ಭಾರಿ ಮಳೆ: ರಾಜ್‌ಕೋಟ್ ವಿಮಾನ ನಿಲ್ದಾಣದ ಚಾವಣಿ ಕುಸಿತ
ಭಾರೀ ಮಳೆಯಿಂದ ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರು ಆಗಮನ-ನಿರ್ಗಮನ ಪ್ರದೇಶದ ಚಾವಣಿ ಣ ಕುಸಿದಿದೆ.
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಚಾವಣಿ ಕುಸಿದು ಒಬ್ಬರು ಸಾವಿಗೀಡಾದ ಒಂದು ದಿನದ ನಂತರ ನಡೆದಿರುವ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ.
ಸಂಗ್ರಹವಾದ ನೀರು: ರಾಜ್‌ಕೋಟ್‌ನ ಚಾವಣಿಯ ನಿರ್ವಹಣೆ ಸಮಯದಲ್ಲಿ ಅದರ ಮೇಲೆ ಸಂಗ್ರಹವಾದ ನೀರನ್ನು ತೆಗೆಯುವಾಗ ಮುರಿದುಹೋಯಿತು.
ನೈಋತ್ಯ ಮುಂಗಾರು ರಾಜ್ಯಕ್ಕೆ ಕಾಲಿಟ್ಟಿದ್ದು, ಗುಜರಾತಿನಲ್ಲಿ ಭಾರೀ ಮಳೆಯಾಗುತ್ತಿದೆ.
ಶುಕ್ರವಾರ ನವದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿದು 45 ವರ್ಷದ ಟ್ಯಾಕ್ಸಿ ಚಾಲಕ ಸಾವನ್ನಪ್ಪಿದರು ಮತ್ತು ಎಂಟು ಮಂದಿ ಗಾಯಗೊಂಡರು.
ಇದರಿಂದ 200 ವಿಮಾನಗಳನ್ನು ನಿರ್ವಹಿಸುವ ಟರ್ಮಿನಲ್ 1 ರ ಕಾರ್ಯಾಚರಣೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಮೃತರ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 3 ಲಕ್ಷ ರೂ.ಪರಿಹಾರ ಘೋಷಿಸಿದರು.
ತಪಾಸಣೆಗೆ ಆದೇಶ: ದೇಶದ ಎಲ್ಲಾ ವಿಮಾನ ನಿಲ್ದಾಣಗಳ ತಪಾಸಣೆಗೆ ಸಚಿವಾಲಯ ಆದೇಶಿಸಿದೆ. ಗುರುವಾರ ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಬಟ್ಟೆಯ ಚಾವಣಿಯ ಒಂದು ಭಾಗ ಕುಸಿದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.