ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ: ಮೋದಿ
x

ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ: ಮೋದಿ

ಹಂಗಾಮಿ ಸ್ಪೀಕರ್ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ತಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಟೀಕೆಗೆ ಸಂಬಂಧಿಸಿದಂತೆ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.


18 ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನವನ್ನು ಕಿತ್ತೆಸೆದ ತುರ್ತುಪರಿಸ್ಥಿತಿಯು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಟೀಕಿಸಿದರು.

ಪ್ರತಿಸ್ಪರ್ಧಿಗಳನ್ನು ಗುರಿಯಾಗಿಟ್ಟುಕೊಂಡ ಅಧಿವೇಶನಕ್ಕೆ ಮೊದಲು ಈ ಟೀಕೆ ಮಾಡಿದ್ದು, ಜನರು ಚರ್ಚೆ ಮತ್ತು ಕಾರ್ಯತತ್ಪರತೆ ಯನ್ನು ಬಯಸುತ್ತಾರೆಯೇ ಹೊರತು, ಸಂಸತ್ತಿನಲ್ಲಿ ನಾಟಕ ಮತ್ತು ಗದ್ದಲವನ್ನಲ್ಲ ಎಂದು ಪ್ರತಿಪಾದಿಸಿ ದರು.

ಹಂಗಾಮಿ ಸ್ಪೀಕರ್ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಮಾಡಿದ ಟೀಕೆಯ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಕುರಿತು ಅವರ ಹೇಳಿಕೆ ಬಂದಿದೆ.

ಜವಾಬ್ದಾರಿಯುತ ವಿರೋಧಪಕ್ಷ: ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ಸಂಘರ್ಷದಿಂದ ಸದನದ ಮುಂದೂಡಿಕೆಯಿಂದ ಚರ್ಚೆ ನಡೆಯದ ಹಿಂದಿನ ಅಧಿವೇಶನಗಳನ್ನು ಉಲ್ಲೇಖಿಸಿ, ಜನರು ಘೋಷವಾಕ್ಯಗಳನ್ನಲ್ಲ. ಕೆಲಸವನ್ನು ಬಯಸುತ್ತಾರೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಗಳಿಸಿದೆ. ಆದರೆ, ಉತ್ತಮ ಪ್ರದರ್ಶನದಿಂದ ಉತ್ತೇಜಿತಗೊಂಡಿರುವ ಪ್ರತಿಪಕ್ಷ ಇಂಡಿಯ ಒಕ್ಕೂಟವು ಹಲವು ವಿಷಯಗಳ ಬಗ್ಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ವಾಗ್ದಾಳಿ ನಡೆಸುವ ನಿರೀಕ್ಷೆಯಿದೆ.

ʻಜನರು ಉತ್ತಮ ಮತ್ತು ಜವಾಬ್ದಾರಿಯುತ ಪ್ರತಿಪಕ್ಷವನ್ನು ಬಯಸುತ್ತಾರೆ. ಈ ಹಿಂದೆ ಪ್ರತಿಪಕ್ಷಗಳ ನಡವಳಿಕೆ ನಿರಾಶಾದಾಯಕವಾಗಿದೆ. ಪ್ರತಿಪಕ್ಷಗಳು ಈ ಬಾರಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತವೆ ಮತ್ತು ಪ್ರಜಾಪ್ರಭುತ್ವದ ಶಿಷ್ಟಸಂಪ್ರದಾಯವನ್ನು ಕಾಪಾಡುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.

ಮೂರನೇ ಅವಧಿ: ಚುನಾವಣೆಯಲ್ಲಿ ಮೈತ್ರಿಕೂಟದ ಗೆಲುವನ್ನು ಅಗಾಧ ಸಾಧನೆ ಮತ್ತು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ ಪ್ರಧಾನಿ, ʻಕಳೆದ 60 ವರ್ಷಗಳಲ್ಲಿ ಸರ್ಕಾರವೊಂದು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವುದು ಇದೇ ಮೊದಲು.ತಮ್ಮ ಸರ್ಕಾರದ ಉದ್ದೇಶ ಮತ್ತು ನೀತಿಗಳಿಗೆ ಜನರು ಅನುಮೋದನೆಯ ಮುದ್ರೆ ಹಾಕಿದ್ದಾರೆ,ʼ ಎಂದು ಹೇಳಿದರು.

