ಕೋಚಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಕಾನೂನು: ಅತಿಶಿ
x
ಸಚಿವೆ ಅತಿಶಿ ಮರ್ಲೆನಾ ಹಾಗೂ ದಿಲ್ಲಿ ಮೇಯರ್‌ ಶೆಲ್ಲಿ ಒಬೆರಾಯ್

ಕೋಚಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಕಾನೂನು: ಅತಿಶಿ

ಹೊಸ ಕಾನೂನು ಮೂಲಸೌಕರ್ಯ, ಶಿಕ್ಷಕರ ವಿದ್ಯಾರ್ಹತೆ, ಶುಲ್ಕ ನಿಯಂತ್ರಣ ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಗಟ್ಟುವ ನಿಬಂಧನೆಗಳನ್ನು ಹೊಂದಿರುತ್ತದೆ ಎಂದು ಅತಿಶಿ ಹೇಳಿದರು.


ದೆಹಲಿ ಸರ್ಕಾರವು ನಗರದಲ್ಲಿ ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ಕಾನೂನನ್ನು ತರಲಿದೆ ಎಂದು ಕ್ಯಾಬಿನೆಟ್ ಸಚಿವೆ ಅತಿಶಿ ಬುಧವಾರ (ಜುಲೈ 31) ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻಕಾನೂನು ರೂಪಿಸಲು ಅಧಿಕಾರಿಗಳು ಮತ್ತು ವಿವಿಧ ಕೋಚಿಂಗ್ ಹಬ್‌ಗಳ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ. ಕಾನೂನು ಮೂಲಸೌಕರ್ಯ, ಶಿಕ್ಷಕರ ಅರ್ಹತೆ, ಶುಲ್ಕ ನಿಯಂತ್ರಣ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಡೆಗಟ್ಟಲು ನಿಬಂಧನೆಗಳನ್ನು ಹೊಂದಿರುತ್ತದೆ. ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಹ ಪಡೆಯಲಾಗುವುದು,ʼ ಎಂದು ಹೇಳಿದರು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕಾನೂನು ಉಲ್ಲಂಘಿಸಿ, ನೆಲಮಾಳಿಗೆಯನ್ನು ಬಳಸುವ ಕೋಚಿಂಗ್ ಸೆಂಟರ್‌ಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ರಾಜಿಂದರ್ ನಗರ, ಮುಖರ್ಜಿ ನಗರ, ಲಕ್ಷ್ಮಿ ನಗರ ಮತ್ತು ಪ್ರೀತ್ ವಿಹಾರ್‌ನಲ್ಲಿರುವ 30 ಕೋಚಿಂಗ್ ಸೆಂಟರ್‌ಗಳ ನೆಲಮಾಳಿಗೆಗಳನ್ನು ಮುಚ್ಚಲಾಗಿದೆ. 200 ಕೋಚಿಂಗ್ ಸೆಂಟರ್‌ಗಳಿಗೆ ನೋಟಿಸ್‌ ನೀಡಲಾಗಿದೆ,ʼ ಎಂದು ಹೇಳಿದರು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ʻಹಳೆಯ ರಾಜಿಂದರ್ ನಗರ ಘಟನೆ ಕುರಿತ ಮ್ಯಾಜಿಸ್ಟ್ರೇಟ್ ತನಿಖೆ ವರದಿಯನ್ನು ಆರು ದಿನಗಳಲ್ಲಿ ಸಲ್ಲಿಸಲಾಗುವುದು. ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಟ್ಟಡದ ಅಕ್ರಮ ಬಳಕೆ ಹಳೆಯ ರಾಜಿಂದರ್ ನಗರ ದುರಂತಕ್ಕೆ ಕಾರಣವಾಯಿತು,ʼ ಎಂದು ಹೇಳಿದರು.

ಅತಿಶಿ ಅವರ ಪ್ರಕಾರ, ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ನೆಲಮಾಳಿಗೆಯನ್ನು ಅಕ್ರಮವಾಗಿ ಬಳಸಿರುವ ಬಗ್ಗೆ ಐಎಎಸ್ ಆಕಾಂಕ್ಷಿ ಯೊಬ್ಬರು ಎಂಸಿಡಿಗೆ ನೀಡಿದ ದೂರನ್ನು ನಿರ್ಲಕ್ಷಿಸಿದ ಅಧಿಕಾರಿ ಯಾರು ಎಂಬುದನ್ನು ತನಿಖೆ ಖಚಿತಪಡಿಸುತ್ತದೆ.

ಗ್ವಾಲಿಯರ್‌ನ ಐಎಎಸ್‌ ಆಕಾಂಕ್ಷಿಯೊಬ್ಬರು ಸೋಮವಾರ (ಜುಲೈ 29) ನೆಲಮಾಳಿಗೆಯನ್ನು ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಎಂಸಿಡಿಗೆ ದೂರು ನೀಡಿದ್ದರು. ಜುಲೈ 15 ಮತ್ತು 22 ರಂದು ಜ್ಞಾಪನಾಪತ್ರ ಕಳುಹಿಸಿದ್ದರು. ಆದರೆ, ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದ್ದರು.

Read More
Next Story