
ಡಿಎಂಕೆಗೆ ದೇಶ, ಸಂಸ್ಕೃತಿ ಪರಂಪರೆಯ ಬಗ್ಗೆ ದ್ವೇಷವಿದೆ: ಪ್ರಧಾನಿ ಮೋದಿ
ಡಿಎಂಕೆ ಮತ್ತು ಕಾಂಗ್ರೆಸ್ ಜನರನ್ನು "ಲೂಟಿ" ಮಾಡಲು ಅಧಿಕಾರಕ್ಕೆ ಬರಲು ಬಯಸಿವೆ ಮತ್ತು 2ಜಿ ಸ್ಪೆಕ್ಟ್ರಂ ಹಗರಣದ ʼಅತಿದೊಡ್ಡ ಫಲಾನುಭವಿʼ ಡಿಎಂಕೆ ಎಂದು ನರೇಂದ್ರ ಮೋದಿ ಆರೋಪಿಸಿದರು.
ದೇಶ ಒಡೆಯುವ ಕನಸು ಕಂಡವರನ್ನು ಜಮ್ಮು ಮತ್ತು ಕಾಶ್ಮೀರದ ಜನರು ತಿರಸ್ಕರಿಸಿದ್ದಾರೆ. ಇದೀಗ ತಮಿಳುನಾಡು ಕೂಡ ಅದನ್ನೇ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಮಾರ್ಚ್ 15) ಹೇಳಿದ್ದಾರೆ.
ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಡಿಎಂಕೆ ಮತ್ತು ಕಾಂಗ್ರೆಸ್ ಜನರನ್ನು "ಲೂಟಿ" ಮಾಡಲು ಅಧಿಕಾರಕ್ಕೆ ಬರಲು ಬಯಸಿವೆ ಮತ್ತು 2ಜಿ ಸ್ಪೆಕ್ಟ್ರಂ ಹಗರಣದ ʼಅತಿದೊಡ್ಡ ಫಲಾನುಭವಿʼ ಡಿಎಂಕೆ ಎಂದು ಆರೋಪಿಸಿದರು.
ತಮಿಳುನಾಡಿನ ಆಡಳಿತಾರೂಢ ಡಿಎಂಕೆಯನ್ನು ಗುರಿಯಾಗಿಸಿಕೊಂಡ ಮೋದಿ, ಡಿಎಂಕೆಗೆ ದೇಶ, ಅದರ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದ್ವೇಷವಿದೆ. ಈ ಪಕ್ಷ ತಮಿಳುನಾಡಿನ ಭವಿಷ್ಯ, ಸಂಸ್ಕೃತಿಯ ಶತ್ರು ಎಂದು ಆರೋಪಿಸಿದರು. ಡಿಎಂಕೆ ಮತ್ತು ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದು, ಅವರು ಮಹಿಳೆಯರನ್ನು ಮೂರ್ಖರನ್ನಾಗಿಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡಿನ ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ ಮಾತನಾಡಿದ ಅವರು,
ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿದೆ ಎಂಬುದು ಜನರಿಗೆ ತಿಳಿದಿದೆ. ಅಂತಹ ಸಂಸ್ಕೃತಿ ಇಂದಿಗೂ ಮುಂದುವರೆದಿದೆ ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಹೇಳಿದರು.