ಎಪಿಗಮಿಯಾ ಸಹ ಸಂಸ್ಥಾಪಕ ರೋಹನ್ ಮೀರ್‌ಚಂದಾನಿ 41 ವರ್ಷಕ್ಕೆ ಹೃದಯಾಘಾತದಿಂದ ನಿಧನ
ಡ್ರಮ್ಸ್ ಫುಡ್ ಇಂಟರ್‌ನ್ಯಾಷನಲ್ ಸಿಇಒ ಮಿರ್‌ಚಂದಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದ ಮೊದಲ ಗ್ರೀಕ್ ಯೋಗರ್ಟ್ (ವಿಶೇಷ ರೀತಿಯ ಮೊಸಲು) ಬ್ರಾಂಡ್ ಎಪಿಗಮಿಯಾದ ಸಹ ಸಂಸ್ಥಾಪಕ ರೋಹನ್ ಮಿರ್‌ಚಂದಾನಿ ಡಿಸೆಂಬರ್ 20ರಂದು ನಿಧನರಾದರು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಕನಿಷ್ಠ ನಾಲ್ಕು ಮೂಲಗಳನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ. 41 ವರ್ಷದ ಮಿರ್‌ಚಂದಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೋಹನ್ ಅವರು ಡ್ರಮ್ಸ್ ಫುಡ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. ಎನ್‌ವೈಯು ಸ್ಟರ್ನ್ ಮತ್ತು ವಾರ್ಟನ್ ಸ್ಕೂಲ್‌ನ ಹಳೆ ವಿದ್ಯಾರ್ಥಿಯಾಗಿರುವ ರೋಹನ್ 2013 ರಲ್ಲಿ ಡ್ರಮ್ಸ್ ಫುಡ್ ಇಂಟರ್‌ನ್ಯಾಷನಲ್ ಸಂಸ್ಥೆ ಸ್ಥಾಪಿಸಿದ್ದರು.
ಈ ವರ್ಷದ ಅಕ್ಟೋಬರ್ 1ರಂದು ಗುಡ್ ಕ್ಯಾಪಿಟಲ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರ ರೋಹನ್ ಮಲ್ಹೋತ್ರಾ ನಿಧನ ಹೊಂದಿದ್ದರೆ, ಆಗಸ್ಟ್ 2023ರಲ್ಲಿ ಪೆಪ್ಪರ್‌ಫಿಯ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನ ಹೊಂದಿದ್ದರು. ಇದೀಗ ಮತ್ತೊಬ್ಬ ಯುವ ಉದ್ಯಮಿ ನಿಧನರಾಗಿದ್ದಾರೆ.
ಲಾಭ, ವಿಸ್ತರಣೆ ಯೋಜನೆಗಳು
ಡ್ರಮ್ಸ್ ಫುಡ್ ಜೊತೆಗೆ ಹೋಕಿ ಪೋಕಿ ಐಸ್ ಕ್ರೀಮ್ ಗಳಂತಹ ಬ್ರಾಂಡ್‌ಗಳು ಭಾರತದ ಫ್ರೋಜನ್ ಫುಡ್ ಮಾರುಕಟ್ಟೆಯಲ್ಲಿ ಗಮನಾರ್ಹ ಹಿಡಿತ ಹೊಂದಿವೆ.
ಮಿರ್‌ಚಂಚಾನಿ ಅವರನ್ನು ಡಿಸೆಂಬರ್ 2023ರಲ್ಲಿ ಎಪಿಗಾಮಿಯಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಹ-ಸಂಸ್ಥಾಪಕ ರಾಹುಲ್ ಜೈನ್ ಅದರ ಸಿಇಒ ಆದರು. ಕಂಪನಿಯ ಸಹ ಸಂಸ್ಥಾಪಕ ಅಂಕುರ್ ಗೋಯೆಲ್ ಸಿಒಒ ಆಗಿದ್ದರು.
ಮುಂಬೈ ಮೂಲದ ಮೊಸರು ಕಂಪನಿಯು ಮೊಸರು, ಮೊಸರು, ಮಿಲ್ಕ್ ಶೇಕ್ ಗಳು, ಸ್ಮೂಥಿಗಳು ಮತ್ತು ದೇಸಿ 'ಖೀರ್' ವರೆಗೆ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಇಳಿಸಿವೆ.
ಮನಿ ಕಂಟ್ರೋಲ್ ಪ್ರಕಾರ, ಈ ಬ್ರಾಂಡ್‌ನ ಉತ್ಪನ್ನಗಳನ್ನು ಡಿಸೆಂಬರ್ 2023ರಲ್ಲಿ 30 ಪಟ್ಟಣಗಳಲ್ಲಿ 20,000 ಟಚ್ ಪಾಯಿಂಟ್ ಗಳಲ್ಲಿ ಮಾರಾಟ ಮಾಡಲಾಗಿತ್ತು. 2023 ರ ಹಣಕಾಸು ವರ್ಷದಲ್ಲಿ 168 ಕೋಟಿ ರೂ.ಗಳ ಗಳಿಸಿತ್ತು.
2025-26ರ ವೇಳೆಗೆ ಮಧ್ಯಪ್ರಾಚ್ಯಕ್ಕೆ ತನ್ನ ಮಾರಾಟದ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯೂ ಇತ್ತು.