
ಐಐಟಿ-ಮದ್ರಾಸ್ ವಿದ್ಯಾರ್ಥಿ ಮೈಕ್ರೋಸಾಫ್ಟ್ ವಿಂಡೋಸ್ ಮುಖ್ಯಸ್ಥ
ಮದ್ರಾಸ್ ಐಐಟಿಯ ಹಳೆಯ ವಿದ್ಯಾರ್ಥಿ ಪವನ್ ದವುಲೂರಿ ಅವರು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥ ರಾಗಿ ನೇಮಕಗೊಂಡಿದ್ದಾರೆ.
ಉತ್ಪನ್ನಗಳ ಮುಖ್ಯಸ್ಥ ಪನೋಸ್ ಪನಾಯ್ ಕಳೆದ ವರ್ಷ ಅಮೆಜಾನ್‌ಗೆ ಸೇರಿದ್ದರು. ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋ ಸಾಫ್ಟ್‌ನ ಸತ್ಯ ನಾಡೆಲ್ಲಾ ಅವರ ಬಳಿಕ ಬಿಗ್ ಟೆಕ್ ಕಂಪನಿಯ ನಾಯಕತ್ವ ವಹಿಸಿಕೊಂಡಿರುವ ಇತ್ತೀಚಿನ ಭಾರತೀಯ ದವುಲೂರಿ. ಮೈ ಕ್ರೋಸಾಫ್ಟ್‌ನಲ್ಲಿ 23 ವರ್ಷ ಸೇವೆ ಸಲ್ಲಿಸಿರುವ ದವುಲೂರಿ ಸರ್ಫೇಸ್ ಗ್ರೂಪ್ ಹಾಗೂ ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು.
ಎರಡು ಇಲಾಖೆ ನೇತೃತ್ವ: ಪರಖಿನ್ ಮತ್ತು ಪನಾಯ್ ತೊರೆದ ನಂತರ, ದವುಲೂರಿ ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡರು. ಮೈಕ್ರೋ ಸಾಫ್ಟ್‌ನ ಮುಖ್ಯಸ್ಥ ರಾಜೇಶ್ ಝಾ ಅವರ ಆಂತರಿಕ ಪತ್ರದಲ್ಲಿ ʻಈ ನಿರ್ಧಾರವು ಎಐ ಯುಗದಲ್ಲಿ ಸಂಸ್ಥೆಗೆ ಸಾಧನಗಳು ಮತ್ತು ಅನುಭವಗಳನ್ನು ನಿರ್ಮಿಸಲು ʻಸಮಗ್ರ ವಿಧಾನʼವನ್ನು ಕಂಡುಕೊಳ್ಳಲು ನೆರವಾಗುತ್ತದೆʼ ಎಂದು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಮರುಸಂಘಟನೆ: ದವುಲೂರಿ ಅವರು ಈ ಹಿಂದೆ ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಮೈಕ್ರೋಸಾಫ್ಟ್‌ನಲ್ಲಿ ಸರ್ಫೇಸ್‌ಗಾಗಿ ಪ್ರೊಸೆಸರ್‌ಗಳನ್ನುರೂಪಿಸುವಲ್ಲಿ ತೊಡಗಿಸಿಕೊಂಡಿದ್ದರು. ಗೂಗಲ್ ಡೀಪ್‌ಮೈಂಡ್ ನ ಸಹಸಂಸ್ಥಾಪಕ ಮತ್ತು ಇನ್‌ಫ್ಲೆಕ್ಷನ್ ಎಐ ಸಿಇಒ ಮುಸ್ತಫಾ ಸುಲೇಮಾನ್ ಅವರು ಮೈಕ್ರೋಸಾಫ್ಟ್ ನ ಎಐ ತಂಡದ ಸಿಇಒ ಆಗಿ ಸೇರಿದ ಬಳಿಕ ದವುಲೂರಿ ನೇಮಕದ ಸುದ್ದಿ ಬಂದಿದೆ.