Kolkota Doctor rape-murder: ಪ್ರಾಂಶುಪಾಲರಿಗೆ ದೀರ್ಘ ರಜೆಗೆ ಹೈಕೋರ್ಟ್ ಸೂಚನೆ
x

Kolkota Doctor rape-murder: ಪ್ರಾಂಶುಪಾಲರಿಗೆ ದೀರ್ಘ ರಜೆಗೆ ಹೈಕೋರ್ಟ್ ಸೂಚನೆ


ಆರ್.ಜಿ. ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರಿಗೆ ದೀರ್ಘ ರಜೆ ತೆಗೆದುಕೊಳ್ಳುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ (ಆಗಸ್ಟ್ 13) ಆದೇಶಿಸಿದೆ.

ಡಾ. ಘೋಷ್ ಸೋಮವಾರ ರಾಜೀನಾಮೆ ನೀಡಿದ್ದು, ʻಮೃತ ಹುಡುಗಿ ನನ್ನ ಮಗಳಂತೆ. ಪೋಷಕನಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ,ʼ ಎಂದು ಘೋಷಿಸಿದರು. ಆದರೆ, ಅವರನ್ನು ಕೆಲವೇ ಗಂಟೆಗಳಲ್ಲಿ ಕಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ನೇಮಕಗೊಳಿಸಲಾಯಿತು. ಆರ್‌.ಜಿ. ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕೇಸ್‌ ಡೈರಿಯನ್ನು ಮಧ್ಯಾಹ್ನ 1 ಗಂಟೆಯೊಳಗೆ ನೀಡಬೇಕೆಂದು ನ್ಯಾಯಾಲಯ ಕೇಳಿದೆ.

ʻಒಂದುವೇಳೆ ಪ್ರಾಂಶುಪಾಲರು ನೈತಿಕ ಹೊಣೆಗಾರಿಕೆ ಹೊತ್ತು ಕೆಳಗಿಳಿದಿದ್ದರೆ, ಅವರಿಗೆ 12 ಗಂಟೆಯೊಳಗೆ ಮತ್ತೊಂದು ಹುದ್ದೆಗೆ ನೇಮಕ ಗೊಳಿಸಿರುವುದು ಗಂಭೀರ ವಿಷಯ,ʼ ಎಂದು ನ್ಯಾಯಾಲಯ ಹೇಳಿದೆ.

ʻಪ್ರಾಂಶುಪಾಲರು ಅಲ್ಲಿ ಕೆಲಸ ಮಾಡುವ ಎಲ್ಲಾ ವೈದ್ಯರ ಪಾಲಕರು. ಅವರು ಸಹಾನುಭೂತಿ ತೋರಿಸಲು ವಿಫಲರಾದರೆ, ಬೇರೆ ಯಾರು ತೋರಿಸುತ್ತಾರೆ ? ಆತ ಎಲ್ಲಿಯೂ ಕೆಲಸ ಮಾಡದೆ, ಮನೆಯಲ್ಲೇ ಇರಬೇಕು,ʼ ಎಂದು ಹೇಳಿದೆ.

ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ʻಜನನಾಂಗದ ಚಿತ್ರಹಿಂಸೆʼಗೆ ಒಳಪಡಿಸಲಾಗಿದೆ ಎಂದು ಹೇಳಿದೆ.

ಆರು ದಿನಗಳ ಗಡುವು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶಾದ್ಯಂತ ಪ್ರತಿಭಟನೆಯನ್ನು ಪ್ರೇರೇಪಿಸಿದ ಘೋರ ಅಪರಾಧ ಪ್ರಕರಣವನ್ನು ಪರಿಹರಿಸಲು ಪೊಲೀಸರಿಗೆ ಆರು ದಿನಗಳ ಗಡುವು ನಿಗದಿಪಡಿಸಿದ್ದಾರೆ.

Read More
Next Story