ಮತಗಟ್ಟೆ ನಿರ್ದಿಷ್ಟ ಮತದಾನದ ಪ್ರಮಾಣ ಬಹಿರಂಗದಿಂದ ಗೊಂದಲ: ಚುನಾವಣೆ ಆಯೋಗ
ಮತದಾನದ ದಿನದಂದು ಮತ್ತು ಆನಂತರದ ಪತ್ರಿಕೆಗಳಲ್ಲಿ ಪ್ರಕಟವಾದ ಮತದಾನದ ಅಂಕಿಅಂಶಗಳಲ್ಲಿ ಶೇ.5-6 ಹೆಚ್ಚಳ ಕಂಡುಬಂದಿದೆ ಎಂಬುದು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂಥದ್ದು ಎಂದು ಚುನಾವಣೆ ಆಯೋ ಗ ಹೇಳಿದೆ.
ಮತದಾನದ ಮತಗಟ್ಟೆವಾರು ಅಂಕಿಅಂಶಗಳನ್ನು ಬಹಿರಂಗಪಡಿಸುವುದರಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಗೊಂದಲಕ್ಕೆ ಕಾರಣವಾಗಲಿದೆ ಎಂದು ಚುನಾವಣೆ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಮತದಾನದ ದಿನ ಬಿಡುಗಡೆಯಾದ ಅಂಕಿಅಂಶಗಳಲ್ಲಿ ಶೇ.5ರಿಂದ 6 ಹೆಚ್ಚಳವಾಗಿದೆ ಎಂಬ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಆರೋಪಗಳನ್ನು ಆಯೋಗ ತಳ್ಳಿಹಾಕಿದೆ.
ಬಹಿರಂಗಪಡಿಸುವಿಕೆಯಿಂದ ಕಿಡಿಗೇಡಿತನದ ಸಾಧ್ಯತೆ: ಫಾರ್ಮ್ 17ಸಿ(ಒಂದು ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ನೀಡುತ್ತದೆ)ಯ ವಿವೇಚನಾರಹಿತ ಮತ್ತು ಸಾರ್ವಜನಿಕ ಬಹಿರಂಗಪಡಿಸುವಿಕೆಗೆ ಶಾಸನಾತ್ಮಕ ಅನುಮತಿಯಿಲ್ಲ ಮತ್ತು ಚಿತ್ರಗಳನ್ನು ತಿರುಚುವ ಮಾಡುವ ಸಾಧ್ಯತೆ ಇರುವುದರಿಂದ ಇಡೀ ಚುನಾವಣಾ ಪ್ರಕ್ರಿಯೆ ಹಾಳಾಗುವ ಸಾಧ್ಯತೆಯಿದೆ ಎಂದು ಆಯೋಗ ಹೇಳಿದೆ.
ಲೋಕಸಭೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗೆ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ಜಾಲತಾಣದಲ್ಲಿ ಅಳವಡಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಆಯೋಗ ಈ ವಿಷಯ ತಿಳಿಸಿದೆ. ʻಅರ್ಜಿದಾರರ ಕೋರಿಕೆಗೆ ಅನುಮತಿಸಿದರೆ, ಈಗಾಗಲೇ ಚಾಲನೆಯಲ್ಲಿರುವ ಸಾರ್ವತ್ರಿಕ ಚುನಾವಣೆ ಯಂತ್ರದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ ಎಂದು ಚುನಾವಣೆ ಆಯೋಗ ತನ್ನ 225 ಪುಟಗಳ ಪ್ರಮಾಣಪತ್ರದಲ್ಲಿ ಹೇಳಿದೆ.
ಮತ ಚಲಾವಣೆ ಮೇಲೆ ಸುಳ್ಳು ಆರೋಪ: ಎನ್‌ಜಿಒ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್, 2019 ರ ಲೋಕಸಭೆ ಚುನಾ ವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಥವಾ ಮತದಾರರು ಚುನಾವಣಾ ಅರ್ಜಿಯನ್ನು ಸಲ್ಲಿಸಿದ ಒಂದೇ ಒಂದು ಉದಾಹರಣೆ ಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಆಯೋಗ ಹೇಳಿದೆ.
