ಚುನಾವಣೆ ಋತು: ಆಹಾರ ಅಭದ್ರತೆಯಂಥ ವಿಷಯಕ್ಕೆ ಗಮನ ಅಗತ್ಯ
x

ಚುನಾವಣೆ ಋತು: ಆಹಾರ ಅಭದ್ರತೆಯಂಥ ವಿಷಯಕ್ಕೆ ಗಮನ ಅಗತ್ಯ

2 ಜಿ ಹಗರಣ ಒಂದು ಕಲ್ಪನೆ: ಚುನಾವಣೆ ಬಾಂಡ್‌ ವಿಷಯ ಮುಖ್ಯ. ಆದರೆ, ಅದೇ ಎಲ್ಲವೂ ಅಲ್ಲ


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಚುನಾವಣಾ ಬಾಂಡ್‌ಗಳ ಹೊರತಾಗಿ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಅನಿವಾರ್ಯವನ್ನು ಪ್ರತಿಪಕ್ಷಗಳಿಗೆ ತೋರಿಸಿದೆ. ಆರ್ಥಿಕ ಅಪರಾಧಗಳ ನೆಪ ಹೂಡಿ ಪ್ರತಿಪಕ್ಷದ ನಾಯಕರನ್ನು ಬಂಧಿಸುತ್ತಿರುವುದರಿಂದ, ಅವರಿಗೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಆಗುತ್ತಿಲ್ಲ ಮತ್ತು ಚುನಾವಣೆಗೆ ಮುನ್ನ ಅವರ ಮಾನಹಾನಿ ಮಾಡಲಾಗುತ್ತಿದೆ.

ಈ ಕ್ರಮಗಳು ಲಕ್ಷ್ಯವನ್ನು ಚುನಾವಣೆ ಪ್ರಚಾರದಿಂದ ಬಂಧನದ ಸಿಂಧುತ್ವ, ಬಿಜೆಪಿಯ ಎರಡು ಅವಧಿಗಳಲ್ಲಿ ಸರ್ಕಾರದ ಸಾಧನೆ ಅಥವಾ ಇತರ ಚರ್ಚೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಸಾಮೂಹಿಕ ಯೋಗಕ್ಷೇಮವನ್ನು ನಿರ್ಧರಿಸುವ ನಿಯತಾಂಕಗಳಾದ ಹಸಿವು (ಜಾಗತಿಕ ಹಸಿವು ಸೂಚ್ಯಂಕದಲ್ಲಿ 107 ನೇ ಸ್ಥಾನದಿಂದ 111 ನೇ ಸ್ಥಾನಕ್ಕೆ ಕುಸಿತ), ಭ್ರಷ್ಟಾಚಾರ (ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 87ನೇ ಸ್ಥಾನದಿಂದ 93 ನೇ ಸ್ಥಾನಕ್ಕೆ ಕುಸಿತ) ಮತ್ತು ಅಸಮಾನತೆ (143 ದೇಶಗಳಲ್ಲಿ 126 ನೇ ಸ್ಥಾನ. ಪಾಕಿಸ್ತಾನಕ್ಕಿಂತ ಕೆಳಗೆ) ನಿವಾರಣೆಯಲ್ಲಿ ದೇಶದ ಅವನತಿಯನ್ನು ಮುಚ್ಚಿಬಿಡುತ್ತದೆ.

ವೃಥಾ ಕಳಂಕ: ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಎಲ್ಲರೂ ನಿರಪರಾಧಿಗಳು ಎನ್ನುವ ಮಾತು ಇದೆ. ಆದರೆ, ಸುಳ್ಳು ಅಥವಾ ಸಾಬೀತಾಗದ ಆರೋಪದಿಂದ ಒಂದು ದಶಕ ಮತ್ತು ಅದಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿರುವವರಿಗೆ ಈ ಮಾತಿನಿಂದ ಯಾವುದೇ ಪ್ರಯೋಜನ ಆಗು ವುದಿಲ್ಲ.ಅಥವಾ, ತಪ್ಪಿತಸ್ಥರಲ್ಲ ಎಂದು ಘೋಷಿಸುವ ಕಾನೂನು ಆರೋಪದ ಕಳಂಕವನ್ನು ಸಂಪೂರ್ಣವಾಗಿ ತೊಡೆಯುವುದಿಲ್ಲ.

ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಇತರ ಆರೋಪಿಗಳ ವಿರುದ್ಧದ 2ಜಿ ಹಗರಣದ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ, ಪ್ರಾಸಿಕ್ಯೂಷನ್‌ ಯಾವುದೇ ಹಗರಣ ಅಥವಾ ಅಕ್ರಮ ನಡೆದಿದೆ ಎಂದು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ತೀರ್ಪು ನೀಡಿತು. ಆದರೆ, ರಾಷ್ಟ್ರದ ಸಾಮೂಹಿಕ ನೆನಪಿನಲ್ಲಿ ತರಂಗಾಂತರ ಹಂಚಿಕೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ 1,76,000 ಕೋಟಿ ರೂ. ನಷ್ಟವಾಗಿದೆ ಎಂಬ ಕಲ್ಪನೆ ಉಳಿದುಬಿಟ್ಟಿದೆ.

ಕಾಲ್ಪನಿಕ ನಷ್ಟ: 1,76,000 ಕೋಟಿ ರೂ.ನಷ್ಟ ಆಗಿದೆ ಎಂಬುದನ್ನು ಆಗಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ಅವರ ತಪ್ಪು ದಾರಿಗೆಳೆಯುವ ವರದಿಯಿಂದ ಪಡೆದುಕೊಳ್ಳಲಾಗಿದೆ. ಇತ್ತೀಚೆಗೆ ಮೋದಿ ಸರ್ಕಾರ ತಂದ ಶ್ವೇತ ಪತ್ರದಲ್ಲೂ ಇದು ಉಳಿದುಕೊಂಡುಬಿಟ್ಟಿದೆ.

ಈ ಅಂಕಿ ಅಂಶಗಳು ಮೂರು ತಪ್ಪು ಊಹೆಗಳನ್ನು ಆಧರಿಸಿವೆ: ಒಂದು, ತರಂಗಾಂತರದಂಥ ಸಂಪನ್ಮೂಲವನ್ನು ನಿಯೋಜಿಸುವ ಏಕೈಕ ಕಾನೂನುಬದ್ಧ ವಿಧಾನವೆಂದರೆ ಹರಾಜು; ಎರಡು, 3ಜಿ ತರಂಗಾಂತರದ 5ಗಿಗಾ ಹರ್ಟ್ಜ್‌ಗೆ ನಡೆದ ಹರಾಜಿನ ಮೊತ್ತವನ್ನು ಆಧರಿಸಿ, 2ಜಿ ತರಂಗಾಂತರದ ಪ್ರತಿ ಹರ್ಟ್ಜ್‌ ನ ಮೌಲ್ಯವನ್ನು ನಿರ್ಣಯಿಸುವುದು ಸೂಕ್ತ ವಿಧಾನ ಮತ್ತು ಮೂರು, ಅಂತಹ ತರಂಗಾಂತರ ಹಂಚಿಕೆ ಯಿಂದ ಸರ್ಕಾರಕ್ಕೆ ಸಂಗ್ರಹವಾದ ಶೂನ್ಯ ಆದಾಯ. ಈ ಮೂರು ಊಹೆಗಳು ಕೇವಲ ತಪ್ಪಾಗಿರಲಿಲ್ಲ; ಮೂರ್ಖತನ ಆಗಿದ್ದವು.

