![Crime News : ಆಸ್ತಿ ಹಂಚಿಕೆ ವಿವಾದ; ಹೈದರಾಬಾದ್ನ ಖ್ಯಾತ ಉದ್ಯಮಿಯನ್ನು 70 ಬಾರಿ ಚುಚ್ಚಿ ಕೊಂದ ಮೊಮ್ಮಗ Crime News : ಆಸ್ತಿ ಹಂಚಿಕೆ ವಿವಾದ; ಹೈದರಾಬಾದ್ನ ಖ್ಯಾತ ಉದ್ಯಮಿಯನ್ನು 70 ಬಾರಿ ಚುಚ್ಚಿ ಕೊಂದ ಮೊಮ್ಮಗ](https://karnataka.thefederal.com/h-upload/2025/02/10/511739-chandrashekar.webp)
Crime News : ಆಸ್ತಿ ಹಂಚಿಕೆ ವಿವಾದ; ಹೈದರಾಬಾದ್ನ ಖ್ಯಾತ ಉದ್ಯಮಿಯನ್ನು 70 ಬಾರಿ ಚುಚ್ಚಿ ಕೊಂದ ಮೊಮ್ಮಗ
Crime News : ತೇಜಾಗೆ ಪೂರ್ವಿಕರ ಆಸ್ತಿಯ ಭಾಗವಾಗಿ 4 ಕೋಟಿ ರೂಪಾಯಿ ನೀಡಲಾಗಿತ್ತು. ಇನ್ನೂ ಹೆಚ್ಚಿನ ಆಸ್ತಿಗಾಗಿ ಆತ ತಾತನ ಬಳಿ ಗಲಾಟೆ ಮಾಡಿ ಕೊಂದಿದ್ದಾನೆ.
ಹೈದರಾಬಾದ್: ಆಸ್ತಿ ಹಂಚಿಕೆ ಮಾಡುವಲ್ಲಿ ಅನ್ಯಾಯವಾಗಿದೆ ಎಂಬ ಕೋಪದಲ್ಲಿ 86 ವರ್ಷದ ಪ್ರಖ್ಯಾತ ಕೈಗಾರಿಕೋದ್ಯಮಿ ವೆಲಮತಿ ಚಂದ್ರಶೇಖರ ಜನಾರ್ದನ ರಾವ್ ಅವರನ್ನು ಮೊಮ್ಮಗ ಚಾಕುವಿನಿಂದ 70 ಬಾರಿ ಇರಿದು (Crime News) ಕೊಂದಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಉದ್ಯಮಿಯ ಮನೆಯಲ್ಲಿಯೇ ಈ ಘಟನೆ ನಡೆದಿದ್ದು ಜಗಳ ನಡೆದ ಬಳಿಕ ಚಾಕುವಿನಿಂದ ಚುಚ್ಚಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
29 ವರ್ಷದ ಮೊಮ್ಮಗ ಕಿಲಾರು ಕೀರ್ತಿ ತೇಜಾ ಕೊಲೆ ಆರೋಪಿ. ವೆಲ್ಜಾನ್ ಗ್ರೂಪ್‌ನ ಅಧ್ಯಕ್ಷರಾಗಿದ್ದ ರಾವ್ ಅವರ ಬಳಿ ಆಸ್ತಿಯಲ್ಲಿ ಹೆಚ್ಚು ಪಾಲು ನೀಡುವಂತೆ ಕೋರಿದ್ದು, ಈ ವಿಚಾರದಲ್ಲಿ ವಾಗ್ವಾದ ನಡೆದ ಬಳಿಕ ಸಿಟ್ಟಿನಿಂದ ಚಾಕುವಿನಲ್ಲಿ ಚುಚ್ಚಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತೇಜಾಗೆ ಪೂರ್ವಿಕರ ಆಸ್ತಿಯ ಭಾಗವಾಗಿ 4 ಕೋಟಿ ರೂಪಾಯಿ ನೀಡಲಾಗಿತ್ತು. ಇನ್ನೂ ಹೆಚ್ಚಿನ ಆಸ್ತಿಗಾಗಿ ಆತ ತಾತನ ಬಳಿ ಗಲಾಟೆ ಮಾಡಿ ಕೊಂದಿದ್ದಾನೆ.
ಘಟನೆ ವೇಳೆ ತೇಜಾನ ತಾಯಿ ಸರೋಜಿನಿ ದೇವಿ ಇದ್ದರೂ. ತಡೆಯಲು ಯತ್ನಿಸಿರುವ ಅವರಿಗೂ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದಿಂದ ಹಿಂದಿರುಗಿದ್ದ ಆರೋಪಿ
ಆರೋಪಿ ತೇಜಾ ಇತ್ತೀಚೆಗೆ ಅಮೆರಿಕದಲ್ಲಿ ತನ್ನ ಸ್ನಾತಕೋತ್ತರ ಪದವಿ ಪೂರ್ತಿಗೊಳಿಸಿ ಹೈದರಾಬಾದ್‌ಗೆ ಹಿಂತಿರುಗಿದ್ದ. ಆಸ್ತಿ ಕೇಳುವುದಕ್ಕೆ ತಾಯಿ ಸರೋಜಿನಿ ದೇವಿಯೊಂದಿಗೆ ರಾವ್ ಜತೆ ಹೋಗಿದ್ದ.
ಜನಾರ್ದನ ರಾವ್ ಜನಪ್ರಿಯ ಪ್ರಖ್ಯಾತ ಕೈಗಾರಿಕೋದ್ಯಮಿ ಮತ್ತು ದಾನಿ. ಅವರು ಹಡಗು ನಿರ್ಮಾಣ, ಇಂಧನ ಮತ್ತು ಕೈಗಾರಿಕಾ ಉಪಯೋಗಗಳಂತಹ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.