ಪ್ರಧಾನಿ ಮೋದಿಯ 2ನೇ ಕಾರ್ಯದರ್ಶಿಯಾಗಿ ಆರ್​ಬಿಐ ಮಾಜಿ ಗವರ್ನರ್​ ಶಕ್ತಿಕಾಂತ್ ದಾಸ್​ ಆಯ್ಕೆ
x

ಪ್ರಧಾನಿ ಮೋದಿಯ 2ನೇ ಕಾರ್ಯದರ್ಶಿಯಾಗಿ ಆರ್​ಬಿಐ ಮಾಜಿ ಗವರ್ನರ್​ ಶಕ್ತಿಕಾಂತ್ ದಾಸ್​ ಆಯ್ಕೆ

2016ರಲ್ಲಿ ಕೇಂದ್ರ ಸರ್ಕಾರವು 2 ಸಾವಿರ ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ್ದ ವೇಳೆ ಶಕ್ತಿಕಾಂತ ದಾಸ್‌ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.


ಆರ್​ಬಿಐ ಗವರ್ನರ್ ಹುದ್ದೆಯಿಂದ ಕಳೆದ ಡಿಸೆಂಬರ್​ನಲ್ಲಿ ಕೆಳಗೆ ಇಳಿದಿದ್ದ ಶಕ್ತಿಕಾಂತ್ ದಾಸ್ (Shaktikanta Das) ಅವರು ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ 2ನೇ ಪ್ರಧಾನ ಕಾರ್ಯದರ್ಶಿ (Principal Secretary-2) ಆಗಿ ನೇಮಕಗೊಂಡಿದ್ದಾರೆ. ಪ್ರಧಾನ ಮಂತ್ರಿಯವರಿಗೆ 1ನೇ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪಿ.ಕೆ.ಮಿಶ್ರಾ ಸೇವೆ ನೀಡುತ್ತಿದ್ದು ಅವರೊಂದಿಗೆ ದಾಸ್​ ಕೂಡ ಸೇರಿಕೊಳ್ಳಲಿದ್ದಾರೆ.

"ಐಎಎಸ್ ಅಧಿಕಾರಿಯಾಗಿರುವ ಶಕ್ತಿಕಾಂತ್​ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ" ಎಂದು ಕೇಂದ್ರ ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಸುದೀರ್ಘ ಕಾಲ ಆರ್​​ಬಿಐ ಗವರ್ನರ್ ಆಗಿದ್ದ ಶಕ್ತಿಕಾಂತ್ ದಾಸ್ ಅವರು ಕಳೆದ ಡಿಸೆಂಬರ್​ನಲ್ಲಿ ನಿವೃತ್ತಿ ಹೊಂದಿದ್ದರು.

ಶಕ್ತಿಕಾಂತ ದಾಸ್ ಯಾರು?

ಶಕ್ತಿಕಾಂತ್ ದಾಸ್ ಅವರು1980ರ ಬ್ಯಾಚ್‌ನ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿ. ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರ್​ಬಿಐ ಮಾಜಿ ಊರ್ಜಿತ್ ಪಟೇಲ್ ಹಠಾತ್ತನೆ ರಾಜೀನಾಮೆ ನೀಡಿದ ನಂತರ 2018ರಲ್ಲಿ ದಾಸ್​ ಅವರು ಅಧಿಕಾರ ಸ್ವೀಕರಿಸಿದ್ದರು.

2016ರಲ್ಲಿ ಕೇಂದ್ರ ಸರ್ಕಾರವು 2 ಸಾವಿರ ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ್ದ ವೇಳೆ ಶಕ್ತಿಕಾಂತ ದಾಸ್‌ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2017ರ ಜು. 1ರಂದು ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿದ್ದರು. ಅನೇಕ ಪರೋಕ್ಷ ತೆರಿಗೆಗಳನ್ನು ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021ರಲ್ಲಿ ಅವರು ಆರ್​ಬಿಐನಿಂದ ನಿವೃತ್ತಿ ಹೊಂದಬೇಕಾಗಿದ್ದರೂ 3 ವರ್ಷಗಳ ಕಾಲ ಇವರ ಸೇವಾ ಅವಧಿ ವಿಸ್ತರಿಸಲಾಗಿತ್ತು. ಹೀಗಾಗಿ 1960ರ ನಂತರ ಆರ್‌ಬಿಐ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಗವರ್ನರ್‌ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಶಕ್ತಿಕಾಂತ ದಾಸ್‌ ಅವರ ಹೆಸರಲ್ಲಿದೆ. ನಿವೃತ್ತಿಯ ನಂತರ ಅವರನ್ನು 15ನೇ ಹಣಕಾಸು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಅಗ್ರ ಬ್ಯಾಂಕರ್ ಎಂಬ ಹೆಗ್ಗಳಿಕೆ

2023ರಲ್ಲಿ ವಿಶ್ವದ ಅಗ್ರ ಬ್ಯಾಂಕರ್‌ಗಳ ಪಟ್ಟಿಯಲ್ಲಿ ಶಕ್ತಿಕಾಂತ ದಾಸ್ ಮೊದಲ ಸ್ಥಾನ ಪಡೆದುಕೊಂಡಿದ್ದರು. ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಅವರನ್ನು ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್ ಎಂದು ಪಟ್ಟಿ ಮಾಡಿತ್ತು.

Read More
Next Story