ಬಿಜೆಪಿಯ ಬೇಟೆ ಯತ್ನ ಹೇಳಿಕೆ: ಅತಿಶಿಗೆ ಇಸಿ ನೋಟಿಸ್
x

ಬಿಜೆಪಿಯ 'ಬೇಟೆ' ಯತ್ನ ಹೇಳಿಕೆ: ಅತಿಶಿಗೆ ಇಸಿ ನೋಟಿಸ್


ನವದೆಹಲಿ, ಏ. 5- ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರಿಗೆ ನೋಟಿಸ್ ನೀಡಿರುವ ಚುನಾವಣಾ ಆಯೋಗ, ಪಕ್ಷಕ್ಕೆ ಸೇರಬೇಕೆಂದು ತಮ್ಮನ್ನು ಬಿಜೆಪಿ ಸಂಪರ್ಕಿಸಿದೆ ಎಂಬ ಹೇಳಿಕೆಗೆ ಋಜುವಾತು ನೀಡುವಂತೆ ಕೇಳಿದೆ.

ಬಿಜೆಪಿ ತನ್ನ ನಿಕಟವರ್ತಿಗಳ ಮೂಲಕ ತನ್ನನ್ನು ಸಂಪರ್ಕಿಸಿ, ಪಕ್ಷವನ್ನು ಸೇರುವಂತೆ ಕೇಳಿಕೊಂಡಿದೆ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಚುನಾವಣೆ ಆಯೋಗಕ್ದಕೆ ದೂರು ನೀಡಿತ್ತು.

ಚುನಾವಣೆ ಆಯೋಗದ ನೋಟಿಸ್‌ನಲ್ಲಿ, ʻನೀವು ದೆಹಲಿಯ ಸರ್ಕಾರದ ಸಚಿವೆ ಮತ್ತು ರಾಷ್ಟ್ರೀಯ ಪಕ್ಷದ ನಾಯಕಿ. ಮತದಾರರು ತಮ್ಮ ನಾಯಕರು ಸಾರ್ವಜನಿಕ ವೇದಿಕೆಯಿಂದ ಹೇಳಿದ್ದನ್ನು ನಂಬುತ್ತಾರೆ; ಇಂಥ ಹೇಳಿಕೆಗಳು ಪ್ರಚಾರದ ಮೇಲೆ ಪರಿಣಾಮ ಬೀರುತ್ತವೆ ಎಂದು ಪರಿಗಣಿಸಬೇಕಾಗುತ್ತದೆ. ನಿಮ್ಮ ಹೇಳಿಕೆಗೆ ʻವಾಸ್ತವದ ಅಡಿಪಾಯʼ ಇರಬೇಕುʼ ಎಂದು ಹೇಳಿದೆ.

ಸೋಮವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀಡುವಂತೆ ಅತಿಶಿ ಅವರಿಗೆ ಸೂಚಿಸಲಾಗಿದೆ.

Read More
Next Story