ರಾಜ್‌ ಕುಂದ್ರಾಗೆ ಇಡಿ ಬಿಗಿಹಿಡಿತ; ತನಿಖೆಗೆ ಹಾಜರಾಗಲು ಸೂಚನೆ
x
Raj Kundra

ರಾಜ್‌ ಕುಂದ್ರಾಗೆ ಇಡಿ ಬಿಗಿಹಿಡಿತ; ತನಿಖೆಗೆ ಹಾಜರಾಗಲು ಸೂಚನೆ

ಡಿಸೆಂಬರ್ 29 ರಂದು ಮುಂಬೈನ ಕುಂದ್ರಾ ಅವರಿಗೆ ಸೇರಿದ್ದ ಜಾಗ ಮತ್ತು ಉತ್ತರ ಪ್ರದೇಶದ ಕೆಲವು ನಗರಗಳಲ್ಲಿರುವ ಇತರ ವ್ಯಕ್ತಿಗಳ ನಿವಾಸಗಳ ಮೇಲೆ ಕೇಂದ್ರ ಸಂಸ್ಥೆ ದಾಳಿ ನಡೆಸಿತು.


ಅಶ್ಲೀಲ ಚಿತ್ರಗಳ ಅಕ್ರಮ ವಿತರಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಈ ವಾರ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಕುಂದ್ರಾ ಅವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಕೆಲವರಿಗೂ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 29 ರಂದು ಮುಂಬೈನ ಕುಂದ್ರಾ ಅವರಿಗೆ ಸೇರಿದ್ದ ಜಾಗ ಮತ್ತು ಉತ್ತರ ಪ್ರದೇಶದ ಕೆಲವು ನಗರಗಳಲ್ಲಿರುವ ಇತರ ವ್ಯಕ್ತಿಗಳ ನಿವಾಸಗಳ ಮೇಲೆ ಕೇಂದ್ರ ಸಂಸ್ಥೆ ದಾಳಿ ನಡೆಸಿತು.

ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ತನಿಖೆಯಲ್ಲಿ ಸಹಕರಿಸುತ್ತಿದ್ದೇನೆ ಎಂದು ಕುಂದ್ರಾ ಶನಿವಾರ ಹೇಳಿದ್ದರು.

ಮೇ 2022ರಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಕುಂದ್ರಾ ಮತ್ತು ಇತರರ ವಿರುದ್ಧ ಕನಿಷ್ಠ ಎರಡು ಎಫ್‌ಐಆರ್‌ಗಳನ್ನು ಮುಂಬೈ ಪೊಲೀಸರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಉದ್ಯಮಿ ಮತ್ತು ಇತರ ಕೆಲವರನ್ನು ಬಂಧಿಸಿ ನಂತರ ಜಾಮೀನು ನೀಡಲಾಗಿದೆ.

ಕುಂದ್ರಾ ವಿರುದ್ಧದ ಎರಡನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಈ ವರ್ಷದ ಆರಂಭದಲ್ಲಿ, ಕ್ರಿಪ್ಟೋಕರೆನ್ಸಿ ಪ್ರಕರಣದಲ್ಲಿ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ 98 ಕೋಟಿ ರೂ.ಗಳ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ದಂಪತಿ ಬಳಿಕ ಬಾಂಬೆ ಹೈಕೋರ್ಟ್‌ ಮ ಊಲಕ ಪರಿಹಾರ ಕಂಡುಕೊಂಡಿದ್ದರು.

ಅಶ್ಲೀಲ ಚಿತ್ರಗಳ ದಂಧೆಯಲ್ಲಿ ಬಳಸಲಾದ 'ಹಾಟ್‌ಶಾಟ್‌' ಅಪ್ಲಿಕೇಶನ್ ಪ್ರಕರಣದಲ್ಲಿ ತಾವು ಭಾಗಿಯಾಗಿವು ಯಾವ ಸುಳಿವೂ ಇಲ್ಲ ಎಂಬುದಾಗಿ ಕುಂದ್ರಾ ಕೋರ್ಟ್‌ ಮುಂದೆ ವಾದಿಸಿದ್ದರು. ಆದರೆ ತನಿಖಾ ಸಂಸ್ಥೆಯ ಪ್ರಕಾರ, ಅಶ್ಲೀಲ ವಿಡಿಯೊ ಅಪ್ಲೋಡ್ ಮಾಡಲು ಮತ್ತು ಸ್ಟ್ರೀಮ್‌ ಮಾಡಲು ಆರೋಪಿಗಳು 'ಹಾಟ್ಶಾಟ್ಸ್' ಅಪ್ಲಿಕೇಶನ್ ಬಳಸುತ್ತಿದ್ದರು.

ಇಬ್ಬರು ಮಹಿಳೆಯರು ಕುಂದ್ರಾ ಹಾಗೂ ಇತರರ ವಿರುದ್ಧ ದೂರು ನೀಡಿದ್ದ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

Read More
Next Story