ಹರ್ಯಾಣ: ಅಗ್ನಿವೀರರಿಗೆ ಆಯ್ದ ಸರ್ಕಾರಿ ಉದ್ಯೋಗಗಳಲ್ಲಿ ಶೇ. 10 ಮೀಸಲು
ಅಗ್ನಿವೀರರಿಗೆ ಹರ್ಯಾಣ ಸರ್ಕಾರವು ಪೊಲೀಸ್, ಅರಣ್ಯ ರಕ್ಷಕ ಮತ್ತು ಜೈಲು ವಾರ್ಡನ್‌ನಂತಹ ಸೇವೆಗಳಲ್ಲಿ ಶೇ. 10ರಷ್ಟು ಮೀಸಲು ಪ್ರಕಟಿಸಿದೆ. ಜೊತೆಗೆ, ವಯೋಮಿತಿ ಸಡಿಲಿಕೆಯಂತಹ ಇತರ ಪ್ರೋತ್ಸಾಹಕಗಳನ್ನು ಘೋಷಿಸಿದೆ.
ಕಾನ್‌ಸ್ಟೆಬಲ್, ಗಣಿ ರಕ್ಷಕ, ಅರಣ್ಯ ರಕ್ಷಕ, ಜೈಲು ವಾರ್ಡನ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕದಲ್ಲಿ ಅಗ್ನಿವೀರರಿಗೆ ಶೇ.10ರಷ್ಟು ಮೀಸಲು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.
ʻನಾವು ಈ ನಿಯಮ ರೂಪಿಸಿದ್ದೇವೆ. ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗು ವುದು. ಅಗ್ನಿವೀರರ ಮೊದಲ ಬ್ಯಾಚ್‌ನಲ್ಲಿ ವಯೋಮಿತಿ ಸಡಿಲಿಕೆಯು ಐದು ವರ್ಷ ಆಗಿರಲಿದೆ,ʼ ಎಂದು ಸೈನಿ ಹೇಳಿದರು.
Next Story