EXIT Polls 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು
x

EXIT Polls 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು

ಜಿದ್ದಾಜಿದ್ದಿನ ಹೋರಾಟದ ಮೂಲಕ ಗಮನ ಸೆಳೆದಿದ್ದ ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ.


ಗಮನ ಸೆಳೆದಿರುವ ಎರಡು ರಾಜ್ಯಗಳ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ಉಳಿಸಿಕೊಳ್ಳಲಿದ್ದರೆ ಜಾರ್ಖಂಡ್‌ನಲ್ಲಿ ಹೊನ ಸರ್ಕಾರ ನಿರ್ಮಿಸಲಿದೆ.

ಜಿದ್ದಾಜಿದ್ದಿನ ಹೋರಾಟದ ಮೂಲಕ ಗಮನ ಸೆಳೆದಿದ್ದ ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟವು ಗದ್ದುಗೆ ಏರಲಿದೆ ಎಂದು ಎರಡು ಸಮೀಕ್ಷೆಗಳು ಮಾತ್ರ ಅಂದಾಜಿಸಿವೆ . ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಅಧಿಕಾರ ಕಳೆದುಕೊಳ್ಳುವ ಕಾಲ ಸನ್ನಿಹಿತ ಎಂದು ಅವರೆಲ್ಲರೂ ಅಂದಾಜಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಎಲ್ಲ 288 ಸ್ಥಾನಗಳಿಗೆ ಹಾಗೂ ಜಾರ್ಖಂಡ್‌ನ ಎರಡನೇ ಹಂತದ 38 ಕ್ಷೇತ್ರಗಳಿಗೆ ಬುಧವಾರ ವೋಟಿಂಗ್‌ ನಡೆಯಿತು. ಜಾರ್ಖಂಡ್‌ನ ಮೊದಲ ಹಂತದ ಮತದಾನ ನವೆಂಬರ್‌ 13ರಂದು ನಡೆದಿತ್ತು. ಮತದಾನ ಮುಗಿದ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡವು. ಮತ ಎಣಿಕೆ ನವೆಂಬರ್‌ 23ರಂದು ನಡೆಯಲಿದ್ದು ಸಂಜೆಯೊಳಗೆ ಫಲಿತಾಂಶ ದೊರಕಲಿದೆ.

ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿ ಮುನ್ನಡೆ ಎಂದು ಸಮೀಕ್ಷೆಗಳು ಹೇಳಿವೆ. ಬಿಜೆಪಿ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಗಳ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿತ್ತು. ಈ ಸಮೀಕ್ಷೆಗಳನ್ನು ಭಾರತೀಯ ಚುನಾವಣಾ ಆಯೋಗ ಕಟುವಾಗಿ ಟೀಕಿಸಿತ್ತು. ಹಾಗಾದರೆ ಈ ಬಾರಿ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.

maharashtra election 2024,maharashtra election,maharashtra election news,maharashtra assembly election,maharashtra assembly election 2024,maharashtra vidhan sabha election 2024,maharashtra election voting,maharashtra election date,maharashtra elections 2024,maharashtra election 2024 voting,maharashtra assembly elections,maharashtra assembly elections 2024,maharashtra election 2024 date,maharashtra elections,maharashtra election 2024 live news today

‘81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿಕೂಟಕ್ಕೆ ಅಂದಾಜು 53 ಸ್ಥಾನಗಳು ಸಿಗಲಿವೆ. ಎನ್‌ಡಿಎ ಮೈತ್ರಿಕೂಟ ಕೇವಲ 25 ಸ್ಥಾನಗಳನ್ನು ಗಳಿಸಲಿದೆ. ಉಳಿದ ಪಕ್ಷಗಳು 3 ಕ್ಷೇತ್ರಗಳಲ್ಲಿ ಜಯ ಗಳಿಸಲಿವೆ’ ಎಂದು ‘ಆ್ಯಕ್ಸಿಸ್‌ ಮೈ ಇಂಡಿಯಾ’ ಭವಿಷ್ಯ ನುಡಿದಿದೆ. ಆದರೆ, ಎನ್‌ಡಿಎ ಜಯ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ)-ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಮೈತ್ರಿಕೂಟ (ಮಹಾಯುತಿ) ಅಧಿಕಾರ ಮುಂದುವರಿಸಲಿದೆ ಎಂದು ಸಮೀಕ್ಷೆಗಳು ವಿವರಿಸಿವೆ.

ಹಲವಾರು ಸುದ್ದಿ ಸಂಸ್ಥೆಗಳೊಂದಿಗೆ ನಡೆಸಲಾದ ಮ್ಯಾಟ್ರಿಜ್ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಶೇ 48 ಮತ ಸಿಗಲಿದ್ದು 150ರಿಂದ 170 ಕ್ಷೇತ್ರಗಳಲ್ಲಿ ಜಯ ಖಾತರಿ ಎಂದಿದೆ. ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳು ಶೇ 42 ಮತಗಳೊಂದಿಗೆ 110–130 ಸ್ಥಾನಗ ಳಿಸಬಹುದು ಎಂದಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 42–47 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಒಕ್ಕೂಟವು 25–30 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದೂ ಅಂದಾಜಿಸಿದೆ.

Read More
Next Story