ಟೆಸ್ಟ್‌ನಲ್ಲಿ ಅತಿ ವೇಗದ  50 ಮತ್ತು100: ಭಾರತದಿಂದ ವಿಶ್ವದಾಖಲೆ
x

ಟೆಸ್ಟ್‌ನಲ್ಲಿ ಅತಿ ವೇಗದ 50 ಮತ್ತು100: ಭಾರತದಿಂದ ವಿಶ್ವದಾಖಲೆ


ಕಾನ್ಪುರ: ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದ ನಾಲ್ಕನೇ ದಿನದಂದು ಭಾರತದ ಬ್ಯಾಟ್ಸ್‌ಮನ್‌ಗಳು ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 100 ಮತ್ತು ಅರ್ಧ ಶತಕ ಗಳಿಸಿದ ದಾಖಲೆ ನಿರ್ಮಿಸಿದರು.

ಯಶಸ್ವಿ ಜೈಸ್ವಾಲ್ 10 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ನಾಲ್ಕನೇ ಅತಿ ವೇಗದ ಅರ್ಧ ಶತಕ ಗಳಿಸಿದರು; ಅದಕ್ಕೆ ಮುನ್ನ ರೋಹಿತ್ ಶರ್ಮಾ ಅವರ ಆರಂಭಿಕ ಆಟ (11 ಎಸೆತದಲ್ಲಿ 23, 3x6, 1x4)ದಿಂದ ಕೇವಲ ಮೂರು ಓವರ್‌ಗಳಲ್ಲಿ 50 ರನ್‌ ಗಡಿ ದಾಟಿದರು.

ಈ ಮೂಲಕ ಭಾರತ ಈ ವರ್ಷ ಜುಲೈನಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡಿನ 4.2 ಓವರ್‌ಗಳಲ್ಲಿ 50 ರನ್‌ ಗಳಿಕೆ ದಾಖಲೆಯನ್ನು ಮುರಿದಿದೆ.

ಜೈಸ್ವಾಲ್ ಆಕ್ರಮಣಕಾರಿ ಆಟ ಮುಂದುವರಿಸಿದರು. 3ನೇ ಶ್ರೇಯಾಂಕದ ಶುಭಮನ್ ಗಿಲ್ ಅವರೊಟ್ಟಿಗೆ 11.ಓವರ್‌ಗಳಲ್ಲಿ 100 ರನ್‌ ಗಡಿ ದಾಟಿ, ತನ್ನದೇ ದಾಖಲೆಯನ್ನು ಸುಧಾರಿಸಿತು. 2023 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಅತಿ ವೇಗದ ಶತಕ ಗಳಿಸಿತ್ತು.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ನಿರಂತರ ಮಳೆ ಮತ್ತು ಮೈದಾನದ ಪರಿಸ್ಥಿತಿಯಿಂದ ಪಂದ್ಯದ ಮೊದಲ ಮೂರು ದಿನಗಳಲ್ಲಿ ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಗಿದೆ.

Read More
Next Story