ತೆರಿಗೆ ಮರುಮೌಲ್ಯಮಾಪನ: ಕಾಂಗ್ರೆಸ್ ಮನವಿ ವಜಾ
ಮಾ.22- ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ವಿರುದ್ಧ ಆರಂಭಿಸಿರುವ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು ರಿಟ್ ಅರ್ಜಿಗಳನ್ನು ವಜಾಗೊಳಿಸುವುದಾಗಿ ಹೇಳಿತು.
ಮೂರು ಮೌಲ್ಯಮಾಪನ ವರ್ಷ:
2014-15, 2015-16 ಮತ್ತು 2016-17ರ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮನವಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಆದೇಶವನ್ನು ಮಾ.20 ರಂದು ಕಾಯ್ದಿರಿಸಿತ್ತು. ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ʻಆದಾಯ ತೆರಿಗೆ ಇಲಾಖೆಯು ಗರಿಷ್ಠ ಆರು ಮೌಲ್ಯಮಾಪನ ವರ್ಷ ಹಿಂದಕ್ಕೆ ಹೋಗಬಹುದಿತ್ತುʼ ಎಂದರು. ಆದರೆ, ಯಾವುದೇ ಶಾಸನವನ್ನು ಉಲ್ಲಂಘಿಸಿಲ್ಲ ಎಂದು ಇಲಾಖೆ ಪ್ರತಿಪಾದಿಸಿದೆ. ಪಕ್ಷದ ತೆರಿಗೆ ಲೆಕ್ಕದಿಂದ ʼತಪ್ಪಿಸಿಕೊಂಡʼ ಆದಾಯ 520 ಕೋಟಿ ರೂ. ಎಂದು ಹೇಳಿದೆ.
ಇತ್ತೀಚೆಗೆ, 100 ಕೋಟಿ ರೂ.ಗೂ ಹೆಚ್ಚು ತೆರಿಗೆ ಪಾವತಿಸಬೇಕೆಂದು ಐಟಿ ಇಲಾಖೆ ಕಾಂಗ್ರೆಸ್ ಗೆ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು