Wayanad Landslide| ಭೂಕುಸಿತ ಪೀಡಿತ ಪ್ರದೇಶದ ಪರಿಶೀಲನೆಗೆ ತಜ್ಞರ ತಂಡ
x
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾ ನಿರ್ದೇಶಕ ಪಿಯೂಷ್ ಆನಂದ್ ಅವರು ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

Wayanad Landslide| ಭೂಕುಸಿತ ಪೀಡಿತ ಪ್ರದೇಶದ ಪರಿಶೀಲನೆಗೆ ತಜ್ಞರ ತಂಡ


ವಯನಾಡು(ಕೇರಳ): ನೂರಾರು ಜೀವಗಳನ್ನು ಬಲಿತೆಗೆದುಕೊಂಡ ದುರಂತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಐದು ಸದಸ್ಯರ ತಜ್ಞರ ತಂಡವು ಮಂಗಳವಾರ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಯೋಜಿಸಿರುವ ರಾಷ್ಟ್ರೀಯ ಭೂ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಜಾನ್ ಮಥಾಯ್ ಅವರ ನೇತೃತ್ವದ ತಂಡ ಮೆಪ್ಪಾಡಿ ಪಂಚಾಯತಿಯ ಭೂಕುಸಿತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ವಿಪತ್ತು ಹೇಗೆ ಸಂಭವಿಸಿತು ಮತ್ತು ಭೂಕುಸಿತದಲ್ಲಿ ಸಂಭವಿಸಿದ ವಿದ್ಯಮಾನಗಳು ಯಾವುವು ಎಂಬುದನ್ನು ಸಹ ತಂಡ ಮೌಲ್ಯಮಾಪನ ಮಾಡುತ್ತದೆ. ಪರಿಶೀಲನೆ ನಂತರ ತಂಡ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸುತ್ತದೆ ಮತ್ತು ಪ್ರದೇಶಕ್ಕೆ ಸೂಕ್ತವಾದ ಭೂ ಬಳಕೆಗೆ ಶಿಫಾರಸು ಮಾಡಲಿದೆ.

ತಂಡ 2005ರ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಯ್ದೆಯಡಿ ಕಾರ್ಯನಿರ್ವಹಿಸಲಿದೆ. ತಂಡದಲ್ಲಿ ಜಲ ಸಂಬಂಧಿತ ವಿಪತ್ತು ನಿರ್ವಹಣೆ ಉನ್ನತ ಕೇಂದ್ರ (ಸಿಡಬ್ಲ್ಯುಆರ್‌ಎಂ)ದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ.ಟಿ.ಕೆ.ದೃಶ್ಯ, ಸುರತ್ಕಲ್ ಎನ್‌ಐಟಿ ಸಹ ಪ್ರಾಧ್ಯಾಪಕ ಡಾ.ಶ್ರೀವಲ್ಸ, ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ತಾರಾ ಮನೋಹರನ್ ಮತ್ತು ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅವಘಡ ವಿಶ್ಲೇಷಕ ಪಿ. ಪ್ರದೀಪ್ ಇರುತ್ತಾರೆ.

Read More
Next Story