ಕೆ. ಪೊನ್ಮುಡಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ
ಚೆನ್ನೈ, ಮಾ. 22 - ಡಿಎಂಕೆ ಹಿರಿಯ ನಾಯಕ ಕೆ. ಪೊನ್ಮುಡಿ ಅವರು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಸಚಿವರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
19 ಡಿಸೆಂಬರ್ 2023 ರಂದು ಅಕ್ರಮ ಆಸ್ತಿ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟಿನಿಂದ ಶಿಕ್ಷೆಗೊಳಗಾದ ಅವರು, ಸುಮಾರು ಮೂರು ತಿಂಗಳ ನಂತರ ಉನ್ನತ ಶಿಕ್ಷಣ ಸಚಿವರಾಗಿ ಸಂಪುಟಕ್ಕೆ ವಾಪಸಾಗಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಮತ್ತು ಮಾ.ಸುಬ್ರಮಣಿಯನ್ ಸೇರಿದಂತೆ ಕೆಲವು ಸಚಿವರ ಸಮ್ಮುಖದಲ್ಲಿ ರಾಜ್ಯಪಾಲರು ಪೊನ್ಮುಡಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಹಿಂದುಳಿದ ವರ್ಗಗಳ ಸಚಿವ ಆರ್.ಎಸ್.ರಾಜಕಣ್ಣಪ್ಪನ್ ಅವರ ಬಳಿಯಿದ್ದ ಉನ್ನತ ಶಿಕ್ಷಣ ಖಾತೆಯನ್ನು ಪೊನ್ಮುಡಿ ಅವರಿಗೆ ನೀಡಲಾಯಿತು. ರಾಜಕಣ್ಣಪ್ಪನ್ ಅವರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಚಿವರಾಗಿರುವರು.
Next Story