ಪುಣೆಯ  ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ
x

ಪುಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ


ಪುಣೆ, ಅ.8 - ಪುಣೆಯಿಂದ ಮಾರ್ಚ್ 30 ರಂದು ನಾಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ(22)ಯ ಶವ ಅಹ್ಮದ್‌ನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣಕ್ಕಾಗಿ ಕಾಲೇಜು ಸ್ನೇಹಿತ ಸೇರಿದಂತೆ ಮೂವರು ಆಕೆಯನ್ನು ಅಪಹರಿಸಿ, ಆನಂತರ ಕತ್ತು ಹಿಸುಕಿದ್ದಾರೆ. ಮೂವರನ್ನು ಬಂಧಿಸಲಾಗಿದೆ ಎಂದು ಭಾನುವಾರ ಅಧಿಕಾರಿ ತಿಳಿಸಿದ್ದಾರೆ. ʻವಿದ್ಯಾರ್ಥಿನಿ ವಘೋಲಿ ಪ್ರದೇಶದ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 29 ರಂದು ಆಕೆಯ ಸ್ನೇಹಿತ ಮತ್ತು ಇನ್ನಿಬ್ಬರು ಅವಳನ್ನು ಭೇಟಿಯಾಗಿ, ನಂತರ ಹಾಸ್ಟೆಲ್‌ಗೆ ಬಿಟ್ಟು ಹೋದರು. ಮಾರ್ಚ್ 30 ರಂದು ಆಕೆಯನ್ನು ಅಹ್ಮದ್‌ನಗರಕ್ಕೆ ಕರೆದೊಯ್ದರು. ಆಕೆಯ ಪೋಷಕರಿಂದ 9 ಲಕ್ಷ ರೂ. ಕೇಳಿದರು. ಆನಂತರ ಆಕೆಯ ಕತ್ತು ಹಿಸುಕಿ, ಶವವನ್ನು ಅಹಮದ್‌ನಗರದ ಹೊರವಲಯದಲ್ಲಿ ಹೂತುಹಾಕಿದರು. ಸೆಲ್‌ಫೋನ್‌ನಿಂದ ಸಿಮ್‌ ಕಾರ್ಡ್‌ ತೆಗೆದರು ಎಂದು ತಿಳಿಸಿದ್ದಾರೆ.

ಕುಟುಂಬ ಸದಸ್ಯರು ಸಂಪರ್ಕ ಸ್ಥಾಪಿಸಲು ಸಾಧ್ಯವಾಗದೆ, ಕಾಲೇಜು ಮತ್ತು ಹಾಸ್ಟೆಲ್‌ಗೆ ಬಂದರು. ಆನಂತರ ಪೊಲೀಸರಿಗೆ ದೂರು ನೀಡಿದರು ಎಂದು ಅಧಿಕಾರಿ ತಿಳಿಸಿದರು. ಆರೋಪಿಗಳು ಯುವತಿಯ ಪೋಷಕರಿಗೆ 9 ಲಕ್ಷ ರೂ. ನೀಡುವಂತೆ ಸಂದೇಶ ಕಳುಹಿಸಿದ್ದರು. ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರು ಕೃತ್ಯ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

Read More
Next Story