EXIT POLL 2024 | ಎನ್‌ಡಿಎಗೆ 350+, ಇಂಡಿಯ ಒಕ್ಕೂಟಕ್ಕೆ 120-150 ಸೀಟು
18ನೇ ಲೋಕಸಭೆಯ ಅಂತಿಮ ಮತ್ತು 7ನೇ ಸುತ್ತಿನ ಮತದಾನ ಶನಿವಾರ(ಜೂನ್ 1) ಅಂತ್ಯಗೊಂಡ ಬೆನ್ನಲ್ಲೇ ದೇಶದ ವಿವಿಧ ಮಾಧ್ಯಮಗಳು ಮತ್ತು ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆ(ಎಕ್ಸಿಟ್ ಪೋಲ್) ಪ್ರಕಟಿಸಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಭವಿಷ್ಯ ನುಡಿದಿವೆ.
ಏಪ್ರಿಲ್ 19 ರಂದು ಪ್ರಾರಂಭವಾದ 2024 ರ ಸಂಸತ್ ಚುನಾವಣೆ ಏಳು ಹಂತಗಳಲ್ಲಿ ವ್ಯಾಪಿಸಿದೆ. 7ನೇ ಹಂತದಲ್ಲಿ ಇಂದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 57 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಮತ ಚಲಾಯಿಸಿದರು.
ಲೋಕಸಭೆಯಲ್ಲದೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಿಗೆ ವಿಧಾನಸಭೆ ಚುನಾವಣೆಗಳು ನಡೆದಿವೆ. ಕೆಲವು ನಿರ್ಗಮನ ಸಮೀಕ್ಷೆಗಳು ಇವುಗಳನ್ನೂ ಒಳಗೊಂಡಿರುತ್ತವೆ.
| ಎನ್‌ಡಿಎ | ಇಂಡಿಯಾ | ಇತರರು |
ಜನ್ ಕಿ ಬಾತ್ | 362 - 392 | 141 -161 | 10-20 |
ರಿಪಬ್ಲಿಕ್ ಪಿ ಮಾರ್ಕ್ | 359 | 154 | 30 |
ಇಂಡಿಯಾ ನ್ಯೂಸ್ ಡಿ ಡೈನಮಿಕ್ಸ್ | 371 | 125 | 47 |
ರಿಪಬ್ಲಿಕ್ ಮ್ಯಾಟ್ರಿಜ್ | 353-368 | 118- 133 | 43-48 |
ದೈನಿಕ್ ಭಾಸ್ಕರ್ | 281 - 350 | 145-201 | 33 -49 |
ನ್ಯೂಸ್ ನೇಷನ್ | 342-378 | 153-169 | 21-23 |