ಮುಂಗಾರು ಅಧಿವೇಶನ: ಕೇಂದ್ರದಿಂದ ಆರು ಹೊಸ ಮಸೂದೆಗಳ ಪಟ್ಟಿ
x

ಮುಂಗಾರು ಅಧಿವೇಶನ: ಕೇಂದ್ರದಿಂದ ಆರು ಹೊಸ ಮಸೂದೆಗಳ ಪಟ್ಟಿ

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಂದು ಪ್ರಾರಂಭವಾಗಿ, ಆಗಸ್ಟ್ 12 ರವರೆಗೆ ಮುಂದುವರಿಯುತ್ತದೆ.


ನವದೆಹಲಿ: ಮುಂದಿನ ವಾರ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣೆ ಕಾನೂನಿಗೆ ತಿದ್ದುಪಡಿ ಸೇರಿದಂತೆ ಆರು ಹೊಸ ಮಸೂದೆಗಳನ್ನು ಮಂಡಿಸಲಾಗುತ್ತದೆ.

ಹಣಕಾಸು ಮಸೂದೆ ಹೊರತುಪಡಿಸಿ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವ್ಯಾಪಾರ ಸುರಳೀತಗೊಳಿಸಲು 1934 ರ ಏರ್‌ಕ್ರಾಫ್ಟ್ ಆಕ್ಟ್ ಅನ್ನು ಬದಲಿಸುವ ಭಾರತೀಯ ವಾಯುಯಾನ್ ವಿಧೇಯಕ್ 2024 ವನ್ನು ಪಟ್ಟಿ ಮಾಡಲಾಗಿದೆ.

ಲೋಕಸಭೆಯ ಸಚಿವಾಲಯ ಗುರುವಾರ ಸಂಜೆ ಹೊರಡಿಸಿದ ಬುಲೆಟಿನ್‌ನಲ್ಲಿ ಮಸೂದೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜುಲೈ 22 ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 12 ರವರೆಗೆ ನಡೆಯಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರ ಮಂಗಳವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಅಧಿವೇಶನದಲ್ಲಿ ಪರಿಚಯಿಸುವ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾದ ಇತರ ಮಸೂದೆಗಳೆಂದರೆ, ಬಾಯ್ಲರ್‌ಗಳ ಮಸೂದೆ, ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಮತ್ತು ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ.

ವ್ಯವಹಾರ ಸಲಹಾ ಸಮಿತಿ ರಚನೆ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಕಾರ್ಯಸೂಚಿಯನ್ನು ನಿರ್ಧರಿಸುವ ವ್ಯವಹಾರ ಸಲಹಾ ಸಮಿತಿ(ಬಿಎಸಿ)ಯನ್ನು ರಚಿಸಿದ್ದಾರೆ.

ಸ್ಪೀಕರ್ ಅಧ್ಯಕ್ಷತೆಯ ಸಮಿತಿಯಲ್ಲಿ ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ), ಪಿ.ಪಿ. ಚೌಧರಿ (ಬಿಜೆಪಿ), ಲವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), ನಿಶಿಕಾಂತ್ ದುಬೆ (ಬಿಜೆಪಿ), ಗೌರವ್ ಗೊಗೋಯ್ (ಕಾಂಗ್ರೆಸ್), ಸಂಜಯ್ ಜೈಸ್ವಾಲ್ (ಬಿಜೆಪಿ), ದಿಲೇಶ್ವರ್ ಕಮೈತ್ (ಜೆಡಿ- ಯು), ಭರ್ತೃಹರಿ ಮಹತಾಬ್ (ಬಿಜೆಪಿ), ದಯಾನಿಧಿ ಮಾರನ್ (ಡಿಎಂಕೆ), ಬೈಜಯಂತ್ ಪಾಂಡಾ (ಬಿಜೆಪಿ), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಕೋಡಿಕುನ್ನಿಲ್ ಸುರೇಶ್ (ಕಾಂಗ್ರೆಸ್), ಅನುರಾಗ್ ಠಾಕೂರ್ (ಬಿಜೆಪಿ) ಮತ್ತು ಲಾಲ್ಜಿ ವರ್ಮಾ (ಎಸ್‌ಪಿ) ಸದಸ್ಯರಾಗಿರುತ್ತಾರೆ.

Read More
Next Story