 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂಬೈನಲ್ಲಿ ನಿಯೋಜಿಸಲಾಗುತ್ತದೆ ಮತ್ತು 7ನೇ ವೇತನ ಆಯೋಗದಂತೆ ವೇತನ ನಿಗದಿಪಡಿಸಲಾಗಿದ್ದು, ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಿಗೆ ಸರ್ಕಾರಿ ಹುದ್ದೆಯನ್ನು ಪಡೆಯಲು ಸಹಕಾರಿಯಾಗಿದೆ.
ಕ್ರೀಡಾ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಥ್ಲೆಟಿಕ್ಸ್, ಈಜು, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್, ಲಾನ್ ಟೆನಿಸ್, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ, ಫುಟ್‌ಬಾಲ್, ಬಿಲಿಯರ್ಡ್ಸ್, ಸ್ಕ್ವಾಷ್, ಯೋಗಾಸನ, ಪ್ಯಾರಾ ಸ್ಪೋರ್ಟ್ಸ್, ಬಾಕ್ಸಿಂಗ್‌ನಲ್ಲಿ ದೇಶ, ರಾಜ್ಯ ಅಥವಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ತೆರಿಗೆ ಸಹಾಯಕ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು. ಸ್ಟೆನೋಗ್ರಾಫರ್ ಗ್ರೇಡ್-II ಹುದ್ದೆಗೆ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ 10 ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?
ಆದಾಯ ತೆರಿಗೆ ವಿಭಾಗದ ಸಹಾಯಕ 47 ಹುದ್ದೆಗಳು, ಟಾಸ್ಕಿಂಗ್ ಸಿಬ್ಬಂದಿ 38 ಹುದ್ದೆ ಹಾಗೂ ಸ್ಟೆನೋಗ್ರಾಫರ್ ಗ್ರೇಡ್-II ಹುದ್ದೆಗೆ 12 ಸೇರಿದಂತೆ ಒಟ್ಟು 97 ಹುದ್ದೆಗಳು ಖಾಲಿ ಇವೆ.
ವೇತನ ಹಾಗೂ ಭತ್ಯೆ
ತೆರಿಗೆ ಸಹಾಯಕ ಮತ್ತು ಸ್ಟೆನೋಗ್ರಾಫರ್ ಗ್ರೇಡ್-II ಹುದ್ದೆಗಳಿಗೆ 25,500 ರೂ. ನಿಗದಿಪಡಿಸಲಾಗಿದ್ದು, ಡಿಎ ಮತ್ತು ಎಚ್‌ಆರ್‌ಎ ಜೊತೆಗೆ, ಆರಂಭಿಕ ಒಟ್ಟು ವೇತನವು ತಿಂಗಳಿಗೆ 50,000 ರೂ. ರಿಂದ 55,000 ರೂ. ದೊರೆಯಲಿದೆ. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಗೆ 18,000 ರೂ. ನಿಗದಿಪಡಿಸಿದ್ದು, ಭತ್ಯೆಗಳನ್ನು ಒಳಗೊಂಡಂತೆ, ಆರಂಭಿಕ ಒಟ್ಟು ವೇತನವು ತಿಂಗಳಿಗೆ 32,000 ರೂ. ದೊರೆಯಲಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ವಿಶೇಷ ರಜೆ ಮತ್ತು ಪ್ರೋತ್ಸಾಹ ನೀಡಲಾಗುವುದು.
ವಯೋಮಿತಿ
ಸ್ಟೆನೋಗ್ರಾಫರ್ ಮತ್ತು ತೆರಿಗೆ ಸಹಾಯಕ ಹುದ್ದೆಗಳಿಗೆ 27 ವರ್ಷ, ಎಂಟಿಎಸ್ ಹುದ್ದೆಗಳಿಗೆ 25 ವರ್ಷ ನಿಗದಿಪಡಿಸಲಾಗಿದ್ದು, ಸಾಮಾನ್ಯ ಅಥವಾ ಹಿಂದುಳಿದ ವರ್ಗದ ಕ್ರೀಡಾಪಟುಗಳಿಗೆ 5 ವರ್ಷಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹಾಗೂ ಆಯ್ಕೆ ಪ್ರಕ್ರಿಯೆ
ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ incometaxmumbai.gov.in ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕ್ರೀಡಾ ಅರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ದಾಖಲೆಗಳನ್ನು ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

