ಕವಿತಾ ಅವರಿಗೆ 14 ದಿನ ನ್ಯಾಯಾಂಗ ಬಂಧನ
x

ಕವಿತಾ ಅವರಿಗೆ 14 ದಿನ ನ್ಯಾಯಾಂಗ ಬಂಧನ


ನವದೆಹಲಿ, ಮಾ. 26- ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಾರಿ ನಿರ್ದೇಶನಾಲಯದ ಕೋರಿಕೆ ಮೇರೆಗೆ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಈ ಆದೇಶ ಹೊರಡಿಸಿದ್ದಾರೆ. ಕವಿತಾ ಅವರನ್ನು ಮಾ.16 ರಂದು ಏಳು ದಿನಗಳ ಇಡಿ ಕಸ್ಟಡಿಗೆ ಕಳುಹಿಸಲಾಗಿತ್ತು ಮತ್ತು ಕಳೆದ ಶನಿವಾರ ಅವಧಿಯನ್ನು ಮೂರು ದಿನ ವಿಸ್ತರಿಸಲಾಗಿತ್ತು.

ಕವಿತಾ ಪರ ವಕೀಲ ನಿತೇಶ್ ರಾಣಾ ಅವರು, ಬಂಧಿತೆಯ ಅಪ್ರಾಪ್ತ ವಯಸ್ಕ ಮಗನ ಪರೀಕ್ಷೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿ ದರು. ಇಡಿ ಪರ ವಕೀಲರು ಜಾಮೀನಿಗೆ ಪ್ರತಿವಾದ ಮಂಡಿಸಿ, ಉತ್ತರ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದರು. ಮಧ್ಯಂತರ ಮತ್ತು ನಿಯಮಿತ ಜಾಮೀನು ಎರಡಕ್ಕೂ ಹಣ ಅಕ್ರಮ ವರ್ಗಾವಣೆ(ಮನಿ ಲಾಂಡರಿಂಗ್ ತಡೆ ಕಾಯ್ದೆ , ಪಿಎಂಎಲ್‌ಎ) ಅಡಿಯಲ್ಲಿ ಕಠಿಣ ನಿಬಂಧನೆಗಳಿವೆ ಎಂದು ಇಡಿ ಹೇಳಿದೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ. ಮದ್ಯದ ಪರವಾನಗಿಗಳ ದೊಡ್ಡ ಪಾಲು ಎಎಪಿಗೆ ಸಂದಾಯವಾಗಿದೆ ಎಂದು ಇಡಿ ದೂರಿದೆ. ಕವಿತಾ ಅವರ ಕಸ್ಟಡಿ ವಿಚಾರಣೆಗೆ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಇಡಿಗೆ ಈ ಹಿಂದೆ ಅನುಮತಿ ನೀಡಿದ್ದರು.

ನ್ಯಾಯಾಲಯಕ್ಕೆ ಪ್ರವೇಶಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ, ʻಇದು ಕಾನೂನುಬಾಹಿರ ಪ್ರಕರಣ. ನಾವು ಹೋರಾಡುತ್ತೇವೆ. ಜೈ ತೆಲಂಗಾಣʼ ಎಂದು ಘೋಷಿಸಿದರು.

Read More
Next Story