ಟೆಲಿಕಾಂ ಸಮಸ್ಯೆ: ತರಂಗಾಂತರದ ಹರಾಜು ಇಲ್ಲದೆ ಪಡೆದ 122 ಪರವಾನಗಿಗಳನ್ನು ರದ್ದುಗೊಳಿಸಬೇಕೆಂಬ ವಿಭಾಗೀಯ ಪೀಠದ ಆದೇಶಕ್ಕೆ ಸಂಪನ್ಮೂಲಗಳ ಹರಾಜು ಏಕೈಕ ನ್ಯಾಯೋಚಿತ ಮಾರ್ಗವೆಂದು ಪರಿಗಣಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ನಿರ್ಣಾಯಕ ತೀರ್ಪು ನೀಡಿದೆ. ಬ್ರಾಡ್‌ಬ್ಯಾಂಡ್‌ ಅತಿ ಹೆಚ್ಚು ವ್ಯಾಪಿಸಿರುವ ಮತ್ತು ತಲಾವಾರು ಡೇಟಾ ಬಳಕೆ ಹೊಂದಿರುವ ಜಪಾನ್ ಅಥವಾ ದಕ್ಷಿಣ ಕೊರಿಯಾದಲ್ಲಿ ಹರಾಜಿನ ಮೂಲಕ ತರಂಗಾಂತರವನ್ನುನಿಯೋಜಿಸುವುದಿಲ್ಲ.

2ಜಿ ಸೇವೆಗಳಿಗೆ ಹೋಲಿಸಿದರೆ, 3ಜಿಯ ಕಾರ್ಯಕ್ಷಮತೆ ಹೆಚ್ಚು ಇದೆ. ಕರೆ ಮಾಡಿದವ ಮತ್ತು ಕರೆ ತೆಗೆದುಕೊಂಡವರ ನಡುವೆ ಸಂಪರ್ಕ ಸಾಧಿಸಲು, ಕರೆ ಅವಧಿಯಲ್ಲಿ ತರಂಗಾಂತರದ ಆ ಭಾಗವನ್ನು ಬಳಸಿಕೊಳ್ಳುವುದು ಮತ್ತು ತರಂಗಾಂತರದ ಯಾವುದೇ ಇತರ ಬಳಕೆಯಲ್ಲಿ ಕ್ಷಮತೆ ಹೆಚ್ಚಿದೆ. ಧ್ವನಿ ವಿಡಿಯೋವನ್ನು ದತ್ತಾಂಶದ ಪ್ಯಾಕೆಟ್‌ಗಳಾಗಿ ವಿಭಜಿಸಲಾಗಿದೆ ಮತ್ತು ಈ ಪ್ಯಾಕೆಟ್‌ಗಳನ್ನು ತರಂಗಗಳ ಮೂಲಕ ಕಳುಹಿಸಲಾಗುತ್ತದೆ. ತರಂಗಾಂತರವನ್ನು ಬಳಸಿಕೊಳ್ಳುವ ಯಾವುದೇ ಮುಚ್ಚಿದ ಸರ್ಕೀಟ್‌ ಇರುವುದಿಲ್ಲ.

2 ಜಿ ಮತ್ತು 3 ಜಿ: 3ಜಿ ಟೆಲಿಫೋನಿಯು ಪ್ರತಿ ಗಿಗಾ ಹರ್ಟ್ಜ್‌ ತರಂಗಾಂತರಕ್ಕೆ 2ಜಿ ಗಿಂತ ಹೆಚ್ಚು ಧ್ವನಿ ಮತ್ತು ವಿಡಿಯೋ ನಿರ್ವಹಿಸಬಲ್ಲದು. ಇದು 3ಜಿ ತರಂಗಾಂತರವನ್ನು 2ಜಿ ಗಿಂತ ಹೆಚ್ಚು ಮೌಲ್ಯಯುತವಾಗಿಸಿದೆ. ತರಂಗಾಂತರದ ಹರಾಜು ವಿನ್ಯಾಸವು ಹೇಗಿದೆಯೆಂದರೆ, ಅದು ಕಾಲಾನಂತರದಲ್ಲಿ ಎಷ್ಟು ಹೆಚ್ಚುವರಿ ತರಂಗಾಂತರ ಲಭ್ಯವಿರುತ್ತದೆ ಎಂಬ ಕುರಿತು ಮುಂದಾಲೋಚನೆಯಿಲ್ಲದೆ ಬಿಡ್ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿತು.

