Hema panel fallout|  ನಟ ಸಿದ್ಧಿಕ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
x

Hema panel fallout| ನಟ ಸಿದ್ಧಿಕ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ


ಕೊಚ್ಚಿ: ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟ ಸಿದ್ಧಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ನಟನ ಮನವಿಯನ್ನು ತಿರಸ್ಕರಿಸಿದ ಆದೇಶದ ವಿವರ ಇನ್ನೂ ಲಭ್ಯವಿಲ್ಲ.ಅರ್ಜಿಯನ್ನು ನ್ಯಾ. ಸಿ.ಎಸ್. ಡಯಾಸ್ ಅವರು ವಜಾಗೊಳಿಸಿದರು.

ಸಿದ್ದಿಕ್‌ ಮೇಲೆ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಲಾಗಿದ್ದು, ನಟಿ ʻ2019 ರಿಂದ ಸುಳ್ಳು ಆರೋಪ ಹೊರಿಸಿ ನಿರಂತರ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದರು.

ತಮ್ಮ ಜಾಮೀನು ಕೋರಿಕೆ ಅರ್ಜಿಯಲ್ಲಿ ಸಿದ್ದಿಕ್‌, 2016 ರಲ್ಲಿ ಥಿಯೇಟರ್‌ನಲ್ಲಿ ಲೈಂಗಿಕ ದುರ್ವರ್ತನೆ ಮತ್ತು ಕಳೆದ 5 ವರ್ಷದಿಂದ ಲೈಂಗಿಕ ಕ್ರಿಯೆಗೆ ಆಹ್ವಾನ ಕುರಿತು ಆಧಾರರಹಿತ ಮತ್ತು ಸುಳ್ಳು ಹೇಳಿಕೆ ನೀಡಿದ್ದರು. ಆದರೆ, ಈಗ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ ಎಂದು ಹೇಳಿದ್ದರು.

ಸಿದ್ದಿಕ್‌ ಆರೋಪದ ನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Read More
Next Story