ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ಆಗಸ್ಟ್ 30 ರಂದು ಬಿಜೆಪಿ ಸೇರ್ಪಡೆ
ಹೊಸದಿಲ್ಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ʻಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಆದಿವಾಸಿ ನಾಯಕ ಚಂಪೈ ಸೊರೆನ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಅವರು ಆಗಸ್ಟ್ 30 ರಂದು ರಾಂಚಿಯಲ್ಲಿ ಬಿಜೆಪಿಗೆ ಸೇರಲಿದ್ದಾರೆ,ʼ ಎಂದು ಶರ್ಮಾ ಎಕ್ಸ್ ನಲ್ಲಿ ಹೇಳಿದ್ದಾರೆ. ಅಮಿತ್ ಶಾ ಅವರೊಟ್ಟಿಗೆ ಸೊರೆನ್ ಇರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಹ ಪ್ರಭಾರಿಯಾಗಿರುವ ಶರ್ಮಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕತ್ವವು ತಮ್ಮನ್ನು ಅವಮಾನಿಸುತ್ತಿದೆ. ಶೀಘ್ರವೇ ಮುಂದಿನ ರಾಜಕೀಯ ಹಾದಿಯನ್ನು ನಿರ್ಧರಿಸು ವುದಾಗಿ ಈ ಹಿಂದೆ ಸೊರೆನ್ ಹೇಳಿದ್ದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಪಕ್ಷದ ನಾಯಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರಿಂದ, ಚಂಪೈ ಅವರು ಬಿಜೆಪಿಗೆ ಸೇರಬಹುದು ಎನ್ನಲಾಗಿತ್ತು.
Next Story