ಮುಂಗಡ ಪಾವತಿಯ ಅನುಪಸ್ಥಿತಿಯು ತರಂಗಾಂತರವನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಅರ್ಥವಲ್ಲ. ಪರವಾನಗಿ ಶುಲ್ಕ ಮತ್ತು ತರಂಗಾಂತರದ ಬಳಕೆ ಶುಲ್ಕ ಎರಡನ್ನೂ ಆದಾಯದ ಪಾಲು ಅಥವಾ ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್)ದ ಪಾಲು ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಟೆಲಿಕಾಂ ಕಂಪನಿಗಳಿಗಳಿಂದ ಸಾವಿರಾರು ಕೋಟಿ ರೂ. ಎಜಿಆರ್‌ ಸಂಗ್ರಹಿಸಿದೆ.

ಟೆಲಿಕಾಂ ವಿವಾದ: ಮುಂಗಡ ಶುಲ್ಕಗಳಿಲ್ಲದ ತರಂಗಾಂತರದ ಹಂಚಿಕೆ ನೀತಿ ಮತ್ತು ಅತಿ ಕಡಿಮೆ ಶುಲ್ಕದಿಂದ ಟೆಲಿಕಾಂ ಕ್ಷೇತ್ರದ ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಾಯಿತು. ಕಂಪ್ಯೂಟರೀಕೃತ ದೂರಸಂಪರ್ಕ ಜಾಲಗಳ ಹರಡುವಿಕೆಯಿಂದ ಖಾಸಗಿ ವಲಯ ಮಾತ್ರವಲ್ಲದೆ, ತೆರಿಗೆ ಇಲಾಖೆಯಲ್ಲೂ ತೆರಿಗೆ ಸಂಗ್ರಹ ದಕ್ಷತೆ ಸುಧಾರಿಸಿತು. ಸಿಎಎಜಿ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ.

ಎಜಿಆರ್‌ ಕೇವಲ ಟೆಲಿಕಾಂ ಆದಾಯವನ್ನು ಒಳಗೊಂಡಿದೆಯೇ ಅಥವಾ ಟೆಲಿಕಾಂ ತರಂಗಾಂತರ ಮತ್ತು ಪರವಾನಗಿಯ ಸಹಾಯ‌ ವಿಲ್ಲದೆ ಗಳಿಸಿದ ಆದಾಯವನ್ನು ಒಳಗೊಂಡಿದೆಯೇ ಎಂಬ ಕುರಿತು ಟೆಲಿಕಾಂ ಕಂಪನಿಗಳ ವಿವಾದದಲ್ಲಿ ಸುಪ್ರೀಂ ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಟೆಲಿಕಾಂ ನಿಯಂತ್ರಕ ಟ್ರಾಯ್(TRAI) ನಿಂದ ಅನುಮೋದಿಸಲ್ಪಟ್ಟ ಆದಾಯದ ವ್ಯಾಖ್ಯಾನದ ಪ್ರಕಾರ, ಟೆಲಿಕಾಂ ಕಂಪನಿಗಳು ಅವರು ನೀಡಬೇಕಾದದ್ದನ್ನು ಪಾವತಿಸಿದ್ದಾರೆ. ಆದರೆ, ಸರ್ಕಾರ ಆದಾಯದಲ್ಲಿ ಹೆಚ್ಚು ಪಾಲು ಕೇಳಿತು ಮತ್ತು ಆ ಬಾಕಿ ಬಡ್ಡಿ ಸೇರಿದಂತೆ 1,40,000 ಕೋಟಿ ರೂ.ಎಂದು ಅಂದಾಜಿಸಲಾಗಿದೆ.

