Hema Committee fallout: ನಟ ಜಯಸೂರ್ಯ ವಿರುದ್ಧ ಎರಡನೇ ಎಫ್‌ಐಆರ್
x

Hema Committee fallout: ನಟ ಜಯಸೂರ್ಯ ವಿರುದ್ಧ ಎರಡನೇ ಎಫ್‌ಐಆರ್


ಮಲಯಾಳಂ ನಟ ಜಯಸೂರ್ಯ ಅವರ ವಿರುದ್ಧ ಎರಡನೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ನಟ ಜಯಸೂರ್ಯ ವಿರುದ್ಧ 354, 354A(ಎ1)(1), 354ಡಿ ಐಪಿಸಿ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಪಿರ್ಯಾದಿದಾರರ ಹೇಳಿಕೆ ದಾಖಲಿಸಿಕೊಂಡಿದ್ದು, ತಿರುವನಂತಪುರದಲ್ಲಿ ದಾಖಲಿಸಿರುವ ಎಫ್‌ಐಆರ್ ನ್ನು ತೊಡುಪುಳ ಪೊಲೀಸ್ ಠಾಣೆಗೆ ವರ್ಗಾಯಿಸಲಾಗು ವುದು ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲ್ಲಂ ಕ್ಷೇತ್ರದ ಸಿಪಿಐ(ಎಂ) ಶಾಸಕ, ನಟ ಮುಖೇಶ್ ವಿರುದ್ಧ ದೂರು ನೀಡಿದ ನಟಿಯೇ ಜಯಸೂರ್ಯ ವಿರುದ್ಧವೂ ದೂರು ನೀಡಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟರಾದ ಜಯಸೂರ್ಯ, ಮುಖೇಶ್, ಇಡವೆಲ ಬಾಬು ಮತ್ತು ಮಣಿಯನ್ಪಿಳ್ಳ ರಾಜು ಚಿತ್ರೀಕರಣದ ವೇಳೆ ಮೌಖಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ʻನಾನು ಶೌಚಾಲಯದಿಂದ ಹೊರಬರುತ್ತಿದ್ದಾಗ, ಜಯಸೂರ್ಯ ನನ್ನನ್ನು ಹಿಂದಿನಿಂದ ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟರು. ಇದಾದ ನಂತರ ಇಡವೆಲ ಬಾಬು ನನ್ನೊಂದಿಗೆ ಲೈಂಗಿಕ ಸಂಬಂಧದ ಆಸಕ್ತಿ ವ್ಯಕ್ತಪಡಿಸಿದರು. ಮಣಿಯನ್ಪಿಳ್ಳ ರಾಜು ತಮ್ಮ ಹೋಟೆಲ್ ವಸತಿಗೆ ಸಂಬಂಧಿಸಿದಂತೆ ʻಅನುಚಿತ ಸಲಹೆʼ ನೀಡಿದರು ಎಂದು ದೂರಿದ್ದಾರೆ.

ಹೇಮಾ ಸಮಿತಿಯ ವರದಿ ಬೆಳಕಿಗೆ ಬಂದ ನಂತರ ನಟಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಆರೋಪ ಮಾಡಿದರು, 2013 ರ ಹಿಂದಿನ ಹಲವು ಘಟನೆಗಳನ್ನು ವಿವರಿಸಿ, ಮುಖೇಶ್, ಮಣಿಯನ್ಪಿಳ್ಳ ರಾಜು, ಇಡವೆಲ ಬಾಬು, ಜಯಸೂರ್ಯ, ವಕೀಲ ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು ಅವರುಗಳಿಂದ ಅನುಭವಿಸಿದ ದೈಹಿಕ ಮತ್ತು ಮೌಖಿಕ ದೌರ್ಜನ್ಯ ಘಟನೆಗಳ ಬಗ್ಗೆ ಬರೆದಿದ್ದಾರೆ. ಹಿಂಸೆ ತಾಳಲಾರದೆ ಮಲಯಾಳಂ ಚಿತ್ರರಂಗವನ್ನು ತೊರೆದು ಚೆನ್ನೈಗೆ ತೆರಳಿದೆ ಎಂದಿದ್ದಾರೆ.

Read More
Next Story