ಕಾಡಾನೆ ದಾಳಿಗೆ ವ್ಯಕ್ತಿ ಬಲಿ
x
ಪ್ರಾತಿನಿಧಿಕ ಚಿತ್ರ

ಕಾಡಾನೆ ದಾಳಿಗೆ ವ್ಯಕ್ತಿ ಬಲಿ


ವಯನಾಡು (ಕೇರಳ), ಫೆ 10: ಮಾನಂದವಾಡಿ ಬಳಿ ಕಾಡಾನೆ ದಾಳಿಯಿಂದ ಶನಿವಾರ ಬೆಳಗ್ಗೆ 42 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಆನೆ ದಾಳಿ ನಡೆಸಿದ್ದು,ಗಾಯಾಳು ಆನಂತರ ಮಾನಂದವಾಡಿ ವೈದ್ಯಕೀಯ ಕಾಲೇಜಿನಲ್ಲಿ ಸಾವಿಗೀಡಾದರು.

ರೇಡಿಯೊ ಕಾಲರ್ ಅಳವಡಿಸಿದ್ದ ಕಾಡಾನೆ ಮನೆಯ ಕಾಂಪೌಂಡಿಗೆ ಹಾನಿ ಮಾಡಿ ವ್ಯಕ್ತಿ ಮೇಲೆ ದಾಳಿ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ. ಆಕ್ರೋಶಗೊಂಡ ಸ್ಥಳೀಯರು ಮಾನಂದವಾಡಿ-ಮೈಸೂರು, ಮಾನಂದವಾಡಿ-ಕೋಯಿಕ್ಕೋಡ್‌ ಮತ್ತು ತಲಶ್ಶೇರಿ ರಸ್ತೆಗಳಲ್ಲಿ ಪ್ರತಿಭಟಿಸಿ ದರು. ಶಾಸಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವಾಹನಗಳನ್ನು ತಡೆದು ‘ಗೋ ಬ್ಯಾಕ್’ ಘೋಷಣೆ ಕೂಗಿದರು.

ಸಾವು ಆಘಾತಕಾರಿ. ವಯನಾಡಿನಿಂದ ಮಾನವ-ಪ್ರಾಣಿ ಸಂಘರ್ಷದ ಸುದ್ದಿ ಬರುತ್ತಿರುವುದು ಕಳವಳಕಾರಿ ಸಂಗತಿ ಎಂದು ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಹೇಳಿದರು. ಶುಕ್ರವಾರ ರಾತ್ರಿ ವನ್ಯಜೀವಿ ವೀಕ್ಷಕರೊಬ್ಬರು ಹುಲಿ ದಾಳಿಯಿಂದ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಆನೆಯನ್ನು ಕಾಡಿಗೆ ಓಡಿಸಬೇಕೇ ಅಥವಾ ಸೆರೆಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳಿಸಬೇಕೆ ಎಂಬ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳ ಲಾಗುವುದು. ವಯನಾಡಿನ ಜನರು ವನ್ಯಜೀವಿಗಳ ದಾಳಿ ಮತ್ತು ಬೆಳೆ ನಷ್ಟದಿಂದ ಬಳಲುತ್ತಿದ್ದು,ಸಮಸ್ಯೆಯನ್ನು ಮುಖ್ಯಮಂತ್ರಿ ಕಚೇರಿ ಪರಿಶೀಲಿಸುತ್ತಿದೆ ಎಂದು ಸಚಿವರು ಹೇಳಿದರು. ಆನೆ ಕೇರಳದ ಗಡಿ ದಾಟಿ, ಕುರುವ ದ್ವೀಪ ಪ್ರದೇಶವನ್ನು ತಲುಪಿದೆ ಎಂದು ಸ್ಥಳೀಯರು ದೂರಿದರು. ಮಾನಂದವಾಡಿಯ ಬಹುತೇಕ ವಾರ್ಡ್‌ಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇತ್ತೀಚೆಗೆ ‘ತಣ್ಣೀರ್ ಕೊಂಬನ್’ ಎಂಬ ರೇಡಿಯೊ ಕಾಲರ್ ಅಳವಡಿಸಿದ ಆನೆಯು ಮಾನಂದವಾಡಿ ಪಟ್ಟಣದ ಬೀದಿಗಳಲ್ಲಿ 16 ಗಂಟೆ ಗಳಿಗೂ ಹೆಚ್ಚು ಕಾಲ ಸಂಚರಿಸಿತ್ತು. ಆನೆ ಕರ್ನಾಟಕಕ್ಕೆ ಸ್ಥಳಾಂತರಗೊಂಡ ಬಳಿಕ ಮೃತಪಟ್ಟಿತ್ತು.

Read More
Next Story