Election 2024: ಎಂವಿಎಯಿಂದ ಸೀಟು ಒಪ್ಪಂದ ಘೋಷಣೆ
x
ಮುಂಬೈನಲ್ಲಿ ಮಂಗಳವಾರ ನಡೆದ ಮಹಾ ವಿಕಾಸ್ ಅಘಾಡಿ (ಎಂವಿಎ) ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ, ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್, ಬಾಳಾಸಾಹೇಬ್ ಥೋರಟ್, ಶರದ್ ಪವಾರ್ ಮತ್ತು ಜಯಂತ್ ಪಾಟೀಲ್ ಹಾಜರಿದ್ದರು.

Election 2024: ಎಂವಿಎಯಿಂದ ಸೀಟು ಒಪ್ಪಂದ ಘೋಷಣೆ

ಶಿವಸೇನೆ (ಯುಬಿಟಿ) 21, ಕಾಂಗ್ರೆಸ್ 17 ಮತ್ತು ಎನ್‌ಸಿಪಿ (ಎಸ್‌ಪಿ) 10 ಸ್ಥಾನಗಳಲ್ಲಿ ಸ್ಪರ್ಧೆ


ಏಪ್ರಿಲ್‌ 9- ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ವಾಗಿ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಿದೆ. ಇಂಡಿಯ ಒಕ್ಕೂಟದ ಭವಿಷ್ಯ ಕುರಿತ ಉದ್ವಿಗ್ನತೆ ನಿವಾರಣೆಯಾಗಿದೆ. ರಾಜ್ಯದಲ್ಲಿ ಶಿವಸೇನೆ (ಯುಬಿಟಿ) 21, ಕಾಂಗ್ರೆಸ್ 17 ಮತ್ತು ಎನ್‌ಸಿಪಿ (ಎಸ್‌ಪಿ) 10 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಹಲವು ವಾರಗಳ ಮಾತುಕತೆ ನಂತರ, ಎನ್ಸಿಪಿ(ಎಸ್ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸೀಟು ಹಂಚಿಕೆ ಒಪ್ಪಂದವನ್ನು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಭಿವಂಡಿ, ಸಾಂಗ್ಲಿ ಬಿಕ್ಕಟ್ಟು ಪರಿಹಾರ: ಶಿವಸೇನೆ (ಯುಬಿಟಿ) ಮುಂಬೈನ ಆರು ಸ್ಥಾನಗಳಲ್ಲಿ ನಾಲ್ಕರಲ್ಲಿ ಸ್ಪರ್ಧಿಸಲಿದೆ(ಮುಂಬೈ ವಾಯವ್ಯ, ದಕ್ಷಿಣ ಮಧ್ಯ, ದಕ್ಷಿಣ ಮತ್ತು ಆಗ್ನೇಯ), ಕಾಂಗ್ರೆಸ್ ಉಳಿದ ಉತ್ತರ ಮತ್ತು ಉತ್ತರ ಮಧ್ಯ ಮುಂಬೈನಲ್ಲಿ ಕಣಕ್ಕೆ ಇಳಿಯಲಿದೆ.

ಮಿತ್ರಪಕ್ಷಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದ್ದ ಭಿವಂಡಿ ಮತ್ತು ಸಾಂಗ್ಲಿ ಸ್ಥಾನಗಳನ್ನು ಕ್ರಮವಾಗಿ ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ)ಗೆ ನೀಡಲಾಗಿದೆ. ಮೂರೂ ಮಿತ್ರಪಕ್ಷಗಳು ಈ ಕ್ಷೇತ್ರಗಳಿಗೆ ಬೇಡಿಕೆ ಇರಿಸಿದ್ದರಿಂದ, ಮೈತ್ರಿ ಅಪಾಯಕ್ಕೆ ಸಿಲುಕಿತ್ತು. ಮಾತುಕತಡಯಲ್ಲಿ ಪ್ರಗತಿ ಕಾಣಿಸದ ಕಾರಣ, ಠಾಕ್ರೆ ಅವರು ಮಾರ್ಚ್ ಕೊನೆಯ ವಾರದಲ್ಲಿ ಸಾಂಗ್ಲಿ ಸೇರಿದಂತೆ 16 ಸ್ಥಾನಗಳಿಗೆ ಅಭ್ಯರ್ಥಿ ಗಳನ್ನು ಘೋಷಿಸಿದ್ದರು. ಆನಂತರ, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿಯು ಇಂಡಿಯಾ ಒಕ್ಕೂಟದಿಂದ ಹೊರನಡೆದು, ಎಂಟು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ‌ʻಪವಾರ್ ಮತ್ತು ಠಾಕ್ರೆ ಅವರು ಮೈತ್ರಿ ಬಗ್ಗೆ ಗಂಭೀರವಾಗಿಲ್ಲ. ಅವರಲ್ಲಿ ನಾವು ನಂಬಿಕೆ ಕಳೆದುಕೊಂಡಿದ್ದೇವೆʼ ಎಂದು ದೂರಿದ್ದರು.

ಸಮಸ್ಯೆ ಬಗೆಹರಿದಿದೆ: ʻಸಮಸ್ಯೆಯನ್ನು ಈಗ ಪರಿಹರಿಸಲಾಗಿದೆ. ಬಿಜೆಪಿಯನ್ನು ಹೊರಹಾಕುವುದು ನಮ್ಮಗುರಿ. ಈ ನಿಟ್ಟಿನಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆʼ ಎಂದು ಪಟೋಲೆ ಹೇಳಿದರು.

ಠಾಕ್ರೆ ಮಾತನಾಡಿ,ʻನಾವು ಮುಂದುವರಿಯಬೇಕಾದ ಸಮಯ ಬಂದಿದೆ. ಚುನಾವಣೆಯಲ್ಲಿ ಗೆಲ್ಲುವ ಗುರಿಯೊಂದಿಗೆ ಈ ಒಪ್ಪಂದಕ್ಕೆ ಬಂದಿದ್ದೇವೆ. ಇನ್ನು ಜನರು ನಿರ್ಧರಿಸುತ್ತಾರೆʼ ಎಂದು ಹೇಳಿದರು.

ʻತಮ್ಮ ಪಕ್ಷವು ತನ್ನ ಪಾಲಿನ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಲಿದೆʼ ಎಂದು ಪವಾರ್ ಹೇಳಿದ್ದಾರೆ

ರಾಜ್ಯದ 48 ಸ್ಥಾನಗಳಿಗೆ ಚುನಾವಣೆಯು ಏಪ್ರಿಲ್ 19 ರಿಂದ ಮೇ 20 ರವರೆಗೆ ಐದು ಹಂತಗಳಲ್ಲಿ ನಡೆಯಲಿದೆ.

.

Read More
Next Story