ಆಪ್‌ಗೆ ಒಂದು ಹೋಯ್ತು, ಮತ್ತೊಂದು ಬಂತು; ಬಿಜೆಪಿ ನಾಯಕ ಅನಿಲ್ ಝಾ ಸೇರ್ಪಡೆ
x
ಅನಿಲ್‌ ಝಾ ಬರಮಾಡಿಕೊಂಡ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅನಿಲ್‌ ಝಾ.

ಆಪ್‌ಗೆ ಒಂದು ಹೋಯ್ತು, ಮತ್ತೊಂದು ಬಂತು; ಬಿಜೆಪಿ ನಾಯಕ ಅನಿಲ್ ಝಾ ಸೇರ್ಪಡೆ

ಮಂಡಿ ಹೌಸ್ ಬಳಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಜ್ರಿವಾಲ್, ಝಾ ಅವರನ್ನು ಎಎಪಿಗೆ ಸ್ವಾಗತಿಸಿದರು. ಝಾ ಅವರನ್ನು ದೆಹಲಿ ರಾಜಕೀಯದ "ಅತಿದೊಡ್ಡ" ಪೂರ್ವಾಂಚಲಿ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.


ಬಿಜೆಪಿಯ ಪೂರ್ವಾಂಚಲಿ ನಾಯಕ ಮತ್ತು ಕಿರಾರಿ ಕ್ಷೇತ್ರದ ಎರಡು ಬಾರಿ ಮಾಜಿ ಶಾಸಕ ಅನಿಲ್ ಝಾ ಅವರು ಭಾನುವಾರ ಆಮ್‌ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರನ್ನು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬರ ಮಾಡಿಕೊಂಡಿಕೊಂಡಿದ್ದಾರೆ. ನಜಾಫ್‌ಗಢ ಶಾಸಕ ಮತ್ತು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಬೆಳಗ್ಗೆ ಏಕಾಏಕಿ ಆಪ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಇದು ಆಪ್‌ಗೆ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗಿದೆ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಪೂರ್ವಾಂಚಲಿಯಲ್ಲಿ ಪ್ರಾಬಲ್ಯ ಹೊಂದಿರುವ ಝಾ ಆಪ್‌ ಸೇರಿಕೊಂಡಿದ್ದಾರೆ.

ಮಂಡಿ ಹೌಸ್ ಬಳಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಜ್ರಿವಾಲ್, ಝಾ ಅವರನ್ನು ಎಎಪಿಗೆ ಸ್ವಾಗತಿಸಿದರು. ಬಳಿಕ ಝಾ ಅವರನ್ನು ದೆಹಲಿ ರಾಜಕೀಯದ ಪ್ರಭಾವಿ ಪೂರ್ವಾಂಚಲಿ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದರು. ಅವರು ಕಿರಾರಿಯಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಧಾನಿಯಲ್ಳೂ ಎಎಪಿಯನ್ನು ಉತ್ತೇಜಿಸಲಿದ್ದಾರೆ ಎಂದು ಅವರು ಹೇಳಿದರು .

ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಿರಾರಿಯ ಹಾಲಿ ಎಎಪಿ ಶಾಸಕನ ಸ್ಥಾನವನ್ನು ಝಾ ತುಂಬಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಜ್ರಿವಾಲ್‌ಗಾಗಿ ಸೇರ್ಪಡೆ

ಕೇಜ್ರಿವಾಲ್ ಅವರ ವ್ಯಕ್ತಿತ್ವ ಮತ್ತು ನಗರದ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುವ ಪೂರ್ವಾಂಚಲಿ ಜನರ ಜೀವನವನ್ನು ಸುಧಾರಿಸಲು ಎಎಪಿ ಸರ್ಕಾರ ಮಾಡಿದ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಝಾ ಹೇಳಿದ್ದಾರೆ .

ಎಎಪಿ ಸರ್ಕಾರವು 10,000 ಕಿ.ಮೀ ರಸ್ತೆಗಳು ಮತ್ತು ಬೀದಿಗಳನ್ನು ನಿರ್ಮಿಸಿದೆ, 6800 ಕಿ.ಮೀ ಒಳಚರಂಡಿ ಮಾರ್ಗಗಳನ್ನು ಹಾಕಿದೆ ಮತ್ತು 1,650 ಅನಧಿಕೃತ ಕಾಲೊನಿಗಳಲ್ಲಿ ನೀರಿನ ಸಂಪರ್ಕ ನೀಡಿದೆ. "ಬಿಜೆಪಿ ಏನೂ ಮಾಡಿಲ್ಲ" ಎಂದು ಕೇಜ್ರಿವಾಲ್ ಆರೋಪಿಸಿದರು.

"ಪೂರ್ವಾಂಚಲಿ ಜನರು ಬಿಜೆಪಿಗೆ ಏಕೆ ಮತ ಚಲಾಯಿಸಬೇಕು ಎಂದು ನಾನು ಬಿಜೆಪಿ ಮತ್ತು ಅದರ ನಾಯಕ ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ. ದೆಹಲಿಯ ಪೂರ್ವಾಂಚಲಿ ಜನರಿಗಾಗಿ ಅವರು ಮಾಡಿದ ಒಂದೇ ಒಂದು ಕೆಲಸವನ್ನು ವಿವರಿಸಲು ನಾನು ಸವಾಲು ಹಾಕುತ್ತೇನೆ. ಈ ಕಾಲೋನಿಗಳಲ್ಲಿನ ಆಸ್ತಿಗಳ ನೋಂದಣಿಗೆ ಅವರು ಭರವಸೆ ನೀಡಿದ್ದು. ಆದರೆ ಐದು ವರ್ಷಗಳಲ್ಲಿ ಸಾಧ್ಯವಾಗಲಿಲ್ಲ" ಎಂದು ಕೇಜ್ರಿವಾಳ್‌ ಹೇಳಿದ್ದಾರೆ.

ಎಎಪಿಗೆ ಗೆಹ್ಲೋಟ್ ರಾಜೀನಾಮೆ ನೀಡಿದ ಬಗ್ಗೆ ಪ್ರತಿಕ್ರಿಯಿಸಲು ಕೇಜ್ರಿವಾಲ್ ನಿರಾಕರಿಸಿದ್ದಾರೆ.

Read More
Next Story