ʻಮುಖ್ಯ ಅರ್ಜಿ ಮತ್ತು ಪ್ರಸ್ತುತ ಅರ್ಜಿಯಲ್ಲಿ ಅರ್ಜಿದಾರರು ಮಾಡಿದ ಮತದಾರರ ಮತದಾನದ ಅಂಕಿಅಂಶದಲ್ಲಿನ ವ್ಯತ್ಯಾಸಗಳ ಆರೋಪವು ತಪ್ಪುದಾರಿಗೆಳೆಯುವಂಥದ್ದು, ಸುಳ್ಳು ಮತ್ತು ಕೇವಲ ಅನುಮಾನವನ್ನು ಆಧರಿಸಿದೆ ʼ ಎಂದು ಆಯೋಗ ಹೇಳಿದೆ. ʻಫಾರ್ಮ್ 17ಸಿಯ ನಕಲನ್ನು ಮತದಾನದ ಮುಕ್ತಾಯದ ಸಮಯದಲ್ಲಿ ಮತಗಟ್ಟೆ ಏಜೆಂಟ್‌ಗೆ ನೀಡಲಾಗುತ್ತದೆ. ಶಾಸನಾತ್ಮಕ ಚೌಕಟ್ಟಿನಲ್ಲಿ ಅರ್ಜಿದಾರರು ಕೋರಿದ ಸ್ವರೂಪದ ಸಾಮಾನ್ಯ ಬಹಿರಂಗಪಡಿಸುವಿಕೆ ಸಾಧ್ಯವಿಲ್ಲ.17 ಸಿ ಮೂಲ ನಮೂನೆ ಸ್ಟ್ರಾಂಗ್ ರೂಮ್‌ನಲ್ಲಿರುತ್ತದೆ ಮತ್ತು ಅದರ ಪ್ರತಿ ಮತಗಟ್ಟೆ ಏಜೆಂಟರ ಬಳಿ ಇರುತ್ತದೆʼ ಎಂದು ಆಯೋಗ ಹೇಳಿದೆ.
ಫಾರ್ಮ್ 17ಸಿ ಪ್ರತಿಯನ್ನುನೀಡುವುದಿಲ್ಲ: ʻ2024 ರ ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನದ ಡೇಟಾವನ್ನು ಅರ್ಜಿದಾರರು ಅವಲಂಬಿಸಿದ್ದಾರೆ. ಮತದಾನದ ದಿನದಂದು ಬಿಡುಗಡೆಯಾದ ಅಂಕಿಅಂಶ ಮತ್ತು ನಂತರ ಪತ್ರಿಕಾ ಪ್ರಕಟಣೆಗಳಲ್ಲಿ ಎರಡು ಹಂತದಲ್ಲಿ ಶೇ.ಐದು ಆರು ಹೆಚ್ಚಳವಾಗಿದೆ ಎನ್ನುವ ಆರೋಪವು ತಪ್ಪುದಾರಿಗೆಳೆಯುವಂಥದ್ದು ಮತ್ತು ಆಧಾರರಹಿತ. ಫಾರ್ಮ್ 17ಸಿ ಪ್ರತಿಯನ್ನು ಬೇರೆ ಯಾವುದೇ ಘಟಕಕ್ಕೆ ನೀಡಲು ನಿಯಮ ಅನುಮತಿಸುವುದಿಲ್ಲ,ʼ ಎಂದು ಆಯೋಗ ಹೇಳಿದೆ.
ಮನವಿಯಲ್ಲಿ ಏನಿದೆ?: ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗೆ ಆಯೋಗ ತನ್ನ ಜಾಲತಾಣದಲ್ಲಿ ಮತಗಟ್ಟೆವಾರು ಅಂಕಿಅಂಶಗಳನ್ನು ಅಳವಡಿಸಲು ನಿರ್ದೇಶನ ನೀಡಬೇಕೆಂದು ಕೋರಿ ಎನ್‌ಜಿಒ ಮೇ 17 ರಂದು ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆಯೋಗದಿಂದ ಒಂದು ವಾರದೊಳಗೆ ಪ್ರತಿಕ್ರಿಯೆ ಕೇಳಿತ್ತು.
ಚುನಾವಣೆ ಅಕ್ರಮಗಳಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ಮನವಿ ಸಲ್ಲಿಸಲಾಗಿದೆ ಎಂದು ಎಡಿಆರ್ ಹೇಳಿದೆ. ʻಆಯೋಗ ಮೊದಲ ಹಂತದ ಮತದಾನದ ಅಂಕಿಅಂಶವನ್ನು 11 ದಿನಗಳ ನಂತರ ಹಾಗೂ ಎರಡನೇ ಹಂತದ ಅಂಕಿಅಂಶವನ್ನು ನಾಲ್ಕು ದಿನಗಳ ನಂತರ ಪ್ರಕಟಿಸಿದೆ. ಆರಂಭಿಕ ಅಂಕಿಸಂಖ್ಯೆಗೆ ಹೋಲಿಸಿದರೆ ಶೇಕಡಾವಾರು 5-6 ರಷ್ಟು ಹೆಚ್ಚಳ ಕಂಡುಬಂದಿದೆ. ಮತದಾನದ ಅಂಕಿಅಂಶಗಳ ಬಿಡುಗಡೆಯಲ್ಲಿ ʻಅತಿ ವಿಳಂಬʼ ಕಳವಳ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.