ಕೇಜ್ರಿವಾಲ್, ಕವಿತಾ ನ್ಯಾಯಾಂಗಬಂಧನ ಸೆ.2ರವರೆಗೆ ವಿಸ್ತರಣೆ
x

ಕೇಜ್ರಿವಾಲ್, ಕವಿತಾ ನ್ಯಾಯಾಂಗಬಂಧನ ಸೆ.2ರವರೆಗೆ ವಿಸ್ತರಣೆ


ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಆರ್‌ಎಸ್ ನಾಯಕಿ ಕೆ. ಕವಿತಾ ಮತ್ತು ಇತರರ ನ್ಯಾಯಾಂಗಬಂಧನವನ್ನು ಮಂಗಳವಾರ ಸೆಪ್ಟೆಂಬರ್ 2ರವರೆಗೆ ವಿಸ್ತರಿಸಿದೆ.

ಈ ಹಿಂದೆ ನೀಡಿದ್ದ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕಸ್ಟಡಿಯನ್ನು ವಿಸ್ತರಿಸಿದರು.

ಈ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರಿಗೆ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಅವರು ಜಾಮೀನು ಬಾಂಡ್ ಸಲ್ಲಿಸದ ಕಾರಣ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Read More
Next Story