Farmers Protest : ದೇಶವ್ಯಾಪಿ ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧಾರ
x
ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ.

Farmers Protest : ದೇಶವ್ಯಾಪಿ ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧಾರ

Farmers Protest : ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ (ಎನ್‌ಎಫ್ಎಎಂ) ಹಿಂಪಡೆಯಬೇಕು, ಸ್ವಾಮಿನಾಥನ್ ಸಮಿತಿಯು ನೀಡಿದ ಸಿ 2 ಪ್ಲಸ್ 50 ಪ್ರತಿಶತ ಸೂತ್ರವನ್ನು ಆಧರಿಸಿದ ಕನಿಷ್ಠ ಬೆಂಬಲ ಬೆಲೆ ಖಾತರಿ ಮತ್ತು ಸಾಲ ಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.


ತಮ್ಮ ನಾನಾ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದೇ ಹೋದರೆ ದೇಶಾದ್ಯಂತ ಆಂದೋಲನಗಳನ್ನು ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಶನಿವಾರ ಎಚ್ಚರಿಕೆ ನೀಡಿದೆ.

ಈ ಆಂದೋಲನವು ದೆಹಲಿ ಗಡಿಯಲ್ಲಿ 2020-21ರ ಪ್ರತಿಭಟನೆಗಿಂತ ದೊಡ್ಡದಾಗಿರುತ್ತದೆ ಎಂದು ರೈತ ಸಂಘ ಎಚ್ಚರಿಸಿದೆ. ಶನಿವಾರ ಇಲ್ಲಿ ನಡೆದ ತನ್ನ ರಾಷ್ಟ್ರೀಯ ಸಮನ್ವಯ ಸಮಿತಿಯ ಸಭೆಯಲ್ಲಿ ರೈತರ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಎಸ್‌ಕೆಎಂ ತಿಳಿಸಿದೆ.

ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ (ಎನ್‌ಎಫ್ಎಎಂ) ಹಿಂಪಡೆಯಬೇಕು, ಸ್ವಾಮಿನಾಥನ್ ಸಮಿತಿಯು ನೀಡಿದ ಸಿ 2 ಪ್ಲಸ್ 50 ಪ್ರತಿಶತ ಸೂತ್ರವನ್ನು ಆಧರಿಸಿದ ಕನಿಷ್ಠ ಬೆಂಬಲ ಬೆಲೆ ಖಾತರಿ ಮತ್ತು ಸಾಲ ಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ .

ಜನವರಿ 24ರಂದು ದೆಹಲಿಯಲ್ಲಿ ನಡೆದ ಎಸ್‌ಕೆಂ ಸಾಮಾನ್ಯ ಸಭೆಯಲ್ಲಿ ಹಲವಾರು ರಾಜ್ಯಗಳ ರೈತ ಮುಖಂಡರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರವು ಕಾರ್ಪೊರೇಟ್ ಏಕಸ್ವಾಮ್ಯಗಳ ಬಿಗಿ ಹಿಡಿತದಲ್ಲಿರುವುದರಿಂದ ರೈತರ ಬೇಡಿಕೆಗಳನ್ನು ಗೌರವಿಸುವಂತೆ ಕಾಣುತ್ತಿಲ್ಲ. ಕಾರ್ಪೊರೇಟ್ ಪರ ಸುಧಾರಣೆಗಳನ್ನು ಕೈಬಿಡಲು ಸಿದ್ಧವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

" ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಪ್ಯಾನ್-ಇಂಡಿಯಾ ರೂಪದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು. 2020-21ರ ದೆಹಲಿ ಗಡಿಯಲ್ಲಿ ನಡೆಸಿದ ಐತಿಹಾಸಿಕ ರೈತರ ಹೋರಾಟಕ್ಕಿಂತ ದೊಡ್ಡದಾದ ದೇಶವ್ಯಾಪಿ ಹೋರಾಟ ಯೋಜಿಸಬೇಕು" ಎಂದು ಎಸ್‌ಕೆಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲ ರೈತ ವೇದಿಕೆಗಳೊಂದಿಗೆ ಸಮನ್ವಯ ಸಭೆ ಫೆಬ್ರವರಿ 12 ರಂದು ಚಂಡೀಗಢದಲ್ಲಿ ನಡೆಯಲಿದೆ.

ಮುಂದಿನ ಮೂರು ತಿಂಗಳೊಳಗೆ ಎನ್‌ಬಿಎಫ್ಎಎಂನ ಕಾರ್ಪೊರೇಟ್ ಪರ ಕಾರ್ಯಸೂಚಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಟ್ಟುಹಿಡಿದರೆ, ರೈತರು ಅಖಿಲ ಭಾರತ ಗ್ರಾಮೀಣ ಮಟ್ಟದಲ್ಲಿ ಹರತಾಳ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸುತ್ತಾರೆ ಎಂದು ಎಸ್‌ಕೆಎಂ ಎಚ್ಚರಿಕೆ ನೀಡಿದೆ.

"ರೈತರ ಹೋರಾಟವನ್ನು ಬೆಂಬಲಿಸಲು ಮುಂದೆ ಬರುವಂತೆ ಎಸ್ಕೆಎಂ ಎಲ್ಲಾ ಕಾರ್ಪೊರೇಟ್ ವಿರೋಧಿ ವರ್ಗಗಳಿಗೆ ಮನವಿ ಮಾಡಿದೆ. ಭಾನುವಾರ 76 ನೇ ಗಣರಾಜ್ಯೋತ್ಸವದಂದು ಜಿಲ್ಲೆಗಳಾದ್ಯಂತ ಟ್ರಾಕ್ಟರ್ ಮತ್ತು ಮೋಟಾರ್‌ಸೈಕಲ್‌ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರುವಂತೆ ಎಸ್‌ಕೆಎಂ ರೈತರಿಗೆ ಕರೆ ನೀಡಿದೆ.

Read More
Next Story