ಹೊಸ ನೀತಿ: ಸರ್ಕಾರ ಹೊಸ ಟೆಲಿಕಾಂ ನೀತಿಯಲ್ಲಿ ಹರಾಜು ಇಲ್ಲದೆ ಉಪಗ್ರಹ ಸಂವಹನಕ್ಕಾಗಿ ತರಂಗಾಂತರವನ್ನು ಆಡಳಿತಾತ್ಮಕ ಆಧಾರದ ಮೇಲೆ ನಿಯೋಜಿಸಲು ನಿರ್ಧರಿಸಿದೆ. ಇದು ಸರಿಯಾದ ಆಯ್ಕೆ. ಆದರೆ, ನವಜಾತ ಉಪಗ್ರಹ ಬ್ರಾಡ್‌ಬ್ಯಾಂಡ್ ಸಾಹಸೋದ್ಯಮವಾದ ದೇವಾಸ್‌ಗೆ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪವಿದೆ. ಹಾಲಿ ಸರ್ಕಾರ ದೇವಾಸ್‌ ಹಗರಣ ಎಂಬ ಹಣೆಪಟ್ಟಿ ಕಟ್ಟುತ್ತಲೇ ಇದೆ. ಪೂರ್ವಗ್ರಹಪೀಡಿತ ರಾಜಕೀಯ ಆರೋಪಗಳು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುತ್ತವೆ.

ಅಬಕಾರಿ ನೀತಿ ಮತ್ತು ಗ್ರಾಹಕರು: ಇದು ಅರವಿಂದ್ ಕೇಜ್ರಿವಾಲ್ ಅವರ ಪರ ವಾದವಲ್ಲ. ಅಥವಾ, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಬಕಾರಿ ನೀತಿಯು ವಿತ್ತೀಯ ಪ್ರತಿಫಲಗಳಿಂದ ಪ್ರೇರಿತವಾಗಿಲ್ಲಎಂದಲ್ಲ. ತನಿಖೆ ಮತ್ತು ವಿಶ್ವಾಸಾರ್ಹ ಕಾನೂನು ಕ್ರಮದಿಂದ ಮಾತ್ರ ಅದನ್ನು ಸ್ಥಾಪಿಸ ಬಹುದು.

ಆದರೆ, ಯಾವುದೇ ದಿಲ್ಲಿ ನಿವಾಸಿಗಳು ಪ್ರಕಾರ ಅಬಕಾರಿ ನೀತಿ ಅತ್ಯುತ್ತಮವಾಗಿತ್ತು. ಅಂಗಡಿಗಳು ಮತ್ತು ಲಭ್ಯವಿರುವ ಮದ್ಯದ ವಿಧಗಳು ಮತ್ತು ಬ್ರಾಂಡ್‌ಗಳಿಗೆ ಸಂಬಂಧಿಸಿದಂತೆ ಹೇರಳವಾದ ಆಯ್ಕೆ ಇತ್ತು. ʻಎಕನಾಮಿಸ್ಟ್ ʼನ ಪತ್ರಕರ್ತರೊಬ್ಬರು ಪಾಡ್‌ಕಾಸ್ಟ್‌ನಲ್ಲಿ ಹೇಳಿದಂತೆ, ʻದೆಹಲಿಯ ಔಟ್‌ಲೆಟ್‌ನಲ್ಲಿ ಮಹಿಳೆಯೊಬ್ಬಳು ʻಪುರುಷರ ತಡವುವ ಕೈಗಳ ಕಾಟವಿಲ್ಲದೆ ಮದ್ಯವನ್ನು ಖರೀದಿಸಬಹುದಾಗಿತ್ತುʼ.

ಸರ್ಕಾರಿ ಯಂತ್ರವನ್ನು ಬಳಸಿ ಪ್ರತಿಪಕ್ಷಗಳ ನಾಯಕರ ವಿರುದ್ಧ ಆರೋಪ ಹೊರಿಸುವುದು, ಪ್ರಚಾರ ಮಾಡದಂತೆ ತಡೆಯುವುದು, ವಿರೋಧ ಪಕ್ಷಗಳ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವುದು ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಚುನಾವಣಾ ಬಾಂಡ್‌ಗಳ ಮೂಲಕ ಎಲ್ಲ ಪಕ್ಷಗಳೂ ದೇಣಿಗೆ ಸಂಗ್ರಹಿಸಿವೆ ಮತ್ತು ಇಂಥ ಹಣದ ದುರುಪಯೋಗದ ನಡೆದಿದೆ.

-ಟಿ.ಕೆ.ಅರುಣ್

Read More
Next Story