
ತಮಿಳುನಾಡು ರಾಜಕಾರಣಿಗಳು ಆಸ್ಪತ್ರೆಗೆ ಭೇಟಿ ನೀಡಿದ ಸಂತ್ರಸ್ಥರ ಅಳಲು ಆಲಿಸಿದರು
2005ರಲ್ಲೂ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾಗಿತ್ತು ತಮಿಳುನಾಡು; 42 ಜನರ ಸಾವಿಗೆ ಕಾರಣವಾಗಿತ್ತು ಪ್ರವಾಹ ಪರಿಹಾರ ವಿತರಣೆ
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತ ಎರಡನೇ ದೊಡ್ಡ ದುರಂತವಾಗಿದ್ದು, 36ಜನರ ಸಾವಿಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಈ ಹಿಂದೆಯೂ ಸಾಕಷ್ಟು ಕಾಲ್ತುಳಿತ ಘಟನೆಗಳು ಸಂಭವಿಸಿವೆ.
ತಮಿಳುನಾಡಿನಲ್ಲಿ 2005 ರಿಂದ 2025 ರವರೆಗೆ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಗಳಲ್ಲಿ ಕರೂರು ಘಟನೆ ಎರಡನೇ ದೊಡ್ಡ ದುರಂತವಾಗಿ ಪರಿಣಮಿಸಿದೆ. 2005 ಡಿ.18 ರಂದು ಚೆನ್ನೈನ ಎಂ.ಜಿ.ನಗರದಲ್ಲಿ ನಡೆದ ಪ್ರವಾಹ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 42 ಮಂದಿ ಜೀವ ಕಳೆದುಕೊಂಡಿದ್ದರು. ಸುಮಾರು 38 ಮಂದಿ ಗಂಭೀರ ಗಾಯಗೊಂಡಿದ್ದರು. ಇದು ತಮಿಳುನಾಡು ಇತಿಹಾಸದಲ್ಲೇ ಅತ್ಯಂತ ಭೀಕರ ಹಾಗೂ ದೊಡ್ಡ ಕಾಲ್ತುಳಿತ ದುರಂತ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತ ಎರಡನೇ ದೊಡ್ಡ ದುರಂತವಾಗಿದ್ದು, 36ಜನರ ಸಾವಿಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಈ ಹಿಂದೆಯೂ ಸಾಕಷ್ಟು ಕಾಲ್ತುಳಿತ ಘಟನೆಗಳು ಸಂಭವಿಸಿವೆ.
2005 ನವೆಂಬರ್ ತಿಂಗಳಲ್ಲಿ ಚೆನ್ನೈನ ವ್ಯಾಸರ್ಪಾಡಿಯಲ್ಲಿ ನಡೆದ ಪ್ರವಾಹ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಜನರ ನಡುವೆ ತಳ್ಳಾಟ-ನೂಕಾಟ ನಡೆದು ಕಾಲ್ತುಳಿತಕ್ಕೆ ಕಾರಣವಾಗಿತ್ತು. ಈಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದರು, ಅನೇಕರು ಗಾಯಗೊಂಡಿದ್ದರು.
2016 ರಲ್ಲಿ ತಿರುವಣ್ಣಾಮಲೈನಲ್ಲಿ ಪವಿತ್ರ ಸ್ನಾನದ ವೇಳೆ ದೇವರ ಪ್ರತಿಮೆ ವೀಕ್ಷಣೆಗೆ ಭಕ್ತರು ಅಪಾರ ಪ್ರಮಾಣದಲ್ಲಿ ಸೇರಿದ್ದಾಗ ಕಾಲ್ತುಳಿ ಸಂಭವಿಸಿತ್ತು. ನಾಲ್ವರು ಮತಪಟ್ಟು, ಹಲವರು ಗಾಯಗೊಂಡಿದ್ದರು.
2019 ಏಪ್ರಿಲ್ 21 ರಲ್ಲಿ ತಿರುಚಿ ಜಿಲ್ಲೆಯ ಮುತ್ತಿಯಂಪಾಲ್ಯಂ ನಲ್ಲಿ “ಪಿಡಿ ಕಸು” ಉತ್ಸವದಲ್ಲಿ ಕಾಲ್ತುಳಿತ ಸಂಭವಿಸಿ, ಏಳು ಮಂದಿ ಮೃತಪಟ್ಟಿದ್ದರು. 12 ಮಂದಿ ಗಾಯಗೊಂಡಿದ್ದರು.
2023 ಫೆಬ್ರವರಿ 4 ರಂದು ತಿರುಪತ್ತೂರ್ ಜಿಲ್ಲೆ ವನಿಯಂಬಾದಿಯಲ್ಲಿ ಉಚಿತ ಪಂಚೆ ಹಾಗೂ ಸೀರೆಗೆ ಟೋಕನ್ ಹಂಚುತ್ತಿದ್ದ ವೇಳೆ ಸೇರಿದ್ದ ಜನಸ್ತೋಮದಲ್ಲಿ ಕಾಲ್ತುಳಿತ ಸಂಭವಿಸಿ ಕಾಲ್ತುಳಿತ ದುರಂತ ಘಟಿಸಿತ್ತು, ನಾಲ್ವರು ಮಹಿಳೆಯರು ಕಾಲ್ತುಳಿತದಲ್ಲಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
2016 ಏಪ್ರಿಲ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ವಿರುಧಾಚಲಂ (ಕಡಲೂರು ಜಿಲ್ಲೆ) ದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ವೇಳೆ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟರು ಅನೇಕರು ಗಾಯಗೊಂಡಿದ್ದರು.
ಇದೇ ಅವಧಿಯಲ್ಲಿ ಕಡಲೂರು, ವಿರುಧಾನಗರ ಮತ್ತು ಸೇಲಂ ಜಿಲ್ಲೆಗಳಲ್ಲಿ ನಡೆದ ಹಲವು ಚುನಾವಣಾ ಮೆರವಣಿಗೆಗಳಲ್ಲಿ ಮೂಲ ಸೌಕರ್ಯ ಕೊರತೆಯಿಂದ ಜನರು ಮೂರ್ಛೆ ಹೋಗಿದ್ದರು. ಅಂತಿಮವಾಗಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಅಧಿಕಾರಿಗಳು ಎಚ್ಚೆತ್ತುಕೊಂಡು ದುರಂತ ತಪ್ಪಿಸಿದ್ದರು.