ಇತಿಹಾಸವನ್ನು ಅಗೆಯುವುದು ಭವಿಷ್ಯವನ್ನು ಸಮಾಧಿ ಮಾಡಿದಂತೆ
ನಾನಾ ಹಿಂದುತ್ವದ ಸಂಘಟನೆಗಳು ಹಾಗೂ ಕೇಸರಿ ಬಟ್ಟೆ ಧರಿಸಿದ ದ್ವೇಷದ ಮಾರಾಟಗಾರರು ಈ ಆಂದೋಲನಗಳ ನೇತೃತ್ವ ವಹಿಸಿದ್ದಾರೆ. ವಿರೋಧಿಸಿದರೆ ರಾಷ್ಟ್ರ ವಿರೋಧಿ ಪಟ್ಟ ಖಚಿತ
ಇತಿಹಾಸದಲ್ಲಿ ಮುಸ್ಲಿಂ ದೊರೆಗಳ ಆಕ್ರಮಣಕಾರರಿಂದ ನೆಲಸಮಗೊಂಡ ಪ್ರಾರ್ಥನಾ ಸ್ಥಳಗಳನ್ನು ಪುನಃಸ್ಥಾಪಿಸಲು ಮತ್ತು ಹಿಂದೂ ಹೆಮ್ಮೆಯನ್ನು ಮರಳಿ ಪಡೆಯಲು ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಸೀದಿಗಳನ್ನು ಉರುಳಿಸಿ ಆ ಜಾಗದಲ್ಲಿ ದೇವಾಲಯಗಳನ್ನು ನಿರ್ಮಿಸಲು ಅನೇಕ ಆಂದೋಲನಗಳು ಆರಂಭಗೊಂಡಿವೆ.
ನಾನಾ ಹಿಂದುತ್ವದ ಸಂಘಟನೆಗಳು ಹಾಗೂ ಕೇಸರಿ ಬಟ್ಟೆ ಧರಿಸಿದ ದ್ವೇಷದ ಮಾರಾಟಗಾರರು ಈ ಆಂದೋಲನಗಳ ನೇತೃತ್ವ ವಹಿಸಿದ್ದಾರೆ. ವಿರೋಧಿಸಿದರೆ ರಾಷ್ಟ್ರ ವಿರೋಧಿ ಪಟ್ಟ ಖಚಿತ. "ರಾಷ್ಟ್ರವಿರೋಧಿ" ಎಂಬ ಪದವನ್ನು ಅದರ ಅರ್ಧವೇ ನಷ್ಟವಾಗುವಷ್ಟು ಮಟ್ಟಿಗೆ ಬಳಸಲಾಗುತ್ತಿದೆ. ಇವೆಲ್ಲ ಯಾಕೆ ಎಂದು ಕೇಳಿದರೆ ಐತಿಹಾಸಿಕ ಪ್ರಮಾದವನ್ನು ಸರಿ ಪಡಿಸುವುದು ಎಂದು ಹೇಳುತ್ತಾರೆ.
ಅನೈತಿಕ ಮತ್ತು ಸಂವಿಧಾನಕ್ಕೆ ವಿರೋಧ
ಸಂಘರ್ಷ ಮತ್ತು ಬಲಪ್ರಯೋಗವನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ತಪ್ಪಿಸಲು ಸಾಧ್ಯವಿಲ್ಲ. ಒಬ್ಬ ಮನುಷ್ಯನು ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡು ಚಾಕು ಹಿಡಿದು ಹಿಂಸಾಕೃತ್ಯಕ್ಕೆ ಇಳಿದರೆ ಆತನನ್ನು ಬಗ್ಗುಬಡಿಯಬೇಕು. ಈ ಪ್ರಕ್ರಿಯೆಯಲ್ಲಿ ಆತ ಸಾಯಬಹುದು. ಇಲ್ಲಿ ಬಲಪ್ರಯೋಗ ಸಮರ್ಥನೀಯ. ಆದರೆ ನಿರ್ದಿಷ್ಟ ನಂಬಿಕೆಯ ಜನರು ಪ್ರಾರ್ಥಿಸುವ ಕಟ್ಟಡವನ್ನು ಒಡೆಯುವುದು ಅವರ ಜೀವನವನ್ನು ಅಡ್ಡಿಪಡಿಸುವುದು, ಅವರನ್ನು ಅವಮಾನಿಸುವುದು ಅಪಾಯ. ಅವರು ಶಕ್ತಿಹೀನರು ಎಂದು ತೋರಿಸುವುದು ಮತ್ತು ರಾಜಕೀಯದಲ್ಲಿ ಕೆಳಮಟ್ಟದ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಬಿಂಬಿಸುವುದು ಮತ್ತು ಎರಡನೇ ದರ್ಜೆಯ ನಾಗರಿಕರು ಎನ್ನುವುದು ಕೂಡ ಅನ್ಯಾಯ.
