ಮೋದಿ ಅಫಿದವಿತ್ : ಕಾರಿಲ್ಲ, ಮನೆಯಿಲ್ಲ... ಕೈಯಲ್ಲಿದೆ 52,920 ರೂ ಮಾತ್ರ!
ದಾಖಲೆ ಪ್ರಕಾರ, ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಅಥವಾ ಅಪರಾಧಕ್ಕೆ ಶಿಕ್ಷೆಯಾಗಿಲ್ಲ. ಯಾವುದೇ ಬಾಕಿ ತೀರಿಸಬೇಕಿಲ್ಲ. ಅಹಮದಾಬಾದ್ ನಿವಾಸಿ: ವೃತ್ತಿ ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಎಂದಿದ್ದು, ಸಂಪರ್ಕ ವಿವರ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿದ ಚುನಾವಣೆ ಪ್ರಮಾಣಪತ್ರದ ಪ್ರಕಾರ, ಅವರು 3 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು ಮೊತ್ತದ ಆಸ್ತಿ ಹೊಂದಿದ್ದಾರೆ. ಅದರಲ್ಲಿ ಹೆಚ್ಚಿನದು ಬ್ಯಾಂಕ್ ಸ್ಥಿರ ಠೇವಣಿ ರೂಪದಲ್ಲಿದೆ.
ಮೋದಿ ಅವರು ವಾರಣಾಸಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಮಂಗಳವಾರ (ಮೇ 14) ನಾಮಪತ್ರ ಸಲ್ಲಿಸಿದ್ದು, ಅದರೊಟ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಎರಡು ಬಾರಿ ಈ ಕ್ಷೇತ್ರದಿಂದ ಚುನಾಯಿತರಾಗಿದ್ದರು.
ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿದ ಅಫಿಡವಿಟ್ ಪ್ರಕಾರ, ಅವರ ಚರ ಆಸ್ತಿ 3,02,06,889 ರೂ. ಇದರಲ್ಲಿ 2.85 ಕೋಟಿ ಗೂ ಹೆಚ್ಚು ಮೊತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿದೆ. 2.67 ಲಕ್ಷ ರೂ. ಮೌಲ್ಯದ 45 ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರ, 52,920 ರೂ. ನಗದು, 9.12 ಲಕ್ಷ ರೂ. ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಕಳೆದ ಆರ್ಥಿಕ ವರ್ಷದಲ್ಲಿ 3.33 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಸೇರಿದೆ. ಅವರು ಯಾವುದೇ ʻಸ್ಥಿರ ಆಸ್ತಿʼ ಹೊಂದಿಲ್ಲ. ಅಂದರೆ, ಭೂಮಿ ಮತ್ತು ಮನೆ. ಜಶೋದಾಬೆನ್ ಅವರು ಪತ್ನಿ ಎಂದು ಉಲ್ಲೇಖಿಸಿದ್ದು, ಅವರ ಬಳಿ ಇರುವ ಆಸ್ತಿಗಳ ಬಗ್ಗೆ ʻತಿಳಿದಿಲ್ಲʼ ಎಂದು ಹೇಳಿದೆ. ಇಬ್ಬರು ಪ್ರತ್ಯೇಕವಾಗಿ ವಾಸಿಸು ತ್ತಿದ್ದಾರೆ.
ದಾಖಲೆ ಪ್ರಕಾರ, ಮೋದಿ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಅಥವಾ ಅಪರಾಧಕ್ಕೆ ಶಿಕ್ಷೆಯಾಗಿಲ್ಲ. ಸರಕಾರಕ್ಕೆ ಯಾವದೇ ಬಾಕಿಯಿಲ್ಲb. ಅಹಮದಾಬಾದ್ ನಿವಾಸಿ: ವೃತ್ತಿ ಸಾರ್ವಜನಿಕ ಜೀವನ ಮತ್ತು ರಾಜಕೀಯ ಚಟುವಟಿಕೆ ಎಂದಿದ್ದು, ಸಂಪರ್ಕ ವಿವರ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ:
Here's Modi's poll affidavit; PM shares his mobile number, has no car, land, house
1967ರಲ್ಲಿ ಎಸ್‌ಎಸ್‌ಸಿ, 1978 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಎ ಮತ್ತು 1983 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಎಂಎ ಪಡೆದಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಅವರು ಗುಜರಾತಿನ ಗಾಂಧಿನಗರದಲ್ಲಿ ಫ್ಲ್ಯಾಟ್, 1.27 ಕೋಟಿ ರೂ. ಸ್ಥಿರ ಠೇವಣಿ ಮತ್ತು 38,750 ರೂ. ನಗದು ಸೇರಿದಮತೆ 2.5 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ 2014ರಲ್ಲಿ 1.65 ಕೋಟಿ ರೂ. ಆಸ್ತಿ ಘೋಷಿಸಿದ್ದರು.
ಪ್ರಧಾನಮಂತ್ರಿ ವೆಬ್‌ಸೈಟ್, ಫೇಸ್‌ಬುಕ್, ಎಕ್ಸ್, ಯುಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಇದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.