ಐಸ್ ಕ್ರೀಂನಲ್ಲಿ ಸಿಕ್ಕ ಬೆರಳು ಪುಣೆ ಕಾರ್ಖಾನೆ ಉದ್ಯೋಗಿಯದು: ಪೊಲೀಸ್
ಪೊಲೀಸರು ನೌಕರನ ಡಿಎನ್‌ಎ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಗ್ರಾಹಕರೊಬ್ಬರ ಐಸ್ ಕ್ರೀಮ್ ಕೋನ್‌ನಲ್ಲಿ ಪತ್ತೆಯಾದ ಬೆರಳು, ಪುಣೆಯ ಐಸ್ ಕ್ರೀಮ್ ಕಾರ್ಖಾನೆಯ ಉದ್ಯೋಗಿಯದು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಯಮ್ಮೋ ಐಸ್ ಕ್ರೀಮ್ಸ್ ಕಂಪನಿಗೆ ಐಸ್ ಕ್ರೀಮ್ ಸರಬರಾಜು ಮಾಡುವ ಉತ್ಪಾದನಾ ಘಟಕದ ಕಾರ್ಮಿಕರೊಬ್ಬರು ಇತ್ತೀಚೆಗೆ ಅಪಘಾತದಲ್ಲಿ ಬೆರಳು ಕಳೆದುಕೊಂಡಿದ್ದಾರೆ. ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳು ಆ ವ್ಯಕ್ತಿಯದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉದ್ಯೋಗಿ ಯ ಡಿಎನ್‌ಎ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕೆ ಕಳುಹಿಸಿದ್ದಾರೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ವು ಐಸ್‌ಕ್ರೀಂ ತಯಾರಕರ ಪರವಾನಗಿಯನ್ನು ಈಗಾಗಲೇ ಅಮಾನತುಗೊಳಿಸಿದೆ.
ಐಸ್‌ಕ್ರೀಂ ಘಟಕವು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಘಟಕದಲ್ಲಿ ಉತ್ಪಾದನೆಯಾದ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಪ್ರತ್ಯೇಕಿಸಿ ದೆ. ಇಡೀ ಪೂರೈಕೆ ಸರಪಳಿಯಲ್ಲಿ ಪ್ರತ್ಯೇಕಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಯಮ್ಮೋ ಐಸ್ ಕ್ರೀಮ್ಸ್ ಹೇಳಿದೆ.