
ವಿಜ್ಞಾನದ ಉತ್ತೇಜನಕ್ಕಾಗಿ 1989ರಲ್ಲಿ ಸ್ಥಾಪಿಸಿದ್ದ ʼವಿಜ್ಞಾನ ಪ್ರಸಾರʼ ಸಂಸ್ಥೆ ಮುಚ್ಚಿದ ಕೇಂದ್ರ ಸರ್ಕಾರ
ಸೆಪ್ಟೆಂಬರ್ 6, 2023ರಂದು ಕ್ಯಾಬಿನೆಟ್‌ನಲ್ಲಿ ʼವಿಜ್ಞಾನ ಪ್ರಸಾರʼ ಸಂಸ್ಥೆಯನ್ನು ಮುಚ್ಚುವಂತೆ ಹಾಗೂ 9 ತಿಂಗಳಲ್ಲಿ ಪ್ರಕ್ರಿಯೆ ಮುಗಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರ ಅನುಸಾರವಾಗಿ, ವಿಜ್ಞಾನ ಪ್ರಸಾರವನ್ನು ಮುಚ್ಚಲು ಅಗತ್ಯವಿದ್ದ ಎಲ್ಲಾ ಕ್ರಮಗಳು ಪೂರ್ಣಗೊಳಿಸಲಾಗಿದೆ.
ವಿಜ್ಞಾನವನ್ನು ಜನಪ್ರಿಯಗೊಳಿಸಲು ಮತ್ತು ಈ ವಿಷಯದ ಕುರಿತು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದೊಂದಿಗೆ 35 ವರ್ಷಗಳ ಹಿಂದೆ (1989ರಲ್ಲಿ) ಸ್ಥಾಪಿಸಲಾಗಿದ್ದ ಸ್ವಾಯತ್ತ ಸಂಸ್ಥೆಯಾದ ʼವಿಜ್ಞಾನ ಪ್ರಸಾರʼ ವನ್ನು ಕೇಂದ್ರ ಸರಕಾರ ಮುಚ್ಚಿದ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು ಮುಚ್ಚುವಿಕೆ ಪ್ರಕ್ರಿಯೆ ಕುರಿತು ವಿವರಣೆಗಳನ್ನು ನೀಡಿದೆ.
1989ರ ಅಕ್ಟೋಬರ್ 12 ರಂದು ಸಂಘದ ರೂಪದಲ್ಲಿ ಸ್ಥಾಪಿಸಲಾದ ʼವಿಜ್ಞಾನ ಪ್ರಸಾರʼ ಸಂಸ್ಥೆಯ ಕೊನೆಗೊಳಿಸುವುದನ್ನು ಎಂದು ನವೆಂಬರ್ 12ರಂದು ಖಚಿತಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಕುರಿತ ಪ್ರಕಟಣೆಯನ್ನು ನವೆಂಬರ್ 16ರಂದು ಹೊರಡಿಸಲಾಗಿದೆ.
ಸೆಪ್ಟೆಂಬರ್ 6, 2023ರಂದು ಕ್ಯಾಬಿನೆಟ್‌ನಲ್ಲಿ ʼವಿಜ್ಞಾನ ಪ್ರಸಾರʼ ಸಂಸ್ಥೆ ಮುಚ್ಚುವಂತೆ ಹಾಗೂ 9 ತಿಂಗಳಲ್ಲಿ ಪ್ರಕ್ರಿಯೆ ಮುಗಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರ ಅನುಸಾರವಾಗಿ, ಸಂಸ್ಥೆಯನ್ನು ಮುಚ್ಚಲು ಅಗತ್ಯವಿದ್ದ ಎಲ್ಲಾ ಕ್ರಮಗಳು ಪೂರ್ಣಗೊಳಿಸಲಾಗಿದೆ. ಅಕ್ಟೋಬರ್ 21ರ ಮಧ್ಯಾಹ್ನದ ವೇಳೆಗೆ ಅದನ್ನು ಮುಚ್ಚಲಾಗಿದೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಗಾಂಧಿನಗರದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್‌ಗೆ ಇನ್ನುಳಿದ ಆಡಳಿತಾತ್ಮಕ ಮತ್ತು ಕಾನೂನು ಪ್ರಕರಣಗಳು ಮತ್ತು ಇತರ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ.
ವವೈಜ್ಞಾನಿಕ ಜ್ಞಾನವನ್ನು ಉತ್ತೇಜಿಸುವ ಮೂಲಕ ಮತ್ತು ವೈಚಾರಿಕ ದೃಷ್ಟಿಕೋನವನ್ನು ಬೆಳೆಸುವ ಮೂಲಕ ಸರ್ಕಾರದ ವಿಜ್ಞಾನ ಜನಪ್ರಿಯಗೊಳಿಸುವ ಕಾರ್ಯಸೂಚಿಯನ್ನು ಪೂರೈಸುವುದು ವಿಜ್ಞಾನ ಪ್ರಸಾರದ ಮುಖ್ಯ ಉದ್ದೇಶವಾಗಿತ್ತು.