PM Modi Podcast | ದೇವರಲ್ಲ; ನಾನು ಮನುಷ್ಯ: ಮೊದಲ ಪಾಡ್‌ಕಾಸ್ಟ್‌ನಲ್ಲಿ ಮೋದಿ ಸ್ಪಷ್ಟನೆ
PM Modi : ಉತ್ತಮ ವ್ಯಕ್ತಿತ್ವ ಹೊಂದಿರುವ ಜನರು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ಪ್ರಧಾನಿ ಪ್ರತಿಪಾದಿಸಿದ್ದಾರೆ. ಎಲ್ಲರೂ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಧ್ಯೇಯದೊಂದಿಗೆ ಬರಬೇಕು ಎಂದು ಒತ್ತಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದು ಅಲ್ಲಿ ಅವರು ತಾವು ದೇವರಲ್ಲ, ಮಾನವ ಎಂದು ಹೇಳಿಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮೋದಿ ಅವರು ತಾವು ದೇವರು ಕಳುಹಿಸಿದ ವ್ಯಕ್ತಿ, ಜೈವಿಕ ಮಾನವ ಅಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದೀಗ ಅವರು ನಾನೂ ಕೂಡ ಮಾನವ ಹಾಗೂ ನನ್ನಿಂದಲೂ ತಪ್ಪು ಘಟಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಪಾಡ್‌ಕಾಸ್ಟ್ ಹೋಸ್ಟ್ ಮಾಡುವ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಬಿಡುಗಡೆ ಮಾಡಿರುವ ಟ್ರೈಲರ್‌ನಲ್ಲಿ ಕೆಲವೊಂದು ಅಂಶಗಳನ್ನು ಬಹಿರಂಗ ಮಾಡಲಾಗಿದೆ. ತಾವು ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದ ಭಾಷಣದಲ್ಲಿ ಕೆಲವೊಂದು ತಪ್ಪುಗಳು ಆಗಿವೆ ನಾನು ಸಹ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
"ನಾನು ಕೂಡ ಮನುಷ್ಯ, ದೇವರಲ್ಲ" ಎಂದು ಪ್ರಧಾನಿ ಟ್ರೈಲರ್‌ನಲ್ಲಿ ಹೇಳಿರುವುದು ಹೆಚ್ಚು ಗಮನ ಸೆಳೆದಿದೆ.
ಉತ್ತಮ ವ್ಯಕ್ತಿತ್ವ ಹೊಂದಿರುವ ಜನರು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ಪ್ರಧಾನಿ ಅಲ್ಲಿ ಪ್ರತಿಪಾದಿಸಿದ್ದಾರೆ. ಎಲ್ಲರೂ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಧ್ಯೇಯದೊಂದಿಗೆ ಬರಬೇಕು ಎಂದು ಒತ್ತಿ ಹೇಳಿದ್ದಾರೆ.
ಎಕ್ಸ್ ನಲ್ಲಿ ಟ್ರೈಲರ್ ಅನ್ನು ಹಂಚಿಕೊಂಡ ಮೋದಿ, "ನಿಮಗಾಗಿ ಇದನ್ನು ನಿರ್ಮಿಸಿದ್ದು ನಾವು ಆನಂದಿಸಿದಷ್ಟೇ ನೀವೆಲ್ಲರೂ ಖುಷಿ ಪಡುತ್ತೀರಿ ಎಂದು ನಾನು ಭಾವಿಸುತ್ತೇನೆ!" ಎಂದು ಹೇಳಿದ್ದಾರೆ.