ಸಿಬಿಐ, ಪೊಲೀಸ್, ಕಸ್ಟಮ್ಸ್, ಇಡಿ ʼಡಿಜಿಟಲ್ ಬಂಧನʼ ಮಾಡುವುದಿಲ್ಲ: I4C ಸ್ಪಷ್ಟನೆ
ಯಾವುದೇ ತನಿಖಾ ಸಂಸ್ಥೆಗಳ ಹೆಸರು ಹೇಳಿ ವೀಡಿಯೊ ಕರೆಗಳ ಮೂಲಕ ಜನರನ್ನು ಡಿಜಿಟಲ್ ಆರೆಸ್ಟ್ ಮಾಡಿ ಹಣ ಲಪಟಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 'ಡಿಜಿಟಲ್ ಬಂಧನʼ ಪ್ರಕರಣಗಳಿಗೆ ಬಲಿಯಾಗದಂತೆ ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಎಚ್ಚರಿಕೆ ನೀಡಿದೆ.
ಸೈಬರ್ ಅಪರಾಧ ಎಸಗುವ ದುಷ್ಕರ್ಮಿಗಳು ʼಡಿಜಿಟಲ್ ಅರೆಸ್ಟ್ʼ ಮಾಡಿ ಅಮಾಯಕರನ್ನು ಕಂಗೆಡಿಸುವ ಪ್ರಕರಣಗಳು ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಅಭಯ ನೀಡಿದೆ.
ಸಿಬಿಐ, ಪೊಲೀಸ್, ಕಸ್ಟಮ್ಸ್, ಇಡಿ ಅಥವಾ ನ್ಯಾಯಾಧೀಶರೆಂದು ಹೇಳಿಕೊಂಡು ವೀಡಿಯೊ ಕರೆಗಳ ಮೂಲಕ ಜನರನ್ನು ಕೊಠಡಿಯಲ್ಲೇ ಕೆಲ ಕಾಲ ಬಂಧಿಸುವ (ವರ್ಚುವಲ್ ಅರೆಸ್ಟ್ ಅಥವಾ ಡಿಜಿಟಲ್ ಆರೆಸ್ಟ್) ಹಾಗೂ ಆ ಮೂಲಕ ಹಣ ಲಪಟಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕಟಣೆ ಹೊರಡಿಸಿರುವ ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) 'ಡಿಜಿಟಲ್ ಬಂಧನʼ ಪ್ರಕರಣಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದೆ. ಜತೆಗೆ ಯಾವುದೇ ಸರ್ಕಾರಿ ಸಂಸ್ಥೆಗಳು ʼಡಿಜಿಟಲ್ ಬಂಧನʼ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.
" ಅಂತಹ ಕರೆಗಳು ಬಂದಲ್ಲಿ ಗಾಬರಿಯಾಗಬೇಡಿ. ಅಲರ್ಟ್ ಆಗಿರಿ. ಸಿಬಿಐ/ಪೊಲೀಸ್/ಕಸ್ಟಮ್/ಇಡಿ/ನ್ಯಾಯಾಧೀಶರು ನಿಮ್ಮನ್ನು ವೀಡಿಯೊ ಕರೆ ಮೂಲಕ ಯಾವುದೇ ಕಾರಣಕ್ಕೂ ಬಂಧಿಸುವುದಿಲ್ಲ" ಎಂದು ಸಷ್ಟವಾಗಿ ಹೇಳಲಾಗಿದೆ. ವಾಟ್ಸಾಪ್ ಮತ್ತು ಸ್ಕೈಪ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಇಂತಹ ಹಗರಣಗಳಿಗೆ ಕರೆಗಳನ್ನು ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಇದಕ್ಕೆ ಬಲಿಯಾಗಬಾರದು ಎಂದು ಸಂದೇಶ ರವಾನಿಸಲಾಗಿದೆ..
ಇಂತಹ ಅಪರಾಧಗಳ ವಿರುದ್ಧ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಸರ್ಕಾರದ ಸೈಬರ್ ಭದ್ರತಾ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಹಿಂದೆ ಹೇಳಿವೆ. ಅಂತಹ ಅಪರಾಧಗಳನ್ನು ಕೇಂದ್ರ ಸಹಾಯವಾಣಿ ಸಂಖ್ಯೆ 1930 ಅಥವಾ ವೆಬ್‌ಸೈಟ್ -- www.cybercrime.gov.in ನಲ್ಲಿ ವರದಿ ಮಾಡಲು I4C ಸಲಹೆ ನೀಡಿದೆ.
ಡಿಜಿಟಲ್ ಬಂಧನವು ಸೈಬರ್ ಕ್ರೈಮ್ ತಂತ್ರಕ್ಕೆ ನೀಡಲಾದ ಹೆಸರು, ಅಲ್ಲಿ ವಂಚಕರು ಒಬ್ಬ ವ್ಯಕ್ತಿ ಅಥವಾ ಅವನ ನಿಕಟ ಕುಟುಂಬ ಸದಸ್ಯರು ಅಪರಾಧದಲ್ಲಿ ಸರ್ಕಾರಿ ತನಿಖಾ ಸಂಸ್ಥೆಯಿಂದ ಸಿಕ್ಕಿಬಿದ್ದಿದ್ದಾರೆ ಎಂದು ವಂಚನೆಯಿಂದ ಕಾನೂನು ಜಾರಿ ಸಂಸ್ಥೆಯ ಅಧಿಕಾರಿಗಳಂತೆ ನಟಿಸುವ ವ್ಯಕ್ತಿಗೆ SMS ಕಳುಹಿಸುತ್ತಾರೆ ಅಥವಾ ವೀಡಿಯೊ ಕರೆಗಳನ್ನು ಮಾಡುತ್ತಾರೆ. ಮಾದಕವಸ್ತು ಕಳ್ಳಸಾಗಣೆ ಅಥವಾ ಮನಿ ಲಾಂಡರಿಂಗ್‌ನಂತಹ ಚಟುವಟಿಕೆಗಳ ಸಾಬೂಬುಗಳನ್ನು ಹೇಳಿ ಅಮಾಯಕರನ್ನು ಹೆದರಿಸಲಾಗುತ್ತಿದೆ ಎಂದಿದೆ.
ಸೈಬರ್ ಕ್ರಿಮಿನಲ್ 'ಡಿಜಿಟಲ್ ಬಂಧನ'ದ ಭಾಗವಾಗಿ ತಮ್ಮ ಮೊಬೈಲ್ ಫೋನ್ ಕ್ಯಾಮೆರಾಗಳನ್ನು ಆನ್‌ಲೈನ್‌ನಲ್ಲಿ ಇರಿಸಲು ಕೇಳುವ ಮೂಲಕ ವ್ಯಕ್ತಿಯನ್ನು ಅವರ ವಂಚನಾ ಜಾಲಕ್ಕೆ ಸಿಲುಕಿಸಲಾಗುತ್ತದೆ. ಬಳಿಕ ಆ ವ್ಯಕ್ತಿಯಿಂದ ಆನ್‌ಲೈನ್ ವರ್ಗಾವಣೆಯ ಮೂಲಕ ಹಣವನ್ನು ಲಪಟಾಯಿಸಲಾಗುತ್ತದೆ. ಇಂತಹ ಪ್ರಕರಣಗಳು ಈಗಿನ ಸೈಬರ್ ಕೈಮ್ ಟ್ರೆಂಡ್ ಆಗಿರುವುದನ್ನು ತಿಳಿಹೇಳಲಾಗಿದೆ.