ಲಡಾಖ್‌: ನದಿ ದಾಟುತ್ತಿದ್ದ ಐವರು ಯೋಧರ ಸಾವು
x

ಲಡಾಖ್‌: ನದಿ ದಾಟುತ್ತಿದ್ದ ಐವರು ಯೋಧರ ಸಾವು


ಲಡಾಖ್:‌ ಲಡಾಖಿನ ನ್ಯೋಮಾ-ಚುಶುಲ್ ಪ್ರದೇಶದಲ್ಲಿನ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕ್‌ನಲ್ಲಿ ನದಿಯನ್ನು ದಾಟುತ್ತಿದ್ದ ಐವರು ಸೈನಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ಹ್ ಬಳಿ ಶನಿವಾರ ಬೆಳಗ್ಗೆ 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಹೇಳಿದರು.

ಐವರು ಸೈನಿಕರಿದ್ದ ಟಿ 72 ಟ್ಯಾಂಕ್‌, ನದಿ ದಾಟುತ್ತಿದ್ದಾಗ ಹಠಾತ್ ಪ್ರವಾಹದಿಂದಾಗಿ ಮುಳುಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʻಲಡಾಖಿನಲ್ಲಿ ನದಿ ದಾಟುತ್ತಿದ್ದ ಟ್ಯಾಂಕ್ ನಲ್ಲಿದ್ದ 5 ಯೋಧರು ಪ್ರಾಣ ಕಳೆದುಕೊಂಡಿರುವುದಕ್ಕೆ ತೀವ್ರ ದುಃಖವಾಗಿದೆ,ʼ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.

Read More
Next Story