
ಹರಿಯಾಣದ ಮಾಡೆಲ್ ಶೀತಲ್ ಹತ್ಯೆ ಪ್ರಕರಣ, ಗೆಳೆಯ ಸುನಿಲ್ ಬಂಧನ
ಮ್ಯೂಸಿಕ್ ವೀಡಿಯೊಗಳನ್ನು ಮಾಡುವ ಮಾಡೆಲ್ ಆಗಿದ್ದ ಶೀತಲ್, ಶನಿವಾರ ಪಾಣಿಪತ್ನ ಅಹರ್ ಗ್ರಾಮಕ್ಕೆ ಚಿತ್ರೀಕರಣಕ್ಕಾಗಿ ಹೋಗಿದ್ದಳು ಎನ್ನಲಾಗಿದೆ. ಅಲ್ಲಿಂದ ಸುನಿಲ್ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ.
ಹರಿಯಾಣದ ಸೋನಿಪತ್ನಲ್ಲಿ ಮಾಡೆಲ್ ಶೀತಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ದೀರ್ಘ ಕಾಲದ ಗೆಳೆಯ ಸುನಿಲ್ ಎಂಬುವನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
24 ವರ್ಷದ ಶೀತಲ್, ಅಲಿಯಾಸ್ ಸಿಮ್ಮಿ ಮೃತದೇಹ ಭಾನುವಾರ ಗಂಟಲು ಕತ್ತರಿಸಿದ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಾಲುವೆಯಿಂದ ಒಂದು ಕಾರನ್ನು ಕೂಡ ಮೇಲಕ್ಕೆ ಎತ್ತಲಾಗಿದೆ.
ಪಾಣಿಪತ್ ಉಪ ವಿಭಾಗಾಧಿಕಾರಿ ಸತೀಶ್ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಸುನಿಲ್ನನ್ನು ಬಂಧಿಸಲಾಗಿದೆ. ಶೀತಲ್ನನ್ನು ಹತ್ಯೆ ಮಾಡಿದ ನಂತರ ಸುನಿಲ್ ಕಾರನ್ನು ಕಾಲುವೆಗೆ ತಳ್ಳಿ, ತಾನು ಸುರಕ್ಷಿತವಾಗಿ ಈಜಿಕೊಂಡು ಪಾರಾಗಿದ್ದೇನೆ. ಅದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಹೇಳಿದ್ದಾರೆ.
ಹತ್ಯೆಗೆ ಕಾರಣ
ಡಿಎಸ್ಪಿ ಅವರು ನೀಡಿದ ಮಾಹಿತಿ ಪ್ರಕಾರ ಶೀತಲ್ ಮತ್ತು ಸುನಿಲ್ ನಡುವೆ ಹತ್ಯೆಗೆ ಮುನ್ನ ವಾಗ್ವಾದ ನಡೆದಿತ್ತು. ಅಂದ ಹಾಗೆ ಶನಿವಾರದಿಂದ ಶೀತಲ್ ಕಾಣೆಯಾಗಿದ್ದಳು. ಮ್ಯೂಸಿಕ್ ವೀಡಿಯೊಗಳನ್ನು ಮಾಡುವ ಮಾಡೆಲ್ ಆಗಿದ್ದ ಶೀತಲ್, ಶನಿವಾರ ಪಾಣಿಪತ್ನ ಅಹರ್ ಗ್ರಾಮಕ್ಕೆ ಚಿತ್ರೀಕರಣಕ್ಕಾಗಿ ಹೋಗಿದ್ದಳು ಎನ್ನಲಾಗಿದೆ. ಅಲ್ಲಿಂದ ಸುನಿಲ್ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ.
ಸುನಿಲ್ ಈಗಾಗಲೇ ವಿವಾಹಿತ ಎಂಬ ಸಂಗತಿಯನ್ನು ಮುಚ್ಚಿಟ್ಟಿದ್ದಕ್ಕಾಗಿ ಶೀತಲ್ ಸಿಟ್ಟಾಗಿದ್ದಳು ಎಂದು ಡಿಎಸ್ಪಿ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಈ ಹಿಂದೆಯೂ ವಾಗ್ವಾದಗಳು ನಡೆಯುತ್ತಿದ್ದವು.
ಕುಟುಂಬದ ದೂರು
ಪೊಲೀಸರು ತಿಳಿಸಿದಂತೆ, ಶೀತಲ್ ತನ್ನೊಂದಿಗೆ ವಾಸಿಸುತ್ತಿದ್ದ ಸಹೋದರಿಗೆ ಕರೆ ಮಾಡಿ, ಸುನಿಲ್ ತನಗೆ ಹಿಂಸೆ ನೀಡುತ್ತಿದ್ದಾನೆ ಎಂದು ತಿಳಿಸಿದ್ದಳು. ಆದರೆ, ನಂತರ ಕುಟುಂಬಕ್ಕೆ ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಆ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಕುಟುಂಬದವರು ಪೊಲೀಸರಿಗೆ ಕಾಣೆಯಾಗಿದ್ದವರ ದೂರು ನೀಡಿದ್ದರು.