Hindu Mahasabha: ಗಾಂಧಿ ಹತ್ಯೆಯನ್ನು ಸಂಭ್ರಮಿಸಿದ ಹಿಂದೂ ಮಹಾಸಭಾ
x
ನಾಥೂರಾಮ್‌ ಗೋಡ್ಸೆ

Hindu Mahasabha: ಗಾಂಧಿ ಹತ್ಯೆಯನ್ನು ಸಂಭ್ರಮಿಸಿದ ಹಿಂದೂ ಮಹಾಸಭಾ

Hindu Mahasabha : ಮಹಾಸಭಾದ ನಾಯಕ ಮತ್ತು ನಾನಾ ಆಪ್ಟೆ ಧಾಮದ ಸ್ಥಾಪಕ ಪಂಡಿತ್ ಅಶೋಕ್ ಶರ್ಮಾ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಅಲ್ಲಿ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ನಡೆಯಿತು.


ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಮಹಾತ್ಮ ಗಾಂಧಿಯ ಹತ್ಯೆಯನ್ನು ಸಂಭ್ರಮಿಸಿದ್ದು. ನಾಥೂರಾಮ ಗೋಡ್ಸೆಗೆ ಗೌರವಾರ್ಪಣೆ ಮಾಡಿದ್ದಾರೆ.

ಹಿಂದೂ ಮಹಾಸಭಾದೊಂದಿಗೆ ನಂಟು ಹೊಂದಿದ್ದ ಗೋಡ್ಸೆ. ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಪ್ರಾರ್ಥನಾ ಸಭೆಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದ. ಅವರನ್ನು 1949ರಲ್ಲಿ ಅಂಬಾಲಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಬಲಪಂಥೀಯ ಸಂಘಟನೆಯಾಗಿರುವ ಹಿಂದೂ ಮಹಾಸಭಾ 'ಅಮರ್ ಹುತಾತ್ಮ ನಾಥೂರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್' ನಲ್ಲಿ ಜಮಾಯಿಸಿ ಗೋಡ್ಸೆ ಹತ್ಯೆಯನ್ನು ಶ್ಲಾಘಿಸಿದರು.

ಮಹಾಸಭಾದ ನಾಯಕ ಮತ್ತು ನಾನಾ ಆಪ್ಟೆ ಧಾಮದ ಸ್ಥಾಪಕ ಪಂಡಿತ್ ಅಶೋಕ್ ಶರ್ಮಾ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಅಲ್ಲಿ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ನಡೆಯಿತು.

ಈ ಸಮಾರಂಭವು "ಕರಮ್ ಚಂದ್ ಗಾಂಧಿಯವರ ಆತ್ಮ ತೆಗೆದುಹಾಕುವ" ಮತ್ತು ಭಾರತದಿಂದ "ಗಾಂಧಿವಾದವನ್ನು" ತೊಡೆದುಹಾಕುವ ಗುರಿದೆ ಎಂದು ಹಿಂದೂ ಮಹಾಸಭಾ ಹೇಳಿದೆ.

ಮಹಾತ್ಮ ಗಾಂಧಿ ಅವರನ್ನು 'ರಾಷ್ಟ್ರಪಿತ' ಎಂದು ಕರೆಯುವುದನ್ನು ಭಾರತ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಶರ್ಮಾ ಇದೇ ವೇಳೆ ಒತ್ತಾಯಿಸಿದರು. ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ನಾನಾ ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಯೋಜನೆಯನ್ನು ಮಹಾಸಭಾ ಪ್ರಕಟಿಸಿತು.

ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Read More
Next Story