ಹುರುನ್ ಇಂಡಿಯಾ ದಾನಿಗಳ ಪಟ್ಟಿ ಪ್ರಕಟ; ಪ್ರತಿದಿನ 6 ಕೋಟಿ ರೂ.ಕೊಡುವ ಶಿವ ನಾಡರ್‌ಗೆ ಅಗ್ರಸ್ಥಾನ
x
ಶಿವ ನಾಡಾರ್‌

ಹುರುನ್ ಇಂಡಿಯಾ ದಾನಿಗಳ ಪಟ್ಟಿ ಪ್ರಕಟ; ಪ್ರತಿದಿನ 6 ಕೋಟಿ ರೂ.ಕೊಡುವ ಶಿವ ನಾಡರ್‌ಗೆ ಅಗ್ರಸ್ಥಾನ

79 ವರ್ಷದ ನಾಡಾರ್ ಐದು ವರ್ಷಗಳಲ್ಲಿ ಮೂರನೇ ಬಾರಿಗೆ "ಭಾರತದ ಅತಿ ದೊಡ್ಡ ದಾನಿ " ಹೆಗ್ಗಳಿಕೆ ಉಳಿಸಿಕೊಂಡಿದ್ದಾರೆ. ಅವರು ಪ್ರತಿನಿತ್ಯ 5.9 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಹುರುನ್ ಇಂಡಿಯಾ ತಿಳಿಸಿದೆ.


ಎಡೆಲ್‌ಗಿವ್- ಹುರುನ್ ಇಂಡಿಯಾ ಗುರುವಾರ (ನವೆಂಬರ್ 7ರಂದು) ಭಾರತದ ಶ್ರೀಮಂತ ದಾನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರ ಪ್ರಕಾರ 2024ನೇ ವರ್ಷದಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರು ಭಾರತದ ಅತಿದೊಡ್ಡ ವೈಯಕ್ತಿಕ ದಾನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು ಭಾರತದ ಇತರ ಆಗರ್ಭ ಶ್ರೀಮಂತರನ್ನು ಮತ್ತೊಂದು ಬಾರಿ ಹಿಂದಕ್ಕೆ ಹಾಕಿದ್ದಾರೆ.

79 ವರ್ಷದ ನಾಡಾರ್ ಐದು ವರ್ಷಗಳಲ್ಲಿ ಮೂರನೇ ಬಾರಿಗೆ "ಭಾರತದ ಅತಿ ದೊಡ್ಡ ದಾನಿ " ಹೆಗ್ಗಳಿಕೆ ಉಳಿಸಿಕೊಂಡಿದ್ದಾರೆ. ಅವರು ಪ್ರತಿನಿತ್ಯ 5.9 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಹುರುನ್ ಇಂಡಿಯಾ ತಿಳಿಸಿದೆ.

ಅಂದ ಹಾಗೆ ಲೋಕೋಪಕಾರದ ವಿಚಾರದಲ್ಲಿ ಶಿವ ನಾಡಾರ್‌ನ ಪಾಲು 2024 ಹಣಕಾಸು ವರ್ಷದಲ್ಲಿ ಶೇಕಡಾ 5ರಷ್ಟು ಹೆಚ್ಚಿದೆ. ಅವರು ಒಟ್ಟಾರೆಯಾಗಿ 2,153 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ವ್ಯಕ್ತಿಗಳಾದ ಗೌತಮ್ ಅದಾನಿ ಅವರ 330 ಕೋಟಿ ರೂಪಾಯಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಹಾಗೂ ಭಾರತದ ಎರಡನೇ ಶ್ರೀಮಂತ ಭಾರತೀಯ ಮುಖೇಶ್ ಅಂಬಾನಿ ಅವರ 407 ಕೋಟಿ ರೂಪಾಯಿ ಮೀರಿಸಿದ್ದಾರೆ.

ಮುಖೇಶ್ ಅಂಬಾನಿ ಒಂದು ಸ್ಥಾನ ಜಿಗಿತ

ದಾನಿಗಳ ನೀಡುವ ಪಟ್ಟಿಯಲ್ಲಿ ಅಂಬಾನಿ ಒಂದು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಗೌತಮ್‌ ಅದಾನಿ ಐದನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆಟೋ ಮತ್ತು ಫೈನಾನ್ಸ್‌ನಲ್ಲಿ ಉದ್ಯಮ ನಡೆಸುತ್ತಿರುವ ಬಜಾಜ್ ಕುಟುಂಬವು ದಾನದ ಪ್ರಮಾಣವನ್ನು ಶೇಕಡಾ 33ರಷ್ಟು ಹೆಚ್ಚಿಸಿದೆ. ಈ ಕುಟುಂಬವು 352 ಕೋಟಿ ರೂಪಾಯಿ ದಾನ ಮಾಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಆದರೆ ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬವು 334 ಕೋಟಿ ರೂಪಾಯಿ ದೇಣಿಗೆ ನೀಡಿದ್ದು ನಾಲ್ಕನೇ ಸ್ಥಾನದಲ್ಲಿದೆ. ಈ ಮೂಲಕ ಹಿಂದಿನ ವರ್ಷಕ್ಕಿಂತ ಶೇಕಡಾ 17ರಷ್ಟು ಹೆಚ್ಚಿಸಿದೆ.

ಒಟ್ಟು 203 ಮಂದಿ 5 ಕೋಟಿ ರೂ.ಗಿಂತ ಹೆಚ್ಚು ದಾನ ಮಾಡಿದ್ದಾರೆ. ಹುರುನ್‌ನ ಶ್ರೀಮಂತ ಪಟ್ಟಿಯ ಪ್ರಕಾರ 1,539 ವ್ಯಕ್ತಿಗಳು ತಲಾ 1,000 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಅವರ ಸಂಚಿತ ಸಂಪತ್ತು 2024ನೇ ವರ್ಷದಲ್ಲಿ 46 ಪ್ರತಿಶತದಷ್ಟು ಹೆಚ್ಚಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಪಟ್ಟಿಯಲ್ಲಿರುವ 203 ದಾನಿಗಳ ಸರಾಸರಿ ದೇಣಿಗೆಯು 2023 ರ ಪಟ್ಟಿಯಲ್ಲಿರುವ 119 ದಾನಿಗಳ 71 ಕೋಟಿ ರೂಪಾಯಿಗಳಿಗಿಂತ 43 ಕೋಟಿಗೆ ಇಳಿದಿದೆ.

ಗೌತಮ್ ಅದಾನಿಯ 11.6 ಲಕ್ಷ ಕೋಟಿ ರೂಪಾಯಿ ಮತ್ತುಮುಖೇಶ್‌ ಅಂಬಾನಿಯ 10.14 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು. ನಾಡಾರ್ 3.14 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ವ್ಯಾಪಾರ ವಿಸ್ತರಣೆಯಲ್ಲಿ ಹೂಡಿಕೆ ಮಾಡಲು ಖಾಸಗಿ ವಲಯದ ಹಿಂಜರಿಕೆಯಿಂದಾಗಿ ಸಾಮಾಜಿಕ ವಲಯದ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ, ಎಡೆಲ್‌ಗಿವ್‌ನ ಮುಖ್ಯ ಕಾರ್ಯನಿರ್ವಾಹಕ ನಗ್ಮಾ ಮುಲ್ಲಾ ಅವರು ಸಕಾರಾತ್ಮಕವಾಗಿ ಉತ್ತರಿಸಿಲ್ಲ. ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಾಸ್ ರಹಮಾನ್ ಜುನೈದ್ ಅವರು ಪಟ್ಟಿಯಲ್ಲಿರುವ ಶ್ರೀಮಂತರ ನೇತೃತ್ವದ ಒಂಬತ್ತು ಕಂಪನಿಗಳ ಗುಂಪನ್ನು ಸೂಚಿಸಿದ್ದಾರೆ. ಅವರು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿ ನೀಡಬೇಕಾಗಿರುವ ಶೇಕಡಾ 2ಕ್ಕಿಂತ ಹೆಚ್ಚು ದೇಣಿಗೆ ನೀಡಿದ್ದಾರೆ.

ಈ ಒಂಬತ್ತು ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದೆ. ಇದು ತಾನು ನೀಡಬೇಕಾದ 840 ಕೋಟಿ ರೂಪಾಯಿಗೆ ಪ್ರತಿಯಾಗಿ 900 ಕೋಟಿ ರೂ ದೇಣಿಗೆ ನೀಡಿದೆ. ಅದೇ ರೀತಿ ಯಾರ್ಡಿ ಸಾಫ್ಟ್‌ವೇರ್ ಇಂಡಿಯಾ ತನ್ನ ಜವಾಬ್ದಾರಿಯ 70 ಲಕ್ಷ ರೂಪಾಯಿಗೆ ಪರ್ಯಾಯವಾಗಿ 25 ಕೋಟಿ ರೂಪಾಯಿ ದಾನ ಮಾಡಿದೆ.

ಮಹಿಳೆಯರ ಪಟ್ಟಿಯಲ್ಲಿ ರೋಹಿಣಿ ನಿಲೇಕಣಿಗೆ ಅಗ್ರಸ್ಥಾನ

ಮಹಿಳೆಯರ ಪಟ್ಟಿಯಲ್ಲಿ 65 ವರ್ಷದ ರೋಹಿಣಿ ನಿಲೇಕಣಿ ಅವರು 154 ಕೋಟಿ ರೂಪಾಯಿಗಳ ಕೊಡುಗೆಯೊಂದಿಗೆ ದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸುಸ್ಮಿತಾ ಬಾಗ್ಚಿ 90 ಕೋಟಿ ರೂ.ದಾನ ಮಾಡಿದ್ದಾರೆ.

ರೋಹಿಣಿಯವರ ಪತಿ ನಂದನ್ ನಿಲೇಕಣಿ ಅವರು ಸಾಮಾಜಿಕ ಒಳಿತಿಗಾಗಿ ನೀಡಿದ ಕೊಡುಗೆಗಳನ್ನು ಶೇಕಡಾ 62 ರಷ್ಟು ಹೆಚ್ಚಿಸಿ 307 ಕೋಟಿ ರೂ.ಗೆ ತಲುಪಿಸಿದ್ದಾರೆ. ಇದರಿಂದಾಗಿ ಅವರು ಪಟ್ಟಿಯಲ್ಲಿ ಎರಡು ಸ್ಥಾನಗಳನ್ನು ಹೆಚ್ಚಿಸಿ ಆರನೇ ಸ್ಥಾನಕ್ಕೆ ಏರಿದ್ದಾರೆ.

ವಿಪ್ರೊದ ಅಜೀಂ ಪ್ರೇಮ್‌ಜಿ ಅವರ ದೇಣಿಗೆಯು 2024ರಲ್ಲಿ ರಲ್ಲಿ 152 ಕೋಟಿ ರೂ. ಇಳಿದಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿನ 1,774 ಕೋಟಿ ರೂಪಾಯಿಗಿಂತ ಕಡಿಮೆಯಾಗಿದೆ.

ಏಷ್ಯನ್ ಪೇಂಟ್ಸ್‌ನ ವಿವೇಕ್ ವಕೀಲ್ ಪಟ್ಟಿಯಲ್ಲಿ ಅತ್ಯಂತ ಕಿರಿಯ ದಾನಿ

ಪಟ್ಟಿಯಲ್ಲಿರುವ ಅಗ್ರ 10 ಧನಿಕರು ಒಟ್ಟಾಗಿ 2024ರಲ್ಲಿ 4,265 ಕೋಟಿ ರೂ.ಗಳನ್ನು ದಾನ ನೀಡಿದ್ದಾರೆ. ಇದು ಪಟ್ಟಿಯಲ್ಲಿರುವ ಒಟ್ಟು ದೇಣಿಗೆಗಳ ಸುಮಾರು 5 ಪ್ರತಿಶತ..

ಹುರುನ್ ಇಂಡಿಯಾದ ಪ್ರಕಾರ, 96 ದಾನಿಗಳು 2024 ರ ಪಟ್ಟಿಗೆ ಪಾದಾರ್ಪಣೆ ಮಾಡಿದ್ದಾರೆ. 228 ಕೋಟಿ ರೂಪಾಯಿ ದೇಣಿಗೆಯೊಂದಿಗೆ, ಕೃಷ್ಣ ಚಿವ್ಕುಲ ಅತ್ಯಂತ ಉದಾರವಾಗಿ ಹೊಸ ಪ್ರವೇಶ ಪಡೆದಿದ್ದಾರೆ. ನಂತರ ಪಿಎನ್‌ಸಿ ಮೆನನ್ ಮತ್ತು ಕುಟುಂಬವು 71 ಕೋಟಿ ರೂಪಾಯಿ ಮತ್ತು ನದ್ಲಾಲ್ ರುಂಗ್ಟಾ ಮತ್ತು ಕುಟುಂಬವು 61 ಕೋಟಿ ರೂಪಾಯಿಗಳನ್ನು ನೀಡಿದೆ.

ಏಷ್ಯನ್ ಪೇಂಟ್ಸ್‌ನ ವಿವೇಕ್ ವಕೀಲ್ ಪಟ್ಟಿಯಲ್ಲಿ ಅತ್ಯಂತ ಕಿರಿಯ. 35 ವರ್ಷದ ವ್ಯಕ್ತಿ ಮತ್ತು ಅವರ ಕುಟುಂಬ 8 ಕೋಟಿ ರೂಪಾಯಿ ದಾನ ಮಾಡಿದೆ.

ಮೂಲ: ಹುರುನ್ ಸಂಶೋಧನಾ ಸಂಸ್ಥೆ; ಎಡೆಲ್‌ಗಿವ್-ಹುರುನ್ ಇಂಡಿಯಾ ಪಟ್ಟಿ 2024

Read More
Next Story