ಕಾಂಗ್ರೆಸ್ ಬ್ಯಾಂಕ್ ಖಾತೆಯಲ್ಲಿ 115 ಕೋಟಿ ರೂ. ಇಲ್ಲ: ಮಾಕನ್
ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಕಾಂಗ್ರೆಸ್‌ನ ನಾಲ್ಕು ಬ್ಯಾಂಕ್ ಖಾತೆಗಳ ಬಳಕೆಗೆ ನಿರ್ಬಂಧವನ್ನು ತೆಗೆದುಹಾಕಿದೆ ಎಂದು ಪಕ್ಷದ ಖಜಾಂಚಿ ಅಜಯ್ ಮಾಕನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ಪಕ್ಷ ಬ್ಯಾಂಕ್‌ಗಳಲ್ಲಿ 115 ಕೋಟಿ ರೂ.ಠೇವಣಿ ಕಾಯ್ದುಕೊಳ್ಳಬೇಕಿದೆ ಎಂದು ಮಾಕನ್ ಹೇಳಿದ್ದಾರೆ. ತೆರಿಗೆ ಅಧಿಕಾರಿಗಳ ನಿರ್ದೇಶನದ ಪ್ರಕಾರ, 115 ಕೋಟಿ ರೂ.ಗಳನ್ನು ಖಾತೆಗಳಲ್ಲಿ ಕಾಯ್ದುಕೊಳ್ಳಬೇಕಿದೆ. ಫೆಬ್ರವರಿ 16 ರಂದು ಎಕ್ಸ್‌ನಲ್ಲಿ 'ಡೆಮಾಕ್ರಸಿ ಫ್ರೋಜನ್' ಎಂಬ ಹ್ಯಾಶ್ಸ್‌ಟ್ಯಾಗ್‌ನೊಂದಿಗೆ ಮಾಡಿಕ ಪೋಸ್ಟ್‌ನಲ್ಲಿ, ʻ ಐಟಿಎಟಿ ಪ್ರಕಾರ ನಾವು 115 ಕೋಟಿ ರೂ. ಬ್ಯಾಂಕ್‌ಗಳಲ್ಲಿ ಇಟ್ಟಿರಬೇಕು. ಅಂದರೆ, ಈ 115 ಕೋಟಿ ರೂ.ಗಳನ್ನು ಅಮಾನತಿನಲ್ಲಿ ಇಡಲಾಗಿದೆʼ ಎಂದು ಬರೆದಿದ್ದರು.
ತೆರಿಗೆ ಇಲಾಖೆಯು ಯುವ ಕಾಂಗ್ರೆಸ್ ಸೇರಿದಂತೆ ಅದರ ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದನ್ನು ʻಕ್ಷುಲ್ಲಕ ಆಧಾರದ ಮೇಲೆʼ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿತ್ತು.
ರಾಜ್ಯಸಭೆ ಸದಸ್ಯ ಮತ್ತು ಹಿರಿಯ ವಕೀಲ ವಿವೇಕ್ ತಂಖಾ ಅವರು ಐಟಿಎಟಿಯಲ್ಲಿ ಕಾಂಗ್ರೆಸ್ ಪರವಾಗಿ ಹಾಜರಾಗಿದ್ದರು. ಬುಧವಾರ (ಫೆಬ್ರವರಿ 21) ಮಧ್ಯಂತರ ಪರಿಹಾರ ಕೋರಿ ಸಲ್ಲಿಸಿದ್ದ ಮನವಿಯನ್ವಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅವಕಾಶ ನೀಡಿತು.
ರಾಜಕೀಯ ಪ್ರೇರಿತ: ಐಟಿ ಇಲಾಖೆಯ ಈ ಕ್ರಮವನ್ನು ʻಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹೊಡೆತʼ ಎಂದು ಮಾಕೆನ್ ಬಣ್ಣಿಸಿದ್ದಾರೆ. ಐಟಿ ಇಲಾಖೆ 2018-2019ರ ಆರ್ಥಿ ಕ ವರ್ಷಕ್ಕೆ 210 ಕೋಟಿ ರೂ. ತೆರಿಗೆ ಬೇಡಿಕೆ ಎತ್ತಿದೆ. ʻಈ ಕ್ರಮ ಪಕ್ಷದ ಚುನಾವಣಾ ಸಿದ್ಧತೆಗೆ ಅಡ್ಡಿಪಡಿಸಲು ಕಾರ್ಯತಂತ್ರʼ ಎಂದು ಕಾಂಗ್ರೆಸ್ ಹೇಳಿದೆ.
ʻಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಪ್ರಮುಖ ವಿರೋಧ ಪಕ್ಷವನ್ನು ಹತ್ತಿಕ್ಕಲಾಗಿದೆ. ನಾವು ನ್ಯಾಯಾಂಗ, ಮಾಧ್ಯಮ ಮತ್ತು ಜನರಿಂದ ನ್ಯಾಯ ಕೇಳುತ್ತೇವೆʼ ಎಂದು ಮಾಕನ್ ಸುದ್ದಿಗಾರರಿಗೆ ತಿಳಿಸಿದರು.
ʻನಾವು ಸಮಯಕ್ಕೆ ಸರಿಯಾಗಿ ತೆರಿಗೆ ಸಲ್ಲಿಸಿದ್ದೇವೆ. ನಿರ್ದಿಷ್ಟ ವರ್ಷದಲ್ಲಿ ನಮ್ಮ ಆದಾಯ 198 ಕೋಟಿ ರೂ. 115 ಕೋಟಿ ರೂ.ತೆರಿಗೆ ವಿಧಿಸಿರುವುದು ಹೇಗೆʼ ಎಂದು ವಿವೇಕ್ ತಂಖಾ ವಿಚಾರಣೆ ವೇಳೆ ಪ್ರಶ್ನಿಸಿದರು.