Heli-Ambulance Crash| ಕೇದಾರನಾಥದಲ್ಲಿ ಲ್ಯಾಂಡಿಂಗ್‌ ವೇಳೆ ಹೆಲಿಕಾಪ್ಟರ್ ಪತನ
x

ಏರ್‌ ಅಂಬುಲೆನ್ಸ್‌ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಪತನಗೊಂಡಿದೆ.

Heli-Ambulance Crash| ಕೇದಾರನಾಥದಲ್ಲಿ ಲ್ಯಾಂಡಿಂಗ್‌ ವೇಳೆ ಹೆಲಿಕಾಪ್ಟರ್ ಪತನ

ಹೆಲಿಕಾಪ್ಟರ್‌ನ ಹಿಂಭಾಗಕ್ಕೆ ಹಾನಿಯಾಗಿದ್ದರಿಂದ ಹೆಲಿ-ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಪ್ರಯಾಣಿಕರು (ಒಬ್ಬ ವೈದ್ಯರು, ಒಬ್ಬ ಕ್ಯಾಪ್ಟನ್ ಮತ್ತು ವೈದ್ಯಕೀಯ ಸಿಬ್ಬಂದಿ) ಸುರಕ್ಷಿತವಾಗಿದ್ದಾರೆ.


ಏಮ್ಸ್ ರಿಷಿಕೇಶದ ಹೆಲಿ ಅಂಬುಲೆನ್ಸ್‌ ಚಾಪರ್‌ ಶನಿವಾರ ಕೇದಾರನಾಥದಲ್ಲಿ ಅಪಘಾತಕ್ಕೀಡಾಗಿದೆ.

ಹೆಲಿಕಾಪ್ಟರ್‌ನ ಹಿಂಭಾಗಕ್ಕೆ ಹಾನಿಯಾಗಿದ್ದರಿಂದ ಹೆಲಿ-ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ಸೇರಿದಂತೆ ಮೂವರು ಸುರಕ್ಷಿತವಾಗಿದ್ದಾರೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.

ಹೆಲಿ ಅಂಬುಲೆನ್ಸ್‌ ಹೆಲಿಕಾಪ್ಟರ್‌, ಋಷಿಕೇಶದಿಂದ ಕೇದಾರನಾಥಕ್ಕೆ ಹೋಗುತ್ತಿತ್ತು. ಹೆಲಿ ಅಂಬುಲೆನ್ಸ್‌ ಅಪಘಾತವಾಗಿರುವುದನ್ನು ಏಮ್ಸ್‌ ಆಸ್ಪತ್ರೆಯ ಪ್ರೊ.ಸಂದೀಪ್ ಕುಮಾರ್ ದೃಢಪಡಿಸಿದ್ದಾರೆ.

ಕೇದಾರನಾಥ ಹೆಲಿಪ್ಯಾಡ್‌ಗೆ ಕೇವಲ 20 ಮೀಟರ್ ಅಂತರದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹಾರ್ಡ್ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

2022 ಸೆ.20 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಋಷಿಕೇಶದ ಏಮ್ಸ್‌ ಆಸ್ಪತ್ರೆಯ ಹೆಲಿ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿದ್ದರು. ಹೆಲಿ ಆಂಬ್ಯುಲೆನ್ಸ್ ಸೇವೆಯನ್ನು ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರ 50-50 ಪಾಲುದಾರಿಕೆಯಲ್ಲಿ ನಿರ್ವಹಿಸುತ್ತಿದೆ.

ಮೇ 8 ರಂದು ಗಂಗೋತ್ರಿ ಧಾಮಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಐವರು ಮಹಿಳೆಯರು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

Read More
Next Story