Farmers Protest: ಮೋದಿ ಭದ್ರತೆಗೆ ಅಡಚಣೆ : 25 ಮಂದಿ ರೈತರಿಗೆ ಬಂಧನದ ವಾರಂಟ್‌!
x
ಸಂಗ್ರಹ ಚಿತ್ರ.

Farmers Protest: ಮೋದಿ ಭದ್ರತೆಗೆ ಅಡಚಣೆ : 25 ಮಂದಿ ರೈತರಿಗೆ ಬಂಧನದ ವಾರಂಟ್‌!

Farmers Protest: 2022ರಲ್ಲಿ, ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದ್ದರು.


2022ರ ಜನವರಿಯಲ್ಲಿ ಪ್ರಧಾನಿ ಮೋದಿ ಪಂಜಾಬ್‌ಗೆ ಭೇಟಿ ನೀಡುತ್ತಿದ್ದ ವೇಳೆ ಆಗಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ 25 ಮಂದಿ ರೈತರ ವಿರುದ್ಧ ಬಂಧನದ ವಾರೆಂಟ್‌ ಹೊರಡಿಸಲಾಗಿದೆ ಎಂದು ಭಾರತಿ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಆರೋಪಿಸಿದೆ.

ಭಾರತಿ ಕಿಸಾನ್ ಯೂನಿಯನ್ ( ಕ್ರಾಂತಿಕಾರಿ ) ಅಧ್ಯಕ್ಷ ಬಲದೇವ್ ಸಿಂಗ್ ಝಿರಾ ಈ ಕುರಿತು ಮಾಹಿತಿ ನೀಡಿ, ರೈತರೊಬ್ಬರ ಜಾಮೀನು ಅರ್ಜಿಯನ್ನು ಫಿರೋಜ್‌ಪುರದ ನ್ಯಾಯಾಲಯ ತಿರಸ್ಕರಿಸಿದೆ. ಈ ವೇಳೆ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ ಆರೋಪ) ನಮೂದಿಸಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಘಟನೆ ನಡೆದು ಮೂರು ವರ್ಷಗಳೇ ಕಳೆದಿವೆ. ಆದರೆ ರಾಜ್ಯ ಸರ್ಕಾರವು ಕೇಂದಕ್ಕೆ ಮಣಿದು ಕೆಲಸ ಮಾಡುತ್ತಿದೆ. ಪ್ರತಿಭಟನೆ ನಡೆಸಲು ರೈತರು ಜಿಲ್ಲಾಡಳಿತದತ್ತ ತೆರಳಿದ್ದರು. ಇದೇ ವೇಳೆ ಮೋದಿ ಅವರು ಆಗಮಿಸಿದ್ದರು. ಮೋದಿ ಆ ಮಾರ್ಗದಲ್ಲಿ ಬರುವ ವಿಷಯ ರೈತರಿಗೆ ಗೊತ್ತಿರಲಿಲ್ಲ ಎಂದು ಬಲದೇವ್ ಸಮರ್ಥಿಸಿಕೊಂಡರು.

2022ರಲ್ಲಿ, ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದ್ದರು. ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡುವುದನ್ನು ವಿರೋಧಿಸಿದ ರೈತ ಸಂಘಟನೆಯು ರಸ್ತೆತಡೆ ನಡೆಸಿತ್ತು. ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿ ಅವರು ವಾಪಸಾಗಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಬಳಿಕ ಭದ್ರತಾ ಲೋಪದ ತನಿಖೆಗೆ ಪಂಜಾಬ್ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ಸಮಿತಿ ರಚಿಸಿದ್ದವು. ಸುಪ್ರೀಂ ಕೋರ್ಟ್ ಸಹ ಸಮಿತಿ ರಚಿಸಿತ್ತು. ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿತ್ತು.

Read More
Next Story