ʻನಮ್ಮ ಜವಾಬ್ದಾರಿಗಳು ಮೂರು ಪಟ್ಟು ಹೆಚ್ಚಾಗಿವೆ. ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತೇವೆ ಮತ್ತು ಮೂರು ಪಟ್ಟು ಹೆಚ್ಚುಸಾಧಿಸುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ,ʼ ಎಂದು ಹೇಳಿದರು.

ʻನೂತನ ಸಂಸದರ ಪ್ರಮಾಣವಚನ ಸ್ವೀಕಾರ ಸಮಾರಂಭವು ಇದೇ ಮೊದಲ ಬಾರಿಗೆ ನೂತನ ಸಂಸತ್ ಭವನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ,ʼ ಎಂದರು.

ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ: ಕಾಂಗ್ರೆಸ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಅವರು, ಜೂನ್ 25 ರಂದು ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ. ಸಂವಿಧಾನವನ್ನು ತಿರಸ್ಕರಿಸಿದ ಮತ್ತು ದೇಶವನ್ನು ಜೈಲಿನಂತೆ ಪರಿವರ್ತಿಸಿದ ಅದು ದೇಶದ ಸಂಸದೀಯ ಇತಿಹಾಸದಲ್ಲಿನ ಕಪ್ಪು ಚುಕ್ಕೆ,ʼ ಎಂದು ಬಣ್ಣಿಸಿದರು.

ʻಕಾಂಗ್ರೆಸಿನ ಧೀಮಂತ ನಾಯಕಿ, ಪ್ರಧಾನಿ ಇಂದಿರಾಗಾಂಧಿ ಅವರು 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು; ನಾಗರಿಕ ಸ್ವಾತಂತ್ರ್ಯ ವನ್ನು ಅಮಾನತುಗೊಳಿಸಿದರು, ವಿರೋಧ ಪಕ್ಷದ ನಾಯಕರು ಮತ್ತು ಭಿನ್ನಮತೀಯರನ್ನು ಜೈಲಿಗೆ ಹಾಕಿದರು ಮತ್ತು ಪತ್ರಿಕಾ ಸೆನ್ಸಾರ್ಶಿಪ್ ಜಾರಿಗೊಳಿಸಿದರು.

ʻಸರ್ಕಾರ ನಡೆಸಲು ಬಹುಮತದ ಅಗತ್ಯವಿರುತ್ತದೆ. ಆದರೆ, ದೇಶವು ಒಮ್ಮತದ ಮೇಲೆ ಸಾಗುತ್ತದೆ. ತಮ್ಮ ಸರ್ಕಾರವು ಎಲ್ಲರನ್ನೂ ಕರೆದುಕೊಂಡು ಹೋಗಲು, ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಒಮ್ಮತವನ್ನು ರೂಪಿಸಲು ಯಾವಾಗಲೂ ಶ್ರಮಿಸುತ್ತದೆ,ʼ ಎಂದು ಹೇಳಿದರು.

ʻ18ನೇ ಲೋಕಸಭೆಯ ಮೊದಲ ಅಧಿವೇಶನವು ದೇಶಕ್ಕೆ ಹೊಸ ವೇಗ ಮತ್ತು ಉನ್ನತಿಯನ್ನು ನೀಡಲು ಅತ್ಯಂತ ಮಹತ್ವದ ಅವಕಾಶವಾಗಿದೆ. ಕನಸುಗಳಿಂದ ತುಂಬಿರಲಿದ್ದು, 2047 ರ ವೇಳೆಗೆ ಶ್ರೇಷ್ಠ ಭಾರತ ಮತ್ತು ವಿಕಸಿತ ಭಾರತವನ್ನಾಗಿ ಮಾಡುವ ಸಂಕಲ್ಪ ತೊಡಲಿದೆ,ʼ ಎಂದು ಹೇಳಿದರು.

Read More
Next Story