ಇವೆಲ್ಲವೂ ಅನೈತಿಕ. ಇದು ನಂಬಿಕೆ ಮತ್ತು ಧರ್ಮದಿಂದ ಹೊರತಾಗಿ ನೋಡಬೇಕಾದ ಸಮಾನತೆ ಮತ್ತು ಪೌರತ್ವದ ಕಲ್ಪನೆಗೆ ವಿರುದ್ಧ. ಯಾಕೆಂದರೆ ಸಮಾನತೆ ತತ್ವದ ಆಧಾರದ ಮೇಲೆ ಸ್ವಾತಂತ್ರ್ಯ ಚಳವಳಿ ಆರಂಭಗೊಂಡಿತ್ತು,. ಆಧುನಿಕ ಭಾರತವನ್ನು ನಿರ್ಮಿಸಲು ಅದೇ ತಳಪಾಯದಲ್ಲಿ ಪ್ರಯತ್ನಿಸಲಾಗಿತ್ತು. ಒಂದೇ ಗಡಿಯ ಭೂಪ್ರದೇಶದಲ್ಲಿ ಒಟ್ಟಿಗೆ ವಾಸಿಸುವ ವಿವಿಧ ಗುಂಪುಗಳ ವೈವಿಧ್ಯಮಯದ ಸಂಕೇತ. ಇಲ್ಲಿ ವಿಭಿನ್ನ ನಂಬಿಕೆಗಳನ್ನು ಅನುಸರಿಸಲಾಗುತ್ತದೆ. ವೈವಾಹಿಕ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ.
ಸಮಯ, ಶಕ್ತಿ ವ್ಯರ್ಥ
ಮಧ್ಯಪ್ರಾಚ್ಯ ಮತ್ತು ಕರಾವಳಿ ಕೇರಳದ ನಡುವಿನ ವಾಣಿಜ್ಯ ಮತ್ತು ಬೌದ್ಧಿಕ ಸಂವಹನದ ಭಾಗವಾಗಿ ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮವು ಕೇರಳಕ್ಕೆ ಪ್ರವೇಶಿಸಿತು. ಆದರೆ ಮುಸ್ಲಿಂ ಆಕ್ರಮಣಕಾರರ ವಿಜಯಗಳ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮವು ಉತ್ತರ ಭಾರತಕ್ಕೆ ದಾರಿ ಕಂಡುಕೊಂಡಿತು. ಆಕ್ರಮಣಕಾರರು ತಾವು ಗೆದ್ದ ಜನರ ಮೇಲೆ ತಮ್ಮನ್ನು ತಾವು ಹೇರಿಕೊಳ್ಳುತ್ತಾರೆ. ಕೆಲವು ಸ್ಥಳೀಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಗಿದೆ ಎಂದು ಊಹಿಸಬಹುದು.
ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಹೋಗುವವರು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಾರೆ. ಅವು ಸಾಮಾಜಿಕ ಸಾಮರಸ್ಯ ನಾಶಪಡಿಸುತ್ತವೆ. ಅಲ್ಪಸಂಖ್ಯಾತ ಸಮುದಾಯಗಳ ಭದ್ರತೆಗೆ ಅಪಾಯವನ್ನುಂಟುಮಾಡುತ್ತಾರೆ.
ಇತಿಹಾಸವನ್ನು ಮರೆತು ಮುನ್ನಡೆಯಬೇಕು
ಇತಿಹಾಸದಲ್ಲಿ ನಡೆದ ದೌರ್ಜನ್ಯಗಳನ್ನು ತಿದ್ದಲು ಸಾಧ್ಯವೇ ಇಲ್ಲ. ರಾಮನ ಕೈಯಿಂದ ಶಂಬೂಕನ ಹತ್ಯೆ ಅಥವಾ ದ್ರೋಣಾಚಾರ್ಯರು ಏಕಲವ್ಯನ ಕೈಬೆರಳು ಕೇಳಿದ ಅಪಮಾನಗಳು ಸರಿಪಡಿಸಲಾಗುವುದಿಲ್ಲ. ಹೀಗೆ ಹಿಂದೆ ನಡೆದಿರುವುದಕ್ಕೆ ಈಗ ಪರಿಹಾರ ಹೇಳಲು ಸಾಧ್ಯವಿಲ್ಲ. ಈ ರೀತಿಯ ಪ್ರಚೋದನೆಗಳಿಂದ ಉಂಟಾಗುವ ಹಾನಿ ನಮ್ಮ ಭವಿಷ್ಯವನ್ನು ಹಾಳುಮಾಡುತ್ತದೆ. ಪರಸ್ಪರ ಅವಲಂಬಿತ, ಜಾಗತೀಕರಣದ ಜಗತ್ತಿನಲ್ಲಿ, ಭಾರತದ ಐತಿಹಾಸಿಕ ತಪ್ಪುಗಳ ಪ್ರತೀಕಾರ ತೀರಿಸಿಕೊಳ್ಳುವವರು ರಾಜಕೀಯವಾಗಿ ಸಬಲರಾದವರಿಗೆ ಇನ್ನಷ್ಟು ಇಂಬು ಕೊಡುತ್ತಿದ್ದಾರೆ.