Hyderabad Crime | ಪತ್ನಿಯ ದೇಹ ತುಂಡರಿಸಿ, ಕುಕ್ಕರ್ ನಲ್ಲಿ ಬೇಯಿಸಿದ ಮಾಜಿ ಸೈನಿಕ
x
ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಗುರು ಮೂರ್ತಿ

Hyderabad Crime | ಪತ್ನಿಯ ದೇಹ ತುಂಡರಿಸಿ, ಕುಕ್ಕರ್ ನಲ್ಲಿ ಬೇಯಿಸಿದ ಮಾಜಿ ಸೈನಿಕ

ಡಿಆರ್ ಡಿಒನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಾಜಿ ಸೈನಿಕ ಗುರುಮೂರ್ತಿ ಕೃತ್ಯದ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ .


ಪತ್ನಿಯ ಜಗಳದಿಂದ ಬೇಸತ್ತ ಮಾಜಿ ಸೈನಿಕನೊಬ್ಬ ಆಕೆಯನ್ನು ತುಂಡು ತುಂಡುಗಳಾಗಿ ಕತ್ತರಿಸಿ ಹತ್ಯೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಎಸೆದಿರುವ ಭೀಭತ್ಸ್ಯ ಘಟನೆ ತೆಲಂಗಣದ ಹೈದರಾಬಾದ್ ನಲ್ಲಿ ನಡೆದಿದೆ.

ಡಿಆರ್ ಡಿಒನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಾಜಿ ಸೈನಿಕ ಗುರುಮೂರ್ತಿ ಕೃತ್ಯದ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ . ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಏನಿದು ಘಟನೆ?

ಹೈದರಾಬಾದ್ ನಲ್ಲಿ ವಾಸವಿದ್ದ ಗುರುಮೂರ್ತಿ ಹಾಗೂ ವೆಂಕಟ ಮಾಧವಿ ದಂಪತಿ (35) ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಕಳೆದ ಒಂದು ವಾರದ ಹಿಂದೆ ಜಗಳ ವಿಕೋಪಕ್ಕೆ ತಿರುಗಿತ್ತು. ಪತ್ನಿಯ ಜಗಳದಿಂದ ಬೇಸತ್ತ ಗುರುಮೂರ್ತಿ, ಆಕೆಯನ್ನು ಹತ್ಯೆ ಮಾಡಿ, ಸ್ನಾನದ ಕೊಣೆಯಲ್ಲಿ ದೇಹವನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಬಳಿಕ ಅದನ್ನು ಕುಕ್ಕರ್ ನಲ್ಲಿ ಬೇಯಿಸಿ, ಬೇರ್ಪಟ್ಟ ಮೂಳೆಗಳನ್ನು ರಾಸಾಯನಿಕ ಬಳಸಿ ಮೂರು ದಿನ ಬೇಯಿಸಿದ್ದಾನೆ. ಬಳಿಕ ಅವುಗಳನ್ನು ಪ್ಯಾಕ್ ಮಾಡಿ ಮೀರ್ ಪೇಟ್ ಸರೋವರಕ್ಕೆ ಎಸೆದಿದ್ದಾನೆ.

ಪತ್ನಿ ಕಾಣೆಯಾಗಿರುವ ಬಗ್ಗೆ ಆಕೆಯ ಪೋಷಕರೊಂದಿಗೆ ಗುರುಮೂರ್ತಿಯೇ ಜ. 16 ರಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ಅನುಮಾನಗೊಂಡು ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ

ಈ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಹತ್ಯೆಯಾದ ಗೃಹಿಣಿಯ ಮೂಳೆಗಳಿಗಾಗಿ ಮೀರ್ ಪೇಟ್ ಸರೋವರದಲ್ಲಿ ಶೋಧ ಆರಂಭಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಮುಂಬೈ ಘಟನೆ ನೆನಪಿಸಿದ ಕೃತ್ಯ

2023 ಜೂನ್ ತಿಂಗಳಲ್ಲಿ ಮುಂಬೈ ನ ಮಿರ್ ರಸ್ತೆಯಲ್ಲಿ ಇಂತಹದ್ದೇ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 9 ವರ್ಷ ಲಿವ್-ಇನ್ ರಿಲೇಷನ್ ನಲ್ಲಿದ್ದ 32 ವರ್ಷದ ಮಹಿಳೆಯೊಬ್ಬರನ್ನು ಪ್ರಿಯಕರನೇ ಚಾಪ್ ಕಟರ್ ನಿಂದ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದ.

ಕೊಲೆ ಮಾಡಿದ ಮೂರು ದಿನಗಳ ನಂತರ ಆರೋಪಿ ಮನೋಜ್ ಸಾನೆ, ಮೃತದೇಹದ ಭಾಗಗಳನ್ನು

ಕುಕ್ಕರ್ ನಲ್ಲಿ ಬೇಯಿಸಿ, ಹುರಿದು ಬಳಿಕ ಮಿಕ್ಸಿಯಲ್ಲಿ ಔಡಿ ಮಾಡಿ ನಾಯಿಗಳಿಗೆ ಹಾಕಿದ್ದ.

Read More
Next Story