Supreme Court : ಚುನಾವಣೆ ಮುಗಿದರೂ ಇವಿಎಂ ಡೇಟಾ ಅಳಿಸುವಂತಿಲ್ಲ; ಸುಪ್ರೀಂ ಕೋರ್ಟ್​​
x
ಸುಪ್ರೀಂ ಕೋರ್ಟ್​​

Supreme Court : ಚುನಾವಣೆ ಮುಗಿದರೂ ಇವಿಎಂ ಡೇಟಾ ಅಳಿಸುವಂತಿಲ್ಲ; ಸುಪ್ರೀಂ ಕೋರ್ಟ್​​

Supreme Court : ಇವಿಎಂನಿಂದ ಯಾವುದೇ ದತ್ತಾಂಶವನ್ನು ಅಳಿಸಬೇಡಿ ಅಥವಾ ಯಾವುದೇ ದತ್ತಾಂಶವನ್ನು ಲೋಡ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿವರವಾಗಿ ಹೇಳಿದೆ.


ನವದೆಹಲಿ: ಚುನಾವಣೆ ಮುಗಿದ ತಕ್ಷಣವೇ ಇವಿಎಂ ಡೇಟಾಗಳನ್ನು ಅಳಿಸಬಾರದು ಎಂದು ಸುಪ್ರೀಂ ಕೋರ್ಟ್(Supreme Court) ಚುನಾವಣಾ ಆಯೋಗಕ್ಕೆ(Election Commission) ಮಂಗಳವಾರ (ಫೆ.11) ಸೂಚನೆ ನೀಡಿದೆ. ಮತ ಎಣಿಕೆ ಮುಗಿದ ನಂತರವೂ ಮತ ಯಂತ್ರಗಳ ದತ್ತಾಂಶವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿ ಆಲಿಸಿದ ಕೋರ್ಟ್ ಈ ಆದೇಶ ಹೊರಡಿಸಿದೆ. ಸದ್ಯಕ್ಕೆ ಇವಿಎಂನಿಂದ ಯಾವುದೇ ದತ್ತಾಂಶವನ್ನು ಅಳಿಸಬೇಡಿ ಅಥವಾ ಯಾವುದೇ ದತ್ತಾಂಶವನ್ನು ಲೋಡ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿವರವಾಗಿ ಹೇಳಿದೆ.

ಇವಿಎಂ ಮೆಮೊರಿ ಮತ್ತು ಮೈಕ್ರೋ ಕಂಟ್ರೋಲರ್ ಅನ್ನು ಅಳಿಸುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಡಿಆ‌ರ್, ಹರಿಯಾಣ ಹಾಗೂ ಕಾಂಗ್ರೆಸ್‌ನ ಒಂದು ಗುಂಪು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ಎಡಿಆರ್ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಇವಿಎಂ ತಂತ್ರಾಂಶದಲ್ಲಿ ದೋಷವಿದ್ದರೆ ಅಥವಾ ತಿರುಚಿರುವ ಆರೋಪದ ಬಗ್ಗೆ ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ ಈ ಬಗ್ಗೆ ಪರೀಕ್ಷಿಸಲು ಕೋರಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇವಿಎಂ ಅನ್ನು ನಾಶಗೊಳಿಸುವುದಿಲ್ಲ ಎಂದು ಸಾಬೀತುಪಡಿಸಲು ಇವಿಎಂನ ಆಳಿಸಿದ ಮೆಮೊರಿ ಹಾಗೂ ಮೈಕ್ರೋ ಕಂಟ್ರೋಲರ್ ಅನ್ನು ಇಂಜಿನಿಯರ್ ಪರಿಶೀಲಿಸಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದರು. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 3 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Read More
Next Story