Farmers Protest: ಪಂಜಾಬ್​ನಲ್ಲಿ ರೈತರಿಂದ 3 ಗಂಟೆಗಳ ರೈಲ್ ರೋಕೋ ಪ್ರತಿಭಟನೆ
x
ನಾನಾ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ರೈತರ ಪ್ರತಿಭಟನೆ.

Farmers Protest: ಪಂಜಾಬ್​ನಲ್ಲಿ ರೈತರಿಂದ 3 ಗಂಟೆಗಳ ರೈಲ್ ರೋಕೋ ಪ್ರತಿಭಟನೆ

ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವನ್ ಸಿಂಗ್ ಪಂಧೇರ್ ಮಾತನಾಡಿ, ರೈತರು ಮಧ್ಯಾಹ್ನ 12 ಗಂಟೆಯಿಂದ ಅನೇಕ ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಧರಣಿ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಅಲ್ಲಿಯೇ ಕುಳಿತಿರುತ್ತಾರೆ ಎಂದು ಹೇಳಿದರು.


ಬೆಳೆಗಳಿಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ರೈತರು ತಮ್ಮ 3 ಗಂಟೆಗಳ 'ರೈಲ್ ರೋಕೋ' ಪ್ರತಿಭಟನೆಯ ಭಾಗವಾಗಿ ಬುಧವಾರ ಪಂಜಾಬ್​ನ ಹಲವಾರು ಸ್ಥಳಗಳಲ್ಲಿ ರೈಲು ಮಾರ್ಗಗಳನ್ನು ತಡೆದಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ 'ರೈಲ್ ರೋಕೋ'ಗೆ ಕರೆ ನೀಡಿದ್ದವು .

ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವನ್ ಸಿಂಗ್ ಪಂಧೇರ್ ಮಾತನಾಡಿ, ರೈತರು ಮಧ್ಯಾಹ್ನ 12 ಗಂಟೆಯಿಂದ ಅನೇಕ ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಧರಣಿ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಅಲ್ಲಿಯೇ ಕುಳಿತಿರುತ್ತಾರೆ ಎಂದು ಹೇಳಿದರು.

ಪ್ರತಿಭಟನೆ ನಡೆಯಬೇಕಿದ್ದ ಸ್ಥಳಗಳಲ್ಲಿ ಗುರುದಾಸ್ಪುರದ ಮೊಗಾ, ಫರಿದ್ಕೋಟ್, ಕಡಿಯಾನ್ ಮತ್ತು ಬಟಾಲಾ ಸೇರಿವೆ. ಜಲಂಧರ್​ನ ಫಿಲ್ಲೌರ್; ಹೋಶಿಯಾರ್ಪುರದ ತಾಂಡಾ, ದಸುಯಾ, ಮಹಿಲ್ಪುರ್; ಫಿರೋಜ್​ಪುರದ ಮಖು, ತಲ್ವಾಂಡಿ ಭಾಯ್; ಲುಧಿಯಾನದ ಸಹ್ನೆವಾಲ್; ಪಟಿಯಾಲದಲ್ಲಿ ಶಂಭು; ಮೊಹಾಲಿ, ಮತ್ತು ಸಂಗ್ರೂರ್ ನಲ್ಲಿ ಸುನಮ್ ಮತ್ತು ಲೆಹ್ರಾಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ರೈತರು ಪ್ರತಿಭಟನಾ ಶಿಬಿರ ಹೂಡಿದ್ದಾರೆ.

ಕಳೆದ ಮೂರು ವಾರಗಳಿಂದ, ಪಂಜಾಬ್ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ದೆಹಲಿ ಪ್ರವೇಶಕ್ಕೆ ಅಡಚಣೆ

101 ರೈತರ "ಜಾಥಾ" (ಗುಂಪು) ಡಿಸೆಂಬರ್ 6, ಡಿಸೆಂಬರ್ 8 ಮತ್ತು ಡಿಸೆಂಬರ್ 14 ರಂದು ಕಾಲ್ನಡಿಗೆಯಲ್ಲಿ ದೆಹಲಿಗೆ ಪ್ರವೇಶಿಸಲು ಮೂರು ಪ್ರಯತ್ನಗಳನ್ನು ಮಾಡಿತು. ಹರಿಯಾಣ ಭದ್ರತಾ ಸಿಬ್ಬಂದಿ ಅವರಿಗೆ ಮುಂದುವರಿಯಲು ಅವಕಾಶ ನೀಡಲಿಲ್ಲ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕಾನೂನು ಖಾತರಿ ಜೊತೆಗೆ, ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರವನ್ನು ಹೆಚ್ಚಿಸಬಾರದು, ಪೊಲೀಸ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು 2021 ರ ಲಖಿಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ "ನ್ಯಾಯ" ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

2013 ರ ಭೂಸ್ವಾಧೀನ ಕಾಯ್ದೆ ಪುನಃಸ್ಥಾಪಿಸುವುದು ಮತ್ತು 2020-21 ರಲ್ಲಿ ಹಿಂದಿನ ಪ್ರತಿಭಟನೆ ಸಮಯದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಸಹ ಬೇಡಿಕೆಗಳ ಭಾಗವಾಗಿದೆ.

Read